ಮುಧೋಳ – ಜನಸೇವೆ ಅದು ಜನಾರ್ದನನ ಸೇವೆ ಎಂದು ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತನಾಗಿ ಕೆಲಸವನ್ನು ಮಾಡಿದ ಮುಗಳಖೋಡದ ಯುವ ಧುರೀಣ ನಿಂಗನಗೌಡ ಮಂಟೂರ ಅವರನ್ನು ಒ.ಬಿ.ಸಿ.ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಆದೇಶ ಪತ್ರವನ್ನು ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜಿಲ್ಲೆಯ ಹಿಂದುಳಿದ ವರ್ಗದ, ಬಡವರ, ದೀನದಲಿತರ, ನಾಡಿಮಿಡಿತವನ್ನು ಅರಿತು ಕಾಯ೯ನಿವ೯ಹಿಸಬೇಕೆಂದು ಸೂಚಿಸಿದರು.
ಅಭಿನಂದನೆಗಳು – ಯುವ ಧುರೀಣ ನಿಂಗನಗೌಡ ಮಂಟೂರ ಅವರಿಗೆ ಸಕಾ೯ರ ಹಾಗೂ ಕಾಂಗ್ರೆಸ್ ಪಕ್ಷವು ಗುರುತರವಾದ ಜವಾಬ್ದಾರಿ ನೀಡಿದೆ.ಕೊಟ್ಟ ಅವಕಾಶ ಬಳಸಿಕೊಂಡು ಸಕಾ೯ರದ ಅನೇಕ ಜನಪರ ಯೋಜನೆಗಳನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಲಿ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹಾರೈಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರಾದ ಮಹಾದೇವ ಇಟಕ್ಕನವರ, ಶಂಕರಗೌಡ ಪಾಟೀಲ ಹಾಗೂ ಪಕ್ಷದ ಯುವ ಮುಖಂಡರಾದ ಬಿಳಿಯಾನಿಸಿದ್ದ ಸೋಮಲಿಂಗಪ್ಪ ಒಡೆಯರ, ಅನೀಲಗೌಡ ಮಂಟೂರ, ಮಹಾಲಿಂಗಯ್ಯ ಬಬಲಾದಿಮಠ, ಪರಮಾನಂದ ಗೂಳಪ್ಪ ಕಳ್ಳೆನ್ನವರ ಮುಂತಾದವರು ಅಭಿನಂದಿಸಿದರು

