ರಾಜ್ಯ ಮಟ್ಟದ ಕವಿಗೋಷ್ಠಿಗೆ ಬಾಳೇಶ ಫಕ್ಕೀರಪ್ಪನವರ ಆಯ್ಕೆ

Must Read

ಗೋಕಾಕ -_ತಾಲೂಕಿನ ಗೋಸಬಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಭಾಷಾ ಶಿಕ್ಷಕ,ಉದಯೋನ್ಮುಖ ಬರಹಗಾರ,ಸಂಘಟಕ ಬಾಳೇಶ ಬಸವರಾಜ ಫಕ್ಕೀರಪ್ಪನವರ ( ತಡಕೋಡ)ಅವರು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ 23ರಂದು ಬೆಂಗಳೂರು ಕೇಂದ್ರ ಬಸವ ಸಮಿತಿಯಿಂದ ಬೈಲಹೊಂಗಲ ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆ ಆಗಿದ್ದಾರೆ ಎಂದು ರಾಜ್ಯ ಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ತಿಳಿಸಿದ್ದಾರೆ.

ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಬಾಳೇಶರವರು ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದರೂ ಕನ್ನಡ ಸಾಹಿತ್ಯದ ಅಪಾರ ಒಲವು ಹೊಂದಿದ್ದಾರೆ. ಕಥೆ,ಕವನ,ಶಾಲಾ ಗೀತೆ ಮತ್ತು ಚುಟುಕುಗಳನ್ನು ಬರೆದಿದ್ದಾರೆ.ಉತ್ತಮ ವಾಗ್ಮಿಯೂ ಆಗಿರುವ ಬಾಳೇಶ ರವರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ,ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರು ಆಗಿ ಕನ್ನಡದ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಬಾಳೇಶ ರವರನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾದ ಸಿದ್ರಾಮ ಮಲ್ಲಪ್ಪ ಲೋಕನ್ನವರ (ಕೌಜಲಗಿ), ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ
ಭಾರತಿ ಮದಬಾವಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಶಂಕರಯ್ಯ ಮಠದ,ಉಪಾಧ್ಯಕ್ಷರಾದ ಮುತ್ತೆವ್ವ ವಿಠ್ಠಲ ಮೆಳ್ಳಿಕೇರಿ,ಸದಸ್ಯರಾದ ಗಿರೀಶ ಪಾಟೀಲ,ಲೋಕೇಶ ಬಂಡಿವಡ್ಡರ,ಮಹಾದೇವ ನಂದಿ,ಬಸವರಾಜ ಬುಳ್ಳಿ,ಗೋಪಾಲ ಬಡಿಗೇರ,ಯಲ್ಲಾಲಿಂಗ ಪಾಟೀಲ,ಹಣಮಂತ ಅಕ್ಕಮ್ಮನವರ,ಬಾಳಪ್ಪ ತೋಟಗಿ, ಲಕ್ಷ್ಮೀ ಸಿಂಗಾಡಿ,ಮಹಾನಂದಾ ಸೂಲನ್ನವರ,ಸಕ್ಕುಬಾಯಿ ಭಜಂತ್ರಿ,ಶಿವಲೀಲಾ ಪಾಟೀಲ,ರತ್ನವ್ವ ಹರಿಜನ,ವಿಜಯಲಕ್ಷ್ಮಿ ಹಿರೇಮಠ,ಲಕ್ಷ್ಮೀ ಅಕ್ಕಿಸಾಗರ,ಹೇಮಾ ಮಗದುಮ, ಶಿಕ್ಷಕರಾದ ಶೇಖರ ಪಾಟೀಲ,ಸುರೇಶ ಸವದತ್ತಿ,ಖ್ವಾಜಾ ಮೂಲಿಮನಿ,ಬಸವರಾಜ ಹಳ್ಳಿ,ಮಾರುತಿ ಹೊಸಟ್ಟಿ ಶಿಕ್ಷಕಿಯರಾದ ಶ್ರೀಮತಿ ಉಮಾ ಹೊಸಕೋಟಿ,ಶ್ರೀಮತಿ ತಬಸುಮ್ ನದಾಫ,ಶ್ರೀಮತಿ ವಿದ್ಯಾ ಪತ್ತಾರ , ಬಾಳೇಶ ಅವರನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group