ಮೂಡಲಗಿ-ಮಡಗಾಂವ (ಗೋವಾ) ನೂತನ ಬಸ್ ಸಂಚಾರ  ಆರಂಭ

Must Read
ಮೂಡಲಗಿ: ಮೂಡಲಗಿಯಿಂದ ಗೋವಾ ಮಡಗಾಂವಗೆ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ಘಟಕದಿಂದ ಆರಂಭಿಸಿರುವ ನೂತನ ಬಸ್ ಸಂಚಾರಕ್ಕೆ ಮೂಡಲಗಿ ಬಸ್ ನಿಲ್ದಾಣದಲ್ಲಿ ಪುರಸಭೆ

ಮುಖ್ಯಾಧಿಕಾರಿ ತುಕಾರಾಮ ಮಾದರ ಚಾಲನೆ ನೀಡಿದರು.

   ಈ ಸಂದರ್ಭದಲ್ಲಿ ಮಾತನಾಡಿದ ತುಕಾರಾಮ ಮಾದರ ಅವರು ‘ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಆಸಕ್ತಿವಹಿಸಿ ಗೋವಾದ ಮಡಗಾಂವಗೆ ಸಾರಿಗೆ ಇಲಾಖೆಯ ಬಸ್ ಪ್ರಾರಂಭಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದರು.

ಶಾಸಕರ ಶಿಫಾರಸ್ಸಿನ ಮೇರೆಗೆ ಬೆಳಗಾವಿ ಸಾರಿಗೆ ವಿಭಾಗದ  ಅಧಿಕಾರಿ ಕೆಂಪಣ್ಣ ಗುಡೆಣ್ಣವರ ಅವರು ಮೂಡಲಗಿ ಗೋವಾ ಮಾರ್ಗಕ್ಕೆ ಅನುಮತಿ ನೀಡಿ ಬಸ್‌ಗಳನ್ನು ತ್ವರಿತವಾಗಿ ನೀಡಿರುವರು. ಮೂಡಲಗಿ ಮತ್ತು ಸುತ್ತಮುತ್ತಲಿನ ಸಾರ್ವಾಜನಿಕರು ಬಸ್‌ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು.

    ಮೂಡಲಗಿ ಬಸ್ ನಿಲ್ದಾಣದ ನಿಯಂತ್ರಕ  ನಾಗೇಂದ್ರ ಹೊಸಮನಿ ಮಾತನಾಡಿ ‘ಪ್ರತಿ ದಿನ ಮೂಡಲಗಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 2.30 ಹೊರಟು ಗೋಕಾಕ, ಅಂಕಲಗಿ, ಬೆಳಗಾವಿ, ಖಾನಾಪುರ, ರಾಮನಗರ ಮಾರ್ಗವಾಗಿ ಗೋವಾದ ಮಡಗಾಂವಗೆ ರಾತ್ರಿ 9.30ಕ್ಕೆ ತಲುವುವುದು. ಮರಳಿ ಪ್ರತಿ ದಿನ ಗೋವಾ ಮಡಗಾಂವ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಮೂಡಲಗಿಗೆ ಬರುವುದು’ ಎಂದರು.

  ಈ ಸಮಯದಲ್ಲಿ  ಪಂಚಯ್ಯ ಹಿರೇಮಠ, ಮರೆಪ್ಪ ಮರೆಪ್ಪಗೋಳ, ಕೃಷ್ಣಾ ಗಿರೆಣ್ಣವರ, ಭೀಮಶಿ ತಳವಾರ, ಮಲ್ಲು ಬೋಳನವರ, ಈರಪ್ಪ ಢವಳೇಶ್ವರ, ಸುರೇಶ ಭಜಂತ್ರಿ, ಶಿವಾನಂದ ಮಡಿವಾಳರ,  ಶರಶ್ಚಂದ್ರ ಲಂಕೆಪ್ಪನವರ, ಯಮನಪ್ಪ ಹೊಸಮನಿ, ವಿಠಲ ಗುಡ್ಡಮನಿ, ಸೈಫನ ಮಂಟೂರ, ಚಾಲಕ ಹೊನ್ನಪ್ಪ ಚೂರಿ, ನಿರ್ವಾಹಕ ದಿಲೀಪ ರಾಠೋಡ, ಶಿವಬಸು ಮೋರೆ, ಶಂಭು ಮುಲ್ಲಾ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group