ನಿಪ್ಪಾಣಿ ನಗರದ ದಾನಮ್ಮದೇವಿ ಶಾಲೆಯ ಸಭಾಭವನದಲ್ಲಿ ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ದಾನಮ್ಮ ಶಾಲೆ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಮಕ್ಕಳಿಗಾಗಿ ಕನ್ನಡ ಗಾಯನ ಸ್ಪರ್ಧೆ ಜರುಗಿತು.
ಆರಂಭದಲ್ಲಿ ನಾಡಗೀತೆ ಮೊಳಗಿತು ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ರಾಜು ನಾಯಿಕ ಎಲ್ಲರನ್ನೂ ಕನ್ನಡ ಶಲ್ಯ ಗ್ರಂಥ ಪುಷ್ಪ ನೀಡಿ ಸ್ವಾಗತಿಸಿ ಗೌರವಿಸಿದರು ತಾಯಿ ಭುವನೇಶ್ವರಿಯ ಭಾವಚಿತ್ರ ಪೂಜೆ ಜರುಗಿತು ದಾನಿಗಳಾದ ವಿನಾಯಕ ಪಾಟೀಲ,ರಾಜಶೇಖರ ಸ್ವಾಮಿ ಸನ್ಮಾನ ಜರುಗಿತು ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾನಂದ ಪುರಾಣಿಕಮಠ ಈ ಟ್ರಸ್ಟನ ಕಾಯಕ ಕೊಂಡಾಡಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಸಹಕರಿಸುವ ವಿನೂತನ ಕಾಯಕವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು
ಈ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನಾ೯ಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತಿನ ನಿಪ್ಪಾಣಿ ತಾಲೂಕಿನ ಅಧ್ಯಕ್ಷರಾದ ಪ್ರೊ. ಮಿಥುನ ಅಂಕಲಿ ಅವರು ಪ್ರಸ್ತುತ ದಿನಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಅವಶ್ಯಕವಾಗಿದ್ದೂ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಮೂಡಿಸಲು ಸಹಪಠ್ಯ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತಿವೆ. ಈ ನಿಟ್ಟಿನಲ್ಲಿ ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡ ನುಡಿ ರಕ್ಷಣೆಗೆ ಮುಂದಾಗಿದ್ದೂ ಶ್ಲಾಘನೀಯ ಎಂದರು
ತದನಂತರ ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಪ್ಪಾಣಿ ತಾಲೂಕಿನ ಅಧ್ಯಕ್ಷರಾದ ಈರಣ್ಣಾ ಶಿರಗಾಂವಿ ಕನ್ನಡ ನಾಡು ನುಡಿ ಸಾಹಿತ್ಯ ಕುರಿತು ಹೇಳುತ್ತಾ ಕನ್ನಡ ಸಂಘಟನೆಗಳು ಹೆಸರಿಗೆ ಕೆಲಸ ಮಾಡದೇ ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಪದಗಳ ಏಳಿಗೆ ಮಾಡಬೇಕು ಎಂದರು
ತದನಂತರ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಕೊಣ್ಣುರಿ ಮಕ್ಕಳ ಪ್ರತಿಭೆಯ ಅನಾವರಣದಲ್ಲಿ ಸಹಪಠ್ಯ ಚಟುವಟಿಕೆಗಳ ಪಾತ್ರ ಕುರಿತು ಮಾತನಾಡಿದರು. ಲಖನಾಪೂರ ಗ್ರಾಮ ಪಂಚಾಯಿತಿ ಸದಸ್ಯೆ ಸೌ ಲಕ್ಷ್ಮೀ ಮಗದುಮ್ಮ ಗಡಿ ಕನ್ನಡ ಸೇವೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ದಾನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೀರಶೈವ ಸಮಾಜದ ಅಧ್ಯಕ್ಷ ವಜ್ರಕಾಂತ ಸದಲಗೆ, ಮಹಾತ್ಮಾ ಬಸವ ಬ್ಯಾಂಕಿನ ನಿರ್ದೇಶಕ ಡಾ ಎಸ್ ಆರ್ ಪಾಟೀಲ, ಗಡಿನಾಡು ಕನ್ನಡ ಬಳಗ ಅಧ್ಯಕ್ಷ ಮಹಾದೇವ ಬರಗಾಲೆ,ಲಖನಾಪೂರ ಗ್ರಾಮ ಪಂಚಾಯಿತಿ ಸದಸ್ಯ ಕನ್ನಡ ಕಟ್ಟಾಳೂ ವಿನಾಯಕ ಪಾಟೀಲ, ರಾಜಶೇಖರ ಸ್ವಾಮಿ, ಟ್ರಸ್ಟ್ ಪದಾಧಿಕಾರಿಗಳು ಸಹಿತ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕೊನೆಯಲ್ಲಿ ಎಲ್ಲ ಮಕ್ಕಳಿಗೆ ನೋಟಬುಕ್ ವಿತರಿಸಲಾಯಿತು ಕಮತೆ ಸರ್ ವಂದಿಸಿದರೆ ಶಾಸ್ತ್ರೀ ಮೇಡಂ ನಿರೂಪಿಸಿದರು

