ಮೂಡಲಗಿ: ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನವನ್ನು ಮೂಡಲಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಮೂಡಲಗಿ ಪುರಸಭೆಯವರು ನನ್ನ ಅನುದಾನವನ್ನು ಉಪಯೋಗಿಸಿಕೊಳುವಲ್ಲಿ ನಿರಾಸಕ್ತಿ ತೋರಿದ್ದು, ಓಪನ್ ಜಿಮ್ ಮತ್ತು ಬಸ್ ಪ್ರಯಾಣಿಕರ ತಂಗುದಾಣಗಳ ಬೇಡಿಕೆಗಳಿಗೆ ಸ್ಥಳ ಒದಗಿಸುವಲ್ಲಿ ವಿಫಲರಾಗಿ ಪತ್ರ ಬರೆದಿದ್ದರು ಹೀಗಾಗಿ ಮೂಡಲಗಿ ತಾಲೂಕಿನ ಜನ ಈ ರೀತಿಯಾದ ಆಡಳಿತ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕಾಗದ ಮತ್ತು ಚರ್ಚೆ ಮಾಡಬೇಕಾದ ಅಗತ್ಯವಿದೆೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ನ-11 ರಂದು ಮೂಡಲಗಿ ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೂಡಲಗಿ ಪಟ್ಟಣದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜನರೇಟರ್ ವಿತರಣೆಗೆ 5.25 ಲಕ್ಷ ರೂ, ಗಂಗಾ ನಗರದ ಡಾ ಬಿ.ಆರ್. ಅಂಬೇಡ್ಕರ ಭವನಕ್ಕೆ ಜೀಮ್ ಸಲಕರಣೆಗೆ 5 ಲಕ್ಷ ರೂ, ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ, ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ. ಸರಕಾರಿ ಪ್ರೌಢ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ ನಿರ್ಮಾಣಕ್ಕೆ 2.5 ಲಕ್ಷ ರೂ ಹಾಗೂ ದಾನಮ್ಮ ದೇವಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ ಒಟ್ಟು ಮೂಡಲಗಿ ಪಟ್ಟಣಕ್ಕೆ 37.75 ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದೇನೆ. ನನ್ನ ಸೇವಾವಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ. ಆದರೆ ಕೆಲವು ವಿಘ್ನ ಸಂತೋಷಿ ಜನ ಅಧಿಕಾರಿಗಳ ಮೂಲಕ ಈ ರೀತಿಯಾದ ಅಡೆ ತಡೆಗಳನ್ನು ಒಡ್ಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅಭಿವೃದ್ದಿ ಕಾರ್ಯಗಳಲ್ಲಿ ಸ್ಪರ್ಧೆ ಇರಬೇಕು ಹೊರತು ಅಡೆತಡೆಗಳನ್ನು ಒಡ್ಡುವುದರಲ್ಲಿ ಅಲ್ಲ ಎಂದು ವಿರೋಧಿಗಳಿಗೆ ಕಿವಿ ಮಾತು ಹೇಳಿದರು.
ಮೂಡಲಗಿ ಪಟ್ಟಣದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಒಂದು ಓಪ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದಲ್ಲಿ ಸಂಸದರ ನಿಧಿಯಿಂದ ಬಸ್ ಪ್ರಯಾಣಿಕರ ತಂಗುದಾಣ ಮತ್ತು ಹಳೆಯರಗುದ್ರಿ ಗ್ರಾಮದ ಮೈಲಾರಲಿಂಗ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದರು.
ಪ್ರಮುಖರಾದ ಭೀಮಪ್ಪ ಹಂದಿಗುಂದ, ಶಿವಲಿಂಗಪ್ಪ ಗೋಕಾಕ, ಶಿವಬಸು ಹಂದಿಗುಂದ, ಮಾನಿಂಗಯ್ಯ ಹಿರೇಮಠ, ದಾನಯ್ಯ ಹಿರೇಮಠ, ಪಾಂಡು ಮಹೇಂದ್ರಕರ, ಜಗದೀಶ ತೇಲಿ, ಚೇತನ ನಿಶಾನಿಮಠ, ಯಲ್ಲಪ್ಪ ಗೋಕಾಂವಿ, ಯಲ್ಲಪ್ಪ ಸಣ್ಣಕ್ಕಿ, ಶಿವನಿಂಗ ಕುಂದರಗಿ, ಸೋಮಯ್ಯ ಹಿರೇಮಠ, ಮಹಾಲಿಂಗ ವಂಟಗೂಡೆ, ಕುಮಾರ ಗಿರಡ್ಡಿ, ಈರಪ್ಪ ಢವಳೇಶ್ವರ, ಬಸವರಾಜ ಗಾಡವಿ, ಶ್ರೀಕಾಂತ ಕೌಜಲಗಿ, ಮಹಾದೇವ ಮಸರಗುಪ್ಪಿ, ಹುಣಶ್ಯಾಳ ಪಿ.ವಾಯ್ ಗ್ರಾಮದ ಪ್ರಕಾಶ ಪಾಟೀಲ, ಹಣಮಂತ ಬಿಳ್ಳೂರ, ಮಲ್ಲಿಕಾರ್ಜುನ ಗೌಡನ್ನವರ, ಬಸವರಾಜ ನಿಡಗುಂದಿ, ಸಂತೋಷ ದಾಸರ, ರಾಮಚಂದ್ರಪ್ಪ ಉಪ್ಪಿನ, ಗೋಪಾಲ ಬಿಳ್ಳೂರ, ಹಳೇಯರಗುದ್ರಿ ಗ್ರಾಮದ ಗ್ರಾ.ಪಂ ಸದಸ್ಯರಾದ ಹಣಮಂತ ಚನ್ನಾಳ, ಸಿದ್ದಪ್ಪ ಅಂಡಿಬಾಗ, ಶ್ರೀಶೈಲ ಪೂಜೇರಿ, ಪ್ರಕಾಶ ರಂಜನಗಿ, ಗಂಗಾಧರ ಹಿರೇಮಠ, ಪ್ರಭು ಹಿರೇಮಠ, ಗಂಗಯ್ಯ ಮಠಪತಿ, ಮಲ್ಲಪ್ಪ ರಂಜನಗಿ, ಬಸವರಾಜ ರಂಜನಗಿ, ಸೇರಿದಂತೆ ಸ್ಥಳೀಯ ಮುಖಂಡರು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

