ಭಾರತದ ಇತಿಹಾಸದಲ್ಲಿ ಬಿಜಾಪುರ ( ಈಗಿನ ವಿಜಯಪುರ) ವೊಂದು ಐತಿಹಾಸಿಕ ಸ್ಥಳವಾಗಿದೆ. ಅಲ್ಲಿರುವ ಗೋಲ್ ಗುಂಬಜ್ ಪ್ರಸಿದ್ಧ ತಾಣವಾಗಿದೆ . ಅದಲ್ಲದೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇವೆ. ಅದಕ್ಕೆ ಇನ್ನೊಂದು ಹೆಸರು “ಗುಮ್ಮಟ ನಗರಿ” ಎಂದು ಕರೆಯುತ್ತಾರೆ . ಏಕೆಂದರೆ ಎಲ್ಲಿ ನೋಡಿದರೂ ಗುಮ್ಮಟಗಳು ಕಾಣಿಸುವುದರಿಂದ ಗುಮ್ಮಟ ನಗರಿ ಎಂದು ಕರೆಯುತ್ತಾರೆ.
ಇಂತಹ ಸುಂದರ ತಾಣದಲ್ಲಿ ಒಂದು ಹೇಯ ಕೃತ್ಯವನ್ನು ನಡೆದು ಹೋದ ದುರಂತ ಕಥೆ ಇನ್ನೂ ಜೀವಂತವಾಗಿದೆ.
ಹದಿನೇಳನೆಯ ಶತಮಾನದ ಆರಂಭದಲ್ಲಿ ಹುಟ್ಟಿದ ಶೂರ ಧೀರ ಧೈರ್ಯವಂತ ಸಾಹಸಿಗನೆಂದು ಪ್ರಖ್ಯಾತವಾಗಿರುವ ವ್ಯಕ್ತಿ “ಅಫ್ಜಲ್ ಖಾನ್ ” ಆದಿಲ್ ಶಾಹಿಯ ದರ್ಬಾರಿನ ಸೇನೆಯ ಮುಖ್ಯಸ್ಥನಾಗಿದ್ದ ಅಫ್ಜಲ್ ಖಾನ್ ಏಳು ಫೀಟಿನ ಅಳ ಎತ್ತರದ ಮನುಷ್ಯ. ಈತನನ್ನು ನೋಡಿದರೆ ಭಯ ಪಡುವಂತಹ ವ್ಯಕ್ತಿ ಆಗಿದ್ದರಿಂದ ಸಾಕಷ್ಟು ಜನರು ಭಯ ಪಡುತ್ತಿದ್ದರು . ನಡೆ ನುಡಿಗಳ ಕ್ರೌರ್ಯ ಹಾಗಿತ್ತು. ಆದರೆ ಕಾಯಕಕ್ಕೆ ಎತ್ತಿದ ಕೈ .ಎಂತಹ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದ್ದ. ಹೀಗಾಗಿ ರಾಜ್ಯ ವಂಶದ ಮುಖ್ಯ ಸೇನಾಧಿಪತಿಯಾಗಿದ್ದ .ಇವನ ಆಳ್ವಿಕೆಯಲ್ಲಿ ಅನೇಕ ಗ್ರಾಮಗಳು ಕೈವಶ ಮಾಡಿಕೊಳ್ಳುವ ಮೂಲಕ ಮಾಜಿ ಸಾಮಂತ ಛತ್ರಪತಿ ಶಿವಾಜಿ ಮಹಾರಾಜರನ್ನು ಮುಗಿಸುವ ಹೊಂಚು ಹಾಕಿದ ಮೊಹಮ್ಮದ್ ಆದಿಲ್ ಶಾಹಿಯ ತಾಯಿ ಆಜ್ಞೆಯ ಮೇರೆಗೆ ಅಫ್ಜಲ್ ಖಾನನ್ನು ನೇಮಿಸಲಾಯಿತು.
1956 ಬಿಜಾಪುರದ ಸರ್ಕಾರವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಮಾಜಿ ಸಾಮಂತ ಛತ್ರಪತಿ ಶಿವಾಜಿ ಮಹಾರಾಜರನ್ನು ಆಧಿನಗೋಳಿಸಲು ಮುಂದಾದ ಅಫ್ಜಲ್ ಖಾನ್ 10 ಸಾವಿರ ಸೈನಿಕರನ್ನು ಮತ್ತು 12 ಸಾವಿರ ಕುದುರೆ ಸವಾರಿಯ ಸಾರಥ್ಯದಲ್ಲಿ ಪ್ರತಾಪ ಗಢಕ್ಕೆ ಸಾಗುವ ಮುನ್ನ ಅಫ್ಜಲ್ ಖಾನ್ ಯಾವುದೇ ಕೆಲಸದ ಮೊದಲು ತನ್ನ ಗುರುವಿನ ಹತ್ತಿರ ಹೋಗಿ ಮುಂದಿನ ಸಲಹೆ ಕೇಳಿ ಬರುತ್ತಿದ್ದ .
ಅಫ್ಜಲ್ ಖಾನ್ ಬರುತ್ತಿದ್ದಂತೆ , ಅವನ ಸಾವಿನ ನೆರಳು ನೋಡಿದ ಗುರು ಹೇಳಿದ ಮಾತು ” ನೀನು ಯುದ್ಧಕ್ಕೆ ಹೋದರೆ ಹಿಂದುರುಗಿ ಬರುವುದಿಲ್ಲ” ಎಂದು ಹೇಳಿದ್ದು ಕೇಳಿ ಅಫ್ಜಲ್ ಖಾನ್ ಇನ್ನು ನಾನು ಉಳಿಯುವುದಿಲ್ಲ ಎಂದು ವಿಚಲಿತನಾದ. ಆದರೂ ಧೈರ್ಯ ಮಾಡಿ ಹೋಗಲು ಅಣಿಯಾದ . ತಾನು ಸತ್ತರೆ ತನ್ನ ಅರವತ್ತು ಮೂರು ಹೆಂಡಂದಿರು ಮತ್ತೊಬ್ಬರ ತೆಕ್ಕೆಯಲ್ಲಿ ಬಂಧಿ ಆಗುವರೆಂದು ತನ್ನೆಲ್ಲ ಧರ್ಮ ಪತ್ನಿಯರನ್ನು ಒಂದೆಡೆ ಸೇರಿಸಿ, ಹೋಗುವ ಮುಂಚೆ ಒಬ್ಬೊಬ್ಬರಾಗಿ ಕರೆದು ಅವರನ್ನು ಕೊಲೆ ಮಾಡಿ ಬಾವಿಯೊಳಗೆ ಹಾಕುತ್ತಾ ಹೋದ.ಪಾಪ ಏನು ಅರಿಯದ ಮುಗ್ಧ ಹೆಣ್ಣು ಜೀವಗಳ ಜೊತೆಗೆ ರಕ್ತ ದೋಕಳಿ ಆಡಿದ.
ಒಬ್ಬರೊಬ್ಬರ ಜೀವ ತೆಗೆಯುತ್ತಿದ್ದಂತೆ ಅವರ ಚೀರಾಟ ಕೇಳಿ ಉಳಿದ ಹೆಣ್ಣು ಮಕ್ಕಳು ಎಷ್ಟೇ ಬೇಡಿ ಕೊಂಡರು ಬಿಡದೆ ಅವರನ್ನು ಎಳೆದೆಳೆದು ಜೀವಗಳನ್ನು ಚೆಂಡಾಡಿದ. ಅರವತ್ತು ಹೆಣ್ಣು ಮಕ್ಕಳ ಕೊಲೆ ಮಾಡುವುದರಲ್ಲಿ ಮೂವರು ಪತ್ನಿಯರು ತಪ್ಪಿಸಿ ಕೊಂಡು ಹೋದರಾದರೂ ಅವರನ್ನು ಬಿಡದೆ ಬೆನ್ನು ಹತ್ತಿ ಎಲ್ಲಿ ಹೋಗಿದ್ದಾರೆ ಅಲ್ಲಿಯೇ ಕೊಲೆ ಮಾಡಿ ಸಮಾಧಿ ಮಾಡಿದ ಭೂಪ ಅಫ್ಜಲ್ ಖಾನ್.
ಅರವತ್ತು ಮೂರು ಧರ್ಮ ಪತ್ನಿಯರನ್ನು ಒಂದೆಡೆ ಸಮಾಧಿ ಮಾಡಿದ. ಆದರೆ ಮೂವರು ತಪ್ಪಿಸಿ ಕೊಂಡು ಹೋದವರ ಕುಣಿಗಳು ಖಾಲಿ ಇವೆ. ಅರವತ್ತು ಘೋರಿಗಳ ದಾಖಲೆ ಉಳಿದು ಕೊಂಡಿದೆ .
ಎಂತಹ ದುರ್ದೈವಿ ಆ ಹೆಣ್ಣು ಮಕ್ಕಳು.ಅಫ್ಜಲ್ ಖಾನನ ದುಷ್ಟತನಕ್ಕೆ ಬಲಿಯಾದ ಘಟನೆ ಇನ್ನೂ ಜೀವಂತವಾಗಿದೆ ” ಸಾಠ್ ಖಬ್ರ್ ” ಬಿಜಾಪುರದ ಪ್ರಸಿದ್ಧ ತಾಣವಾಗಿದೆ .
ಈಗಲೂ ಆ ಒಂದು ಬಾವಿಯ ಸ್ಥಳದಲ್ಲಿ
ರಾತ್ರಿ ಹೊತ್ತು ಚೀರುವ ದ್ವನಿ ಕೇಳಿ ಬರುತ್ತದೆ ಎಂದು ಹೇಳುತ್ತಾರೆ ಅಲ್ಲಿಯ ಜನರು. ಎಂತಹ ವಿಪರ್ಯಾಸ ನೋಡಿ ಹೆಣ್ಣಿನ ಜೀವನ.
ಶ್ರೀಮತಿ ಅಮರಾವತಿ ಹಿರೇಮಠ
9108259250

