ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯಶ್ರೀ ಭಂಡಾರಿ

Must Read

ಬಾಗಲಕೋಟೆ –   ಜಿಲ್ಲಾ ಮಕ್ಕಳ ಸಾಹಿತ್ಯಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಾದಾಮಿಯ ಕವಿಯತ್ರಿ ಶ್ರೀಮತ್ತಿ ಜಯಶ್ರೀ ಭ ಭಂಡಾರಿ ಆಯ್ಕೆಯಾಗಿದ್ದಾರೆ

ಅವರ ಸಂಕ್ಷಿಪ್ತ ಕಿರು ಪರಿಚಯ ಈ ಲೇಖನ : ಚಾಲುಕ್ಯ ನಗರಿ ಬಾದಾಮಿಯ ಸಾಹಿತ್ಯಿಕ ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲ ಮನೋಭಾವದಿಂದ ತೊಡಗಿಸಿಕೊಂಡವರು ಕವಯಿತ್ರಿ ಜಯಶ್ರೀ ಭಂಡಾರಿಯವರು. ಅವರು ಲೇಖಕಿ ಕವಯಿತ್ರಿ ಎಂಬುದಕ್ಕಿ೦ತಲೂ ಹೆಚ್ಚಾಗಿ ಒಬ್ಬ ಒಳ್ಳೆಯ ಶಿಕ್ಷಕಿ ಎಂದೇ ಹೆಚ್ಚು ಪರಿಚಿತರು ಎಂ. ಎ. ಬಿ.ಇಡಿ ಪದವೀಧರೆಯಾದ ಅವರು ಕಳೆದ ಮೂರುವರೆ ದಶಕಗಳಿಂದ ಪ್ರೌಢಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಮುಖ್ಯೋಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಶಿಕ್ಷಣ, ಸಾಹಿತ್ಯ ಸಂಘಟನೆಗಳಲ್ಲಿ ಸಮಚಿತ್ತ ಭಾವದಿಂದ ಕಾರ್ಯಗೈಯುತ್ತ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ ಕವಯಿತ್ರಿ.

ಜಯಶ್ರೀ ಗಣಾಚಾರಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದವರು, ಜಯಶ್ರೀಯವರು ತಾಯಿಯ ತವರು ಮನೆ ರೋಣದಲ್ಲಿ ೧೯೬೬ರ ಮೇ ೨೭ ರಂದು ಜನಿಸಿದರು. ತಂದೆ ಗಂಗಯ್ಯ ಗಣಾಚಾರಿ,ತಾಯಿ ಗಂಗಮ್ಮ ತಂದೆಯವರು ಸುರೇಬಾನದ ಫಲಹಾರೇಶ್ವರ ಪ್ರೌಢಶಾಲೆಯಲ್ಲಿ ಹಿಂದೀ ವಿಷಯದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜಯಶ್ರೀಯವರ ಅಜ್ಜ ನೀಲಕಂಠ ಗಣಾಚಾರಿಯವರು ಸ್ವಾತಂತ್ರಯೋದರು ಹಾಗೂ ಗಾಂಧೀಜಿ ಮತ್ತು ವಿನೋಭಾರವರ ಜೊತೆ ಒಡನಾಟವನ್ನು ಹೊಂದಿದ್ದರು.ಇಂತಹ ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಜಯಶ್ರೀಯವರು ಸುರೇಬಾನದ ಸರಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಪಾಥಮಿಕ, ಫಲಹಾರೇಶ್ವರ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದರು. ನಂತರ ಅವರು ಬಾದಾಮಿಯ ವೀರಪುಲಕೇಶಿ ಪ.ಪೂ.ಕಾಲೇಜಿನಲ್ಲಿ ಪಿಯುಸಿಯನ್ನು ಅದೇ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.

ಅವರು ಹುಬ್ಬಳ್ಳಿಯಲ್ಲಿ ಬಿ.ಇಡಿಯನ್ನು ಪೂರೈಸಿ ೧೯೮೭ರಲ್ಲಿ ಬಾದಾಮಿ ತಾಲೂಕಿನ ಜಾಲಿಹಾಳದ ನೂತನ ಪ್ರೌಢಶಾಲೆಯಲ್ಲಿ ಹಿಂದಿ ವಿಷಯದ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು.
ಬಡಮಕ್ಕಳ ಪ್ರತಿಭೆಯನ್ನು ಗುರುತಿಸುವ ಜಯಶ್ರೀ ಯವರು ತಮ್ಮ ವಿಷಯದ ಪಾಠದ ಜೊತೆಗೆ ಮಕ್ಕಳಲ್ಲಿಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಶಿಕ್ಷಕಿಯಾಗಿ ಹೊರಹೊಮ್ಮಿದ್ದಾರೆ. ಸಧ್ಯ ಜಾಲಿಹಾಳದ ಸಿದ್ರಾಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ನೂತನ ಪ್ರೌಢಶಾಲೆಯಲ್ಲಿ ಮುಖ್ಯೋಧ್ಯಾಪಕಿಯಾಗಿ ಸೇವೆಸಲ್ಲಿಸುತ್ತಿರುವ ಅವರು ಶಿಸ್ತು ಸಮಯಪಾಲನೆ ಪಾಠ ಪಠ್ಯೇತರ ಚಟುವಟಿಕೆಗಳಲ್ಲಿ ಎಂದು ರಾಜಿ ಮಾಡಿಕೊಳ್ಳದ ಜಯಶ್ರೀಯವರು ತಮ್ಮ ಕರ್ತವ್ಯಬದ್ಧತೆಯ ಮೂಲಕವೇ ಗಮನ ಸೆಳೆದವರು. ತಾಯಿಯ ವಾತ್ಸಲ್ಯವನ್ನು ನೀಡಿ ವಿದ್ಯಾರ್ಥಿಗಳನ್ನು ಬೆಳೆಸಿದ ರೀತಿ ಸಹದ್ಯೋಗಿಗಳ ಜೊತೆ ಅನ್ಯೋನ್ಯತೆಯಿಂದ ಇದ್ದು, ಎಲ್ಲರನ್ನು ಸಮಾನವಾಗಿ ಕಂಡು ಪ್ರೌಢಶಾಲೆಯ ಪ್ರಗತಿಗಾಗಿ ಶರವೇಗದ ಹೆಜ್ಜೆಯನ್ನಿಟ್ಟವರು. ಶಾಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಶೈಕ್ಷಣಿಕ ಹಿರಿಮೆಗೆ ಅವರ ೧೯೮೫ರ ಜೂನ್ ೨೬ ರಂದು ಬಾದಾಮಿ ತಾಲೂಕಿನ ಬಾಚಿನಗುಡ್ಡದ ಭದ್ರಯ್ಯ ಭಂಡಾರಿ ಅವರನ್ನು ಮದುವೆಯಾದರು. ಅವರು ರ‍್ವರ ಮಕ್ಕಳು, ಮಗಳು, ನಿವೇದಿತಾ, ಮಗ ನವನೀತ ಇಬ್ಬರೂ ಸಾಫ್ಟವೇರ್ ಇಂಜಿನಿಯರರು.

ಅವರು ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಲವು ಕವನಗಳನ್ನು ರಚಿಸಿದ್ದರು ಜಯಶ್ರೀ ಭಂಡಾರಿಯವರು ಬಾದಾಮಿಗೆ ಬಂದು ನೆಲೆಸಿದ ನಂತರ ಸಾಹಿತ್ಯದಲ್ಲಿಯ ಆಸಕ್ತಿ ಮತ್ತಷ್ಟು ಬೆಳೆಯಿತು. ಕವಿ ಅಬ್ಬಾಸ ಮೇಲಿನಮನಿ ಮತ್ತು ವಿಜಯಕುಮಾರ ಕಟಗಿಹಳ್ಳಿಮಠ ಅವರು ಜಯಶ್ರೀಯವರ ಸಾಹಿತ್ಯದ ಬೆಳೆವಣಿಗೆಗೆ ಪ್ರೇರಣೆಯಾದರು. ಜಯಶ್ರೀಯವರು ೨೦೧೩ರಲ್ಲಿ ಪ್ರಥಮ ಕವನಸಂಕಲನ’ನನ್ನೊಲವಿನ ಹಾಡು’ ಕೃತಿಯನ್ನು ಹೊರತಂದಿದ್ದಾರೆ ನಂತರ ೨೦೧೮ರಲ್ಲಿ ಯಾವ ಜನ್ಮದ ಮೈತ್ರಿ ಮತ್ತು ಅಂತರಾಳ ಕೃತಿಗಳು ಪ್ರಕಟಗೊಂಟಿವೆ. ನನ್ನೊಲವಿನ ಹಾಡು ಕವನ ಸಂಕಲನದಲ್ಲಿ ದೇಶಾಭಿಮಾನ, ಕನ್ನಡ ನಾಡು-ನುಡಿ ಪ್ರೀತಿ ಉದ್ಯೋಗದಲ್ಲಿರುವ ಪತಿ ಪತ್ನಿಯರ ಅಳಲು, ವೃದ್ಧಾಪ್ಯದ ತುಮುಲ, ಅಣ್ಣಾ ಹಜಾರೆ, ಕಾರ್ಯಯೋಗಿ ಸಿದ್ಧಗಂಗಾ ಶ್ರೀಗಳು, ಸ್ವಾತಂತ್ರ ಯೋಧ ನೀಲಕಂಠ ಗಣಾಚಾರಿ ಮುಂತಾದ ಕವಿತೆಗಳಲ್ಲಿ ಜಯಶ್ರೀಯವರ ಕಾವ್ಯದ ವಸ್ತುಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು.ಮಗು, ಇರುಳ ಬೆಳದಿಂಗಳು ಅಸ್ತಮಾನ ಪ್ರಳಯ, ತಲ್ಲಣ,ಬರಗಾಲ ಯುಗಾದಿ ಕವನದ ಸಾಲುಗಳು ಅರ್ಥಗರ್ಭಿತವಾಗಿವೆ. ಯಾವ ಜನ್ಮದ ಮೈತ್ರಿ ಕವನಸಂಕಲದಲ್ಲಿ ಸ್ನೇಹ, ಪ್ರೀತಿ, ಅಂತ:ಕರಣ, ಸಾತ್ವಿಕ ಆಕ್ರೋಶ, ಬಂಡಾಯ, ಸಂಸಾರದ ಸಿಹಿಕಹಿ, ಸ್ತ್ರೀ ಪರ ಕಾಳಜಿ ಹೀಗೆ ಎಲ್ಲ ಬಗೆಯ ಭಾವಗಳನ್ನು ಕಾಣುತ್ತೇವೆ. ಅಪ್ಪನ ಪ್ರೀತಿ ಅಂತಃಕರಣ, ಪ್ರೇಮ, ತ್ಯಾಗಗಳ ಕುರಿತು ‘ನನ್ನ ಅಪ್ಪ ಕವಿತೆಯಲ್ಲಿ ಎದೆತುಂಬಿ ಬರೆದಿದ್ದಾರೆ ಬನಶಂಕರಿ ನೆಲ ಬಾದಾಮಿಯಲ್ಲೇ ಇರುವ ಕವಯಿತ್ರಿ ಬನಶಂಕರಿ ಕವನದ ಮೂಲಕ ಭಕ್ತಿಯನ್ನೂ ತೋರುತ್ತಾರೆ, ಜಯಶ್ರೀಯವರ ಅಂತರಾಳ ಕೃತಿಯನ್ನು ಅವಲೋಕಿಸಿದಾಗ ಕಾಲ್ಪನಿಕ, ವಾಸ್ತವಿಕ ಅನುಭವದಿಂದ ಮೂಡಿಬಂದ ಚೌಪದಿಗಳಲ್ಲಿ ಪ್ರೀತಿ, ದಯೆ, ಸ್ತ್ರೀ ಶಕ್ತಿ, ಕವಿ ಪುಂಗವರ ಸ್ಮರಣೆ, ಮನಸ್ಸು, ಸ್ಪೂರ್ತಿ ಮುಂತಾದ ವಿಷಯಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಪ್ರತಿಯೊಂದು ಚೌಪಧಿಯು ಅರ್ಥಪೂರ್ಣವಾಗಿ ಸರಳವಾಗಿ ನಿರಾತಂಕವಾಗಿ ಓದಿಸಿಕೊಡು ಹೋಗುತ್ತವೆ.

ಜಯಶ್ರೀ ಅವರು ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ .ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಟಗಿಸಿಕೊಂಡಿದ್ದಾರೆ. ಸಭೆ. ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದು ಅಚ್ಚುಕಟ್ಟಾದ ಆರ್ಯಕ್ರಮ ನಿರೂಪಣೆ ಅವರ ನೆಚ್ಚಿನ ಹವ್ಯಾಸಗಳಾಗಿವೆ ಸಂಯುಕ್ತ ಕರ್ನಾಟಕ, ವಿಜಯವಾಣಿ ಕನ್ನಡಪ್ರಭ ವಿಶ್ವವಾಣಿ ಉದಯವಾಣಿ, ಹೋಸ ದಿಗಂತ, ಕರ್ಮವೀರ, ಬಸವಪಥ ಸೇರಿದಂತೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ, ಕವನ, ಚುಟುಕು, ಬರಹಗಳು ಪ್ರಕಟಗೊಂಡು ನಾಡಿನ ಓದುಗರ ಗಮನ ಸೆಳೆದಿವೆ, ಅಲ್ಲದೇ ಅವರು ಸಾಹಿತ್ಯಸಕ್ತರ ವಿಮರ್ಶಾತ್ಮಕ ನುಡಿಗಳಿಗೆ ಭಾಜನರಾಗಿದ್ದಾರೆ, ವಿಜಯಪುರದ ಆಕಾಶವಾಣಿಯಲ್ಲಿ ಜಯಶ್ರೀ ಯವರ ಚಿಂತನ ಕಾರ್ಯಕ್ರಮಗಳು ಹಾಗೂ ಮಹಿಳಾ ರಂಗದಲ್ಲಿ ಸಂದರ್ಶನ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಅಲ್ಲದೇ ದೂರದರ್ಶನದ ಕಲ್ರ‍್ಸ ಸೂಪರ್ ವಾಹಿನಿಯಲ್ಲಿ ಸೂಪರ್ ದಂಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿರುವುದು ವಿಶೇಷ, ಅವರು ಪತಿ ಭದ್ರಯ್ಯ, ಮಗಳು ನಿವೇಧಿತಾ, ಅಳಿಯ ಅರುಣ, ಮಗ ನವನೀತ ಸೊಸೆ ಮೇಘಾ ಎಲ್ಲರ ಸಹಕಾರವನ್ನು ಸದಾ ಸ್ಮರಿಸುತ್ತಾರೆ.

ಕವಯಿತ್ರಿ ಜಯಶ್ರೀಯವರು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಗಣಿಸಿ, ಬಾಗಲಕೋಟೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದು ಅಷ್ಟೇ ಅಲ್ಲದೆ ನಾಡಿನ ಹಲವು ಸಂಘ- ಸಂಸ್ಥೆಗಳ ಪ್ರಶಸ್ತಿ- ಪುರಸ್ಕಾರಗಳನ್ನು ನೀಡಿ ಗೌರವಿಸಿವೆ, ಆದರ್ಶ ಶಿಕ್ಷಕಿ, ಬಸವ ಭೂಷಣ, ಅಕ್ಷರ ಲೋಕದ ನಕ್ಷತ್ರ ಹೀಗೆ ಹತ್ತು ಹಲವು ಪ್ರಶಸ್ತಿ- ಪುರಸ್ಕಾರಗಳ ಅವರನ್ನರಸಿಕೊಂಡು ಬಂದಿವೆ. ಕವಯಿತ್ರಿ ಜಯಶ್ರೀ ಭಂಡಾರಿ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಹಿತಿಗಳಲ್ಲಿ ಚಿರಕಾರ ನಿಲ್ಲುವಂಥ ಹೆಸರು. ಅವರ ವಿಚಾರ ಪೂರಿತ ಸಾಹಿತ್ಯ ದೀವಿಗೆ, ಶರಣ ಚಿಂತನೆಯ ನೆಲೆಗಳು, ಸದಾ ತುಡಿವ ಮಾನವೀಯ ಮೌಲ್ಯಗಳು ಸಮಾಜಕ್ಕೆ ಬೆಳಕಾಗಲಿ ಎಂದು ಆಶಿಸುತ್ತೇನೆ ಲೇಖಕರ ಮೊಬೈಲ್ ನಂಬರ ೭೦೨೨೭೬೨೭೮೦

ಜಗದೀಶ ಮಲ್ಲಪ್ಪ ಹದ್ಲಿ,                                      ತಿಮ್ಮಾಪುರ ತಾ. ಹುನಗುಂದ ಜಿಲ್ಲಾ ಬಾಗಲಕೋಟೆ

LEAVE A REPLY

Please enter your comment!
Please enter your name here

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...

More Articles Like This

error: Content is protected !!
Join WhatsApp Group