ಮೂಡಲಗಿ:-ಸಮೀಪದ ಮುಗಳಖೋಡ ಪಟ್ಟಣದಲ್ಲಿ ಶ್ರೀ ಶಂಭುಲಿಂಗ ಕಲಾ ಪೋಷಕ,ಭಜನಾ ಸಂಘ ಇವರ ಆಶ್ರಯದಲ್ಲಿ ಶ್ರೀ ನಿಜಗುಣ ಶಿವಯೋಗಿ ಜಯಂತಿಯ ನಿಮಿತ್ತವಾಗಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರ್ತಿಸಿ “ರಾಜ್ಯ ಮಟ್ಟದ” ಪ್ರಶಸ್ತಿನೀಡಿ ಗೌರವಿಸಿದರು.
ಭಾರತ ದೇಶದ ಸಂಸ್ಕ್ರತಿಯನ್ನು ಉಳಿಸುವುದು ಭಜನಾ, ಡೊಳ್ಳಿನ ಹಾಡುಗಳು ಇನ್ನು ಅನೇಕ ಗ್ರಾಮೀಣ ಸೊಗಡಿನ ಗಾಯನಗಳು ಮರೆಯಾಗುತ್ತಿರುವುದು. ಈ ಗ್ರಾಮೀಣ ಸೊಗಡನ್ನು ಉಳಿಸಬೇಕಾಗಿದೆ,ಗ್ರಾಮೀಣ ಪದಗಳು ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ನಾವು ಮಾಡಿದ ಒಳ್ಳೆಯ ಕೆಲಸನ್ನು ಹೊರಗೆ ಹಾಕಬೇಕಾದರೆ ಪತ್ರಿಕಾಮಾಧ್ಯಮದವರ ಪಾತ್ರ ದೊಡ್ಡದು ಎಂದು ಅಚಲೇರಿ ಜಿಡಗಾ ಮಠದ ಶ್ರೀಗಳಾದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರ್ತಿಸಿ ಕಲಾ ಪೋಷಕರಿಗೆ ಸತ್ಕಾರ ತೃಪ್ತಿ ತಂದಿದೆ. ನಮಗೆ ಸಾಧ್ಯವಾದಷ್ಟು ಸಾಧನೆ ಮಾಡಿದವರನು ಆಯ್ಕೆ ಮಾಡಿದಕ್ಕೆ ನಮಗೆ ಬಹಳ ಆನಂದವಾಗಿದೆ ಎಂದು ಶ್ರೀ ಶಂಭುಲಿಂಗ ಕಲಾ ಪೋಷಕರ, ಭಜನಾ ಸಂಘದ ಅಧ್ಯಕ್ಷರಾದ ಮಹಾಲಿಂಗ ಯಡವಣ್ಣವರ ಅವರು ಸಂತೋಷವನ್ನು ಹಂಚಿಕೊಂಡರು.
ಬಸವರಾಜ ಗೋಕಾಕ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಸಮಿತಿ ಮುಗಳಖೋಡ, ಡಾ.ಚುಟುಕುಸಾಬ ಜಾತಗಾರ, ಡಾ. ಶಿವಲಿಂಗ ಮುನ್ಯಾಳ, ರವಿ ಬಡಿಗೇರ, ಪುಂಡಲೀಕ ಗೋಕಾಕ, ಮೀರಾಸಾಬ ನದಾಫ್,ಗುರುನಾಥ ಬೋರಗಾವಿ,ಭೀಮಪ್ಪ ಯಡವಣ್ಣವರ,ಲಕ್ಷ್ಮಣ ಅಡಿಹುಡಿ, ಕೃಷ್ಣ ಗಿರೆನ್ನವರ,ಮಲ್ಲು ಬೋಳನವರ ಇನ್ನು ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮುಗಿದ ಮೇಲೆ ಡೊಳ್ಳಿನ ಹಾಡು,ಭಜನಾ ಗಾಯನ, ಪುರವಂತಿಕೆಯವರ ಗ್ರಾಮೀಣ ಸೊಗಡಿನ ನುಡಿಗಳು ಮತ್ತು ಇನ್ನು ಅನೇಕ ಪರಸ್ಥಳದಿಂದ ಬಂದಿದ್ದ ಕಲಾವಿದರು ತಮ್ಮ ಕಾರ್ಯಕ್ರಮನ್ನು ಪ್ರಸ್ತತ ಪಡಿಸಿದರು.

