ಮಣ್ಣೂರ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಮಣ್ಣೂರಲ್ಲಿ ದಿ.17 ರಂದು ಐದು ದಿನಗಳ ತರಬೇತಿಯಲ್ಲಿ ಮೊದಲೆರಡು ದಿನ ಮರುಸಿಂಚನ ತರಬೇತಿ ಶಿಬಿರ ಆರಂಭಗೊಂಡಿತು.
6 ರಿಂದ 10ನೇ ತರಗತಿಯ ಕಲಿಕಾ ಕೊರತೆಯನ್ನು ನಿವಾರಿಸಲು ಸರ್ಕಾರದ ವತಿಯಿಂದ ರೂಪಿಸಲಾದ ಈ ಬಹುನಿರೀಕ್ಷಿತ ತರಬೇತಿ ಕುರಿತು ಡಯಟ್ ಪ್ರಾಂಶುಪಾಲರಾದ ಬಸವರಾಜ ನಾಲವಾತವಾಡ ಅವರು, “ಶಿಬಿರಾರ್ಥಿಗಳು ಇಲ್ಲಿ ಪಡೆಯುವ ಜ್ಞಾನವನ್ನು ಶಾಲಾ ಮಟ್ಟದಲ್ಲಿ ಪರಿಣಾಮಕಾರಿ ರೀತಿಯಲ್ಲಿ ಅನುಷ್ಠಾನ ಮಾಡಿದರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸ್ಪಷ್ಟವಾದ ಬದಲಾವಣೆ ಕಾಣಬಹುದು” ಎಂದು ಹೇಳಿದರು.
ಶಿಬಿರವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಹಿರಿಯ ಉಪನ್ಯಾಸಕರಾದ ಸಲೀಂ ನದಾಫ ತರಬೇತಿಯ ರೂಪುರೇಷೆ ಮತ್ತು ಗುರಿಗಳನ್ನು ವಿವರಿಸಿದರು. ಕೆ ಎಸ್ ಸುಣಧೊಳಿ ಹಿರಿಯ ಉಪನ್ಯಾಸಕರು ಡಯಟ್ ಹಾಗೂ ಎಮ್‌ಆರ್‌ಪಿಗಳಾದ ಎಮ್.ವಾಯ್. ಕಡಕೋಳ, ಬಾಬುರಾವ್ ಚಚಡಿ ಮತ್ತು ಉಮೇಶ ಕಲಾರಕೊಪ್ಪ ಉಪಸ್ಥಿತರಿದ್ದರು.

