ಬೆನಕಟ್ಟಿ,(ಸವದತ್ತಿ ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆನಕಟ್ಟಿಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಶಾಖೆ ಮತ್ತು ಎಸ್‌ಬಿಐ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಸಮನ್ವಯ ಶಿಕ್ಷಣ ಶಿಬಿರ ಮತ್ತು ಪೋಷಕರ ಜಾಗೃತಿ ಕಾರ್ಯಾಗಾರವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷರಾದ ಸೋಮಲಿಂಗಪ್ಪ ಬಿ. ರೇವಣ್ಣವರ ಅವರು ಅಧ್ಯಕ್ಷತೆ ವಹಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ವಿಶೇಷ ಶಿಕ್ಷಕರಾದ ಸತ್ಯಪ್ಪ ರಾಚಪ್ಪನವರ ಅವರು ಮಾತನಾಡಿ “ಸಮನ್ವಯ ಶಿಕ್ಷಣದ ಮಹತ್ವ,ಸಮರ್ಥನಂ ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳು,ಹಾಗೂ ಸರ್ಕಾರದಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಲಭ್ಯವಿರುವ ಕಲ್ಯಾಣ ಯೋಜನೆಗಳ” ಕುರಿತು ಪೋಷಕರು ಮತ್ತು ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಿದರು.
ಹನುಮಂತ ಅಣ್ಣಿಗೇರಿ ವಿಶೇಷ ಶಿಕ್ಷಕರು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಅವರು “ಅಂಗವಿಕಲರ ಹಕ್ಕುಗಳ ಕಾಯಿದೆ (RPWD Act 2016) ಮತ್ತು ಅದರಡಿ ಗುರುತಿಸಲ್ಪಟ್ಟ 21 ಬಗೆಯ ಅಂಗವಿಕಲತೆಗಳ” ಕುರಿತು ವಿವರವಾಗಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ.ಎಲ್.ಭಜಂತ್ರಿ. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವ್ಹಿ. ಜಿ.ನಿಶಾನಿಮಠ ಪ್ರಭಾರಿ ಮುಖ್ಯೋಪಾಧ್ಯಾಯರಾದ ಪವಾಡಪ್ಪನವರ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಭಾರತಿ ಬಿ. ಕೆಂಚಣ್ಣವರ,ಪಂಚಾಯಿತಿ ಸದಸ್ಯರಾದ ಪ್ರಕಾಶ್ ಕಲ್ಲೇದ, ,ಬೀರಪ್ಪ ಎಸ್. ಕುರಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎ. ಬಿ. ಲಕ್ಕಣ್ಣವರ ನಿರೂಪಿಸಿದರು.
ಶ್ರೀಮತಿ ಜಿ.ಎಚ್.ಬಾಂಡಲ್ಕರ್ ವಂದಿಸಿದರು

