ಜಿಲ್ಲಾ ಕಸಾಪ ವತಿಯಿಂದ ಕವಿಗೋಷ್ಠಿ ಕಾರ್ಯಕ್ರಮ
ಕನ್ನಡ ನಾಡು-ನುಡಿಯ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಿರದೆ ನಿರಂತರವಾಗಿ ಸಾಗಲಿ. ಕವಿಯ ಕಾವ್ಯಮಯ ಹೃದಯದಿಂದ ಹೊರಹೊಮ್ಮುವ ಪ್ರತಿ ಕವಿತೆಗಳು ಕನ್ನಡ ನುಡಿ ಲೋಕವನ್ನು ಶ್ರೀಮಂತ ಗೊಳಿಸುವುದಲ್ಲದೆ ಭಾವಗಳಿಂದ, ಪ್ರತಿ ಕವನದ ಸಾಲುಗಳಿಂದ ಅರ್ಥಗರ್ಭಿತ ಪದಗಳು ಹೊರಹೊಮ್ಮಿದಾಗ ಓದುಗನು ಸಹ ಅಕರ್ಷಿತಗೊಳ್ಳುತ್ತಾನೆ. ಕವನ ಬರೆಯುವದು ಕವಿ ಹೃದಯದ ಮೊದಲ ಮೆಟ್ಟಿಲು ಅದರಿಂದ ಕತೆ ಕಾದಂಬರಿ ಇನ್ನಿತರ ಸಾಧನೆಗಳು ಕವಿ ಹೃದಯದಿಂದ ಬರುವುದರಲ್ಲಿ ಸಂದೇಹವಿಲ್ಲ. ಯುವ ಕವಿಗಳು ಇದನ್ನು ರೂಢಿಸಿಕೊಂಡು ಮುನ್ನಡೆಯಿರಿ ಎಂದು ಸಾಹಿತಿ ಮತ್ತು ಚಾರಿತ್ರಿಕ ಕಾದಂಬರಿಕಾರ ಯ. ರು ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತ ಆಶ್ರಯದಲ್ಲಿ ದಿ. 9ರಂದು ಬೆಳಗಾವಿಯ ಕನ್ನಡ ಭವನದಲ್ಲಿ ನಡೆದ ‘ನುಡಿ ತೇರಿಗೆ ನೂರೊಂದು ನಮನ’ ಸರಣಿಯ
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವರಾಜ ಕುಪ್ಪಸಗೌಡರ, ಮಹಾದೇವಿ ಪಾಟೀಲ, ಗಂಗಮ್ಮ ಪಾಟೀಲ, ಜ್ಯೋತಿ ಬದಾಮಿ,ಸುಮಾ ಪರೀಟ, ಸುಮಾ ಬೇವಿನಕೊಪ್ಪಮಠ,ಯಶವಂತ ಉಚಗಾವಕರ, ಮೇಘಾ ಕೋಟಗಿ, ಬಾಳಗೌಡ ದೊಡ್ಡಭಂಗಿ, ಎಫ್. ವೈ. ತಳವಾರ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಕನ್ನಡ ನಾಡು ನುಡಿ, ತಾಯಿ, ನಾಡಿನ ವರ್ಣನೆ ಕುರಿತಾಗಿ ರಚಿಸಿದ ಕವನಗಳನ್ನು ವಾಚನ ಮಾಡಿದರು. .
ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕು ಕ.ಸಾ.ಪ ಅಧ್ಯಕ್ಷ ಸುರೇಶ ಹಂಜಿ,ಮಹಾನಂದಾ ಪರುಷಟ್ಟಿ,ಡಾ. ರೇಣುಕಾ ಕಠಾರಿ,ಬಿ. ಬಿ. ಮಠಪತಿ, ಜಯಶ್ರೀ ನಿರಾಕಾರಿ,ವೀರಭದ್ರ ಅಂಗಡಿ, ಸುನೀಲ ಪರೀಟ, ಆರ್. ಬಿ. ಬನಶಂಕರಿ,ಮುರಗೇಶ ಶಿವಪೂಜಿ, ಪ್ರಿಯಾ ಸುಣಗಾರ, ಶ್ರೀದೇವಿ ಅಂಟಿನ, ಬಿ. ಕೆ. ಸಾಧರ ಸೇರಿದಂತೆ ಹಲವಾರು ಕವಿಗಳು ಮತ್ತು ಸಾಹಿತ್ಯಾಸಕ್ತರು. ಉಪಸ್ಥಿತರಿದ್ದರು
ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಸುನಿಲ ಹಲವಾಯಿ ನಿರೂಪಿಸಿದರು ಮಲ್ಲಿಕಾರ್ಜುನ ಕೋಳಿ ವಂದಿಸಿದರು.

