ಮುನ್ನುಡಿ ಆಸ್ತಿಕ, ನಾಸ್ತಿಕ
ದೇವರು ಇದ್ದಾನೋ ಇಲ್ಲವೋ ಎಂಬುದು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ, ಮತ್ತು ಇದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ದೇವರ ಅಸ್ತಿತ್ವವನ್ನು ನಂಬುತ್ತಾರೆ, ಇದನ್ನು ಆಸ್ತಿಕರು ಎನ್ನುತ್ತಾರೆ. ಇನ್ನು ಕೆಲವರು ದೇವರು ಇಲ್ಲ ಎಂದು ನಂಬುತ್ತಾರೆ, ಇವರನ್ನು ನಾಸ್ತಿಕರು ಎನ್ನುತ್ತಾರೆ, ಆದರೆ ಕೆಲವರಿಗೆ ಅಸ್ತಿತ್ವದ ಬಗ್ಗೆ ಖಚಿತವಾಗಿ ತಿಳಿದಿರುವುದಿಲ್ಲ, ಇವರನ್ನು ಅಜ್ಞೇಯತಾವಾದಿಗಳು ಎನ್ನುತ್ತಾರೆ.
ವಿಜ್ಞಾನವು ದೇವರ ಅಸ್ತಿತ್ವವನ್ನು ಸಾಬೀತುಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಏಕೆಂದರೆ ದೇವರು ಶಾರೀರಿಕವಾದ ಬ್ರಹ್ಮಾಂಡದಲ್ಲಿ ಇಲ್ಲ.
ಆಸ್ತಿಕರು (Theists): ದೇವರನ್ನು ನಂಬುವವರು, ಇದು ವೈಯಕ್ತಿಕ ನಂಬಿಕೆ ಮತ್ತು ಅನುಭವದ ಮೇಲೆ ಆಧಾರಿತವಾಗಿರುತ್ತದೆ.
ನಾಸ್ತಿಕರು (Atheists): ಯಾವುದೇ ದೇವರುಗಳ ಅಸ್ತಿತ್ವವನ್ನು ನಂಬದವರು.
ಅಜ್ಞೇಯತಾವಾದಿಗಳು (Agnostics): ದೇವರ ಅಸ್ತಿತ್ವದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲದವರು.
ಈ ಪ್ರಶ್ನೆಗೆ ಯಾವುದೇ ಒಂದು ನಿಖರವಾದ ಉತ್ತರ ಇಲ್ಲ. ಇದು ವ್ಯಕ್ತಿಯ ನಂಬಿಕೆ, ಅನುಭವ ಮತ್ತು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ.
ದೇವರ ಬಗ್ಗೆ ಪರಿಕಲ್ಪನೆ, ಮತ್ತು ನಮ್ಮ ಮನದಾಳದ ಭಾವನೆ
ದೇವರು ಇದ್ದಾನೆ ಎಂಬುದಕ್ಕೆ ಒಂದು ಉಪಕಥೆ, ಉದಾಹರಣೆ ಸಮೇತವಾಗಿ ಹೇಳಬಯಸುತ್ತೇನೆ.
ಸ್ವಾಮಿ ವಿವೇಕಾನಂದರು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡುವ ಸಂದರ್ಭದಲ್ಲಿ, ರಾಜಸ್ಥಾನದಲ್ಲಿರುವ ರಾಜಸ್ಥಾನದಲ್ಲಿರುವ ಅಲ್ವಾರ್ ರಾಜಕ್ಕೆ ಬಂದರು.ಅಲ್ಲಿ ಅವರನ್ನು ರಾಜ ಮಂಗಲ ಸಿಂಗ್ ಸ್ವಾಗತ ಮಾಡಿದ ರಾಜ ಮಂಗಲ ಸಿಂಗ್ ಸ್ವಾಮಿ ವಿವೇಕಾನಂದರ ಜೊತೆ ದೇವರು ಧರ್ಮ ನಂಬಿಕೆಗಳ ಬಗ್ಗೆ ಮಾತನಾಡುವಾಗ, ವಿಗ್ರಹಗಳನ್ನು ಪೂಜಿಸುವುದು ಸರಿಯಾದ ಅಭ್ಯಾಸ ಎನಿಸುವುದಿಲ್ಲ. ಹಾಗೂ ಅವುಗಳನ್ನು ನಾನು ನಂಬುವುದಿಲ್ಲ,ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ.
ಮೂಲತಃ ರಾಜನು ದೇವರು ನಿರಾಕಾರ ಎಂದು ನಂಬುವನಾಗಿದ್ದು ವಿಗ್ರಹ ಪೂಜೆಯನ್ನು ನಂಬುತ್ತಿರಲಿಲ್ಲ. ಹೀಗಾಗಿ ತನ್ನ ಅಭಿಪ್ರಾಯ ಸ್ವಾಮಿ ವಿವೇಕಾನಂದರ ಮುಂದೆ ಹೇಳಿದ ಇದಕ್ಕೆ ವಿವೇಕಾನಂದರು ಹೆಚ್ಚು ಪ್ರತಿಕ್ರಿಯೆ ಕೊಡದೇ ಮುಗುಳ್ನಕು ಸುಮ್ಮನಾದರು. ಆದರೆ ಅವರ ಮನಸ್ಸಿನಲ್ಲಿ ಒಂದು ವಿಚಾರ ಓಡುತ್ತಿತ್ತು. ನಮ್ಮ ಸನಾತನ ಭಾರತೀಯ ಪದ್ಧತಿಯಿಂದ ನಡೆದುಕೊಂಡ ಬಂದಂತಹ ವಿಗ್ರಹ ಪೂಜೆಯಲ್ಲಿ ಯಾವ ತಪ್ಪು ಇಲ್ಲ. ಇದು ಹಲವಾರು ಶತಮಾನಗಳ ನಂಬಿಕೆ ಮತ್ತು ಅದಕ್ಕೆ ಅದರದ್ದೇ ಆದ ಅರ್ಥವಿದೆ,ಆದರೆ ಅದನ್ನು ಪರಿಣಾಮಕಾರಿಯಾಗಿ ಆ ರಾಜನಿಗೆ ಹೇಗೆ ತಿಳಿಸುವುದು, ಎಂದು ಯೋಚಿಸಿದರು. ರಾಜ ತನ್ನ ಅರಮನೆಯನ್ನು ಅವರಿಗೆ ಬಹಳ ಹೆಮ್ಮೆಯಿಂದ ತೋರಿಸುವಾಗ, ಸ್ವಾಮಿ ವಿವೇಕಾನಂದರು ಅಲ್ಲೇ ಇದ್ದ ದಿವಾನರನ್ನು ಕರೆದು ವಿಚಿತ್ರವಾದ ಒಂದು ಮಾತನ್ನು ಹೇಳಿದರು.
ದಯವಿಟ್ಟು ಅಲ್ಲಿ ಮಾತಾಡುತ್ತಿರುವ ರಾಜನ ತಂದೆಯ ಛಾಯಾ ಚಿತ್ರದ ಮೇಲೆ ಉಗುಳು ವೀರ, ಎಂದು ಹೇಳಿ ರಾಜಮಂಗಲ ಸಿಂಗನ ತಂದೆಯ ಛಾಯಾಚಿತ್ರದ ಕಡೆ ಕೈ ತೋರಿಸಿ ಮನವಿ ಮಾಡಿದರು.ಏನನ್ನು ಮಾತನಾಡುತ್ತಿದ್ದಾರೆ ಎಂದು ತಿಳಿದಿದೆಯೇ ಬೇರೆಯವರಾಗಿದ್ದರೆ, ಇದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮನದಲ್ಲಿ ಕೋಪವನ್ನು ನಿಗ್ರಹಿಸಿಕೊಳ್ಳುತ್ತಾ ನಿoತಿದ್ದರು ರಾಜ.
ದಿವಾನರಿಗೆ ಬೆವರು ಬಿಟ್ಟಿತು. ಬಾಯಿ ಬಿಟ್ಟಂತಾಯಿತು. ವಿವೇಕಾನಂದರ ಬಗ್ಗೆ, ಅನ್ನ ಹಾಕಿದ ರಾಜನ ಬಗ್ಗೆ ಅತಿಯಾದ ನಿಷ್ಠೆ ಆ ದಿವಾನರಿಗೆ ಬಲವಾಗಿತ್ತು ಆದಕಾರಣ ಆ ಛಾಯಾಚಿತ್ರಕ್ಕೆ ಉಗಳಲು ಹಿಂಜರೆದರು.
ಅದು ಛಾಯಾ ಚಿತ್ರ ಮಾತ್ರ, ಅದು ರಾಜನ ತಂದೆ ಅಲ್ಲ, ಎಂದು ವಿವೇಕಾನಂದರು ಹೇಳಿದರು. ಯಾಕೆ ನೀವು ಛಾಯಾಚಿತ್ರಕ್ಕೆ ಉಗಳಲು ತಯಾರಿಲ್ಲ ಯಾಕಂದರೆ ಅವರು ನಿಮ್ಮರಾಜನ ತಂದೆ ಎಂಬ ಭಾವನೆ ನಿಮ್ಮ ಮನದ ಆಳದಲ್ಲಿ ಇದೆ. ಆದ ಕಾರಣ ನೀವು ತಂದೆಯನ್ನು ಅಭಿಮಾನದಿಂದ ಪ್ರೀತಿಸುತ್ತೀರಿ ಹಾಗೆಯೇ ನಮ್ಮ ಪೂರ್ವಜರು ಸಹ ದೇವರನ್ನು ಮೂರ್ತಿಯಲ್ಲಿ ಕಂಡು ಪೂಜಿಸುತ್ತಾರೆ, ಆರಾಧಿಸುತ್ತಾರೆ. ತಮ್ಮ ಆಕಾಂಕ್ಷೆಗಳನ್ನು ಬೇಡಿಕೆಗಳನ್ನು ಹರಕೆಗಳನ್ನು ಬೇಡಿಕೊಳ್ಳುತ್ತಾರೆ. ದೇವರು ಇದ್ದಾನೆ,ಎಂಬುದು ನಮ್ಮ ದೃಢನಂಬಿಕೆ ಆಗಿರುತ್ತದೆ.
ದೇವರು ನಿರಾಕಾರ
ದೇವರು ಎಲ್ಲೆಡೆಯಲ್ಲಿಯೂ ಇದ್ದಾನೆ. ಆದರೆ ಕಣ್ಣಿಗೆ ಕಾಣುವುದಿಲ್ಲ.ಅವನಿಗೆ ಆಕಾರವಿಲ್ಲ .ದೇವರು ಯಾಕೆ ಕಣ್ಣಿಗೆ ಕಾಣುವುದಿಲ್ಲ ಎಂಬುದನ್ನು ನಾನು ಓದಿದ್ದೇನೆ ಹಾಗೂ ಕೇಳಿದ್ದೇನೆ.
ದೇವರು ಈ ಬ್ರಹ್ಮಾಂಡವನ್ನು ಕ್ಷಣಮಾತ್ರದಲ್ಲಿ ಮೂರು ಪ್ರದಕ್ಷಣೆಯನ್ನು ಹಾಕುತ್ತಿರುತ್ತಾನೆ. ಆದಕಾರಣ ಪರಮಾತ್ಮ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹೇಗೆಂದರೆ ದೂರದಲ್ಲಿ ಹೋಗುವ ರಾಕೆಟ್ ನಮ್ಮ ಕಣ್ಣಿಗೆ ಹೇಗೆ ಕಾಣುವುದಿಲ್ಲವೋ ಹಾಗೆಯೇ ದೇವರು ಸಹ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅಗೋಚರವಾದ ಒಂದು ಶಕ್ತಿ ಇದೆ. ನಮ್ಮೊಳಗಿರುವ ಆತ್ಮ ಜೀವದ ಚೈತನ್ಯ ಹೇಗೆ ಕಣ್ಣಿಗೆ ಕಾಣುವುದಿಲ್ಲವೋ ಹಾಗೆಯೇ ದೇವರು ಇದ್ದಾನೆ. ಮನುಷ್ಯನಲ್ಲಿ ಜೀವ ಚೈತನ್ಯ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮನುಷ್ಯ ಜೀವಂತನಾಗಿರುತ್ತಾನೆ. ದೇಹದಿಂದ ಜೀವ ಚೈತನ್ಯ ಹಾರಿ ಹೋದ ಮೇಲೆ ಈ ದೇಹ ಶವ ಆಗುತ್ತದೆ.
*ಈ ಜೀವ ಚೈತನ್ಯವೇ ದುರ್ಗಾ,ಶಿವೆ. ಎಲ್ಲೆಡೆಯಲ್ಲಿಯೂ ಆತನಿಗೆ ಲಕ್ಷವಿರುತ್ತದೆ. ಸೃಷ್ಟಿ ಲಯ ಪ್ರಳಯ ಬ್ರಹ್ಮಾಂಡದ ಸಿದ್ಧಾಂತವಾಗಿರುತ್ತದೆ.
ಶ್ರೀ ಜಗಜ್ಯೋತಿ ಬಸವಣ್ಣನವರು ತಮ್ಮ ಎಲ್ಲವಚನಗಳಲ್ಲಿ ಕೂಡಲಸಂಗಮ ದೇವನನ್ನು ಸ್ಮರಿಸಿದ್ದಾರೆ. ಮೂಡನಂಬಿಕೆಗಳನ್ನು ನಿಷೇಧಿಸಿದ್ದಾರೆ. ದಲಿತರಿಗಾಗಿ ಅಂಗೈಯಲ್ಲಿಯೇ ಇಷ್ಟಲಿಂಗವನ್ನು ಇಟ್ಟು ಪೂಜಿಸುವುದನ್ನು ಕಲಿಸಿದ್ದಾರೆ. ಎನ್ನ ಕಾಲೇ ಕಂಬವಯ್ಯ, ಶಿರವೇ ಕಳಸವಯ್ಯ ಎಂಬವಚನದಲ್ಲಿ ತಮ್ಮ ದೇವರು ಇರುವಿಕೆಯನ್ನು ಬಹಿರಂಗಪಡಿಸಿದ್ದಾರೆ.
*ಅಕ್ಕಮಹಾದೇವಿ*
ಹಲವಾರು ವಚನಗಳಲ್ಲಿ ವಿಜ್ಞಾನಕ್ಕೂ ಸವಾಲನ್ನು ಎಸೆದ ಅಕ್ಕಮಹಾದೇವಿ, ಸೂರ್ಯನಲ್ಲಿ ಬೆಂಕಿಯ ಉಂಡೆಯನ್ನು ಇಟ್ಟವರು ಯಾರು? ಪ್ರಶ್ನೆ ಮಾಡಿದ್ದಾರೆ
ಚಂದ್ರನಲ್ಲಿ ತಂಪನ್ನು ಇಟ್ಟವರ್ಯಾರು, ಆಗಿನ ಕಾಲಕ್ಕೆ ನವಗ್ರಹಗಳ ಉಪಮೇಯವನ್ನು ಸಹ ಮಾಡಿದ್ದಾರೆ ಅಕ್ಕಮಹಾದೇವಿ. ಅಲ್ಲಮ ಪ್ರಭುಗಳ ವಚನದಲ್ಲಿಯೂ ಸಹ ನಾವು ದೇವರನ್ನು ಕಾಣಬಹುದು. ಸಹಸ್ರ ಸಹಸ್ರ ವಚನಕಾರರು ತಮ್ಮ ವಚನಗಳಲ್ಲಿ ದೇವರನ್ನು ಕಂಡಿದ್ದಾರೆ.
ಈ ದೇವರು ಇರುವಕೆ ನಿನ್ನೆ ಮೊನ್ನೆಯದಲ್ಲ.ಪ್ರಾಚೀನ ಕಾಲದಿಂದಲೂ ದೇವರ ಬಗ್ಗೆ ನಿಷ್ಠೆ ನಂಬಿಕೆ ಭಕ್ತಿ ಹೊಂದಿದ್ದಾರೆ. ಇದು ಮೂಢನಂಬಿಕೆಯೂ ಅಲ್ಲ ಶಿಲ್ಪ ಕಲೆಗಳಲ್ಲಿ ದೇವರು ಅರಳಿ ನಿಂತಿದ್ದಾರೆ.
ಶಂಕ್ರಾಚಾರ್ಯರು ನಾಲ್ಕು ಮಠಗಳನ್ನು ಕಟ್ಟಿಸಿದ್ದಾರೆ. ಕಾಶ್ಮೀರ ಕನ್ಯಾಕುಮಾರಿ, ಶೃಂಗೇರಿ ಮಠ,ಬದರಿನಾಥ ದೇವಾಲಯಗಳನ್ನು ನೋಡಿದ್ದೇವೆ ಅವರು ದೇವರ ಬಗ್ಗೆ ಬರೆದಂತಹ ಶ್ಲೋಕಗಳು. ಲಲಿತಾ ಸಹಸ್ರನಾಮ, ಸೌಂದರ್ಯಲಹರಿ ಶ್ರೀ ಚಕ್ರದಲ್ಲಿ ದೇವಿಯನ್ನು ಅಲಂಕೃತ ಗೊಳಿಸಿದ ಬಗ್ಗೆ ಸಾಕ್ಷಿಗಳಿವೆ. ಕನಕಧಾರ ಶ್ಲೋಕ.
ದೇವರು ಇದ್ದಾನೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಇನ್ನೇನು ಬೇಕು. ಇವು ಸುಳ್ಳು ಕಥೆ ಗಳು ಅಲ್ಲ.
ಸತ್ಯಂ ಶಿವಂ ಸುಂದರಂ. ಇದರಲ್ಲಿಯೇ ದೇವರು ಅಡಗಿದ್ದಾನೆ.
ಇಲ್ಲ ಅನ್ನುವುದಕ್ಕೂ ಸಹ ಸಾಕ್ಷವನ್ನು ಕೊಡಬೇಕು ನಾಸ್ತಿಕರು.
ಪಂಚಭೂತಗಳನ್ನು ಸೃಷ್ಟಿ ಮಾಡಲು ಮನುಷ್ಯರಿಂದಲೂ ಸಾಧ್ಯವಿಲ್ಲ ವಿಜ್ಞಾನದಿಂದಲೂ ಸಾಧ್ಯವಿಲ್ಲ. ಕೃತಕ ಯಂತ್ರ ಮಾನವನನ್ನು ಸೃಷ್ಟಿಸಬಹುದೇ ಹೊರತು, ದೇವರು ಸೃಷ್ಟಿಸಿದಂತಹ ಮನುಷ್ಯನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮೂಲಾಧಾರವಿಲ್ಲದೆ ಸೃಷ್ಟಿಸಲು ಸಾಧ್ಯವಿಲ್ಲ.
ವಿಜ್ಞಾನ ಮುಂದುವರೆದಿದೆ ಎನ್ನುವುದಾದರೆ ಈ ಜೀವ ಸತ್ತ ಮೇಲೆ ಎಲ್ಲಿ ಹೋಗುತ್ತದೆ ಎಂಬುದು ಇನ್ನುವರೆಗೂ ಯಾರಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇದೊಂದು ಅಗೋಚರವಾದ ಶಕ್ತಿಯಾಗಿರುತ್ತದೆ ಇದುವೇ ದೇವರು.
ವೈದ್ಯರಿಗೂ ನಿಲುಕದ ಶಕ್ತಿ ಇದಾಗಿದೆ. ವೈದ್ಯರಿಗೆ ಮಿಕ್ಕಿದ ಮೇಲೆ,ನಂತರ ಕೊನೆಯ ಹಂತದಲ್ಲಿ ದೇವರಿಗೆ ಬಿಟ್ಟಿದ್ದು ಎಂದು ಹೇಳುತ್ತಾರೆ.
ಕೊನೆಯ ಹಂತದಲ್ಲಿ ಕೆಲವು ರೋಗಿಗಳನ್ನು ಮೃತ್ಯುಂಜಯ ಮಂತ್ರದಿಂದ ಕೋಮಾದಲ್ಲಿ ಹೋದ ರೋಗಿಗಳನ್ನು ಎಚ್ಚರಗೊಳಿಸಿದ್ದು ಉಂಟು. ಮೃತ್ಯುಂಜಯ ಮಂತ್ರದ ಒಳ ರಹಸ್ಯದ ಸಂಶೋಧನೆಯಲ್ಲಿ ತೊಡಗಿದ್ದಾರೆ, ಪ್ರಸ್ತುತದಲ್ಲಿದೆ.
ಆದಕಾರಣ ವೈದ್ಯರೇ ದೇವರ ಮೇಲೆ ನಂಬಿಕೆ ಇಟ್ಟಿರುವಾಗ, ಸಾಮಾನ್ಯ ಜನರು ದೇವರು ಇದ್ದಾನೆ ಎಂದು ನಂಬುತ್ತಾರೆ. ನಂಬಲೇಬೇಕು.
ಶ್ರೀಮತಿ ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ

