ಸಿಂದಗಿ ಪ್ರೀಮಿಯರ್ ‌ಲೀಗ್  ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಉಪಾಧ್ಯಕ್ಷರಾಗಿ ಹಾಸೀಂ ಆಳಂದ ಆಯ್ಕೆ.

Must Read

ಸಿಂದಗಿ –  ವಿಜಯಪುರ  ಜಿಲ್ಲೆಯಲ್ಲಿಯೆ ಹೆಸರುವಾಸಿ ಯಾಗಿರುವ ಹೊನಲು ಬೆಳಕಿನ ಕ್ರಿಕೆಟ್ ಲೀಗ್ ಪಂದ್ಯಗಳು ಪ್ರತಿವರ್ಷದಂತೆ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ (ಪುಣ್ಯತಿಥಿ) ಅಂಗವಾಗಿ ಡಿಸೆಂಬರ್ ಆರರಿಂದ ಪ್ರಾರಂಭ ವಾಗುವುದು ಎಂದು ಎಸ್.ಪಿ.ಎಲ್. ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಎಸ್.ಪಿ.ಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ವರ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡುವುದು ಎಸ್.ಪಿ.ಎಲ್ ಸಂಯೋಜಕರು ಮಾಡಿಕೊಂಡು ಬಂದಿರುವುದು ರೂಡಿ. ಈ ಬಾರಿ ಸಿಂದಗಿ ಹೆಸರು ಮತ್ತಷ್ಟು ಪ್ರಚಲಿತ ಗೋಳಿಸಲು ಜಿಲ್ಲೆಯ ಪ್ರಮುಖ ಆಟಗಾರರನ್ನು ಈ ಬಾರಿ ಪಾಲ್ಗೊಳ್ಳಲಿರುವ ಎಂಟು ತಂಡದ ಮಾಲೀಕರು ತಮ್ಮ ತಂಡದಲ್ಲಿ ಕೂಡಿಸಿ ಕೊಂಡಿರುವುದು ತಾಲೂಕು ಮತ್ತು ಗ್ರಾಮೀಣ ಆಟಗಾರರಿಗೆ ವಿಶೇಷ ಅನುಭವ ದೂರಕಲಿದೆ ಎಂದರು

ಡಿಸೆಂಬರ್ ಆರರಿಂದ ಪ್ರಾರಂಭವಾಗುವ ಹೊನಲು ಬೆಳಕಿನ ಕ್ರಿಕೇಟ್ ಲೀಗ್ ಪಂದ್ಯಕ್ಕೆ ಪ್ರಥಮ ಬಹುಮಾನವನ್ನು ಯುವ ಉದ್ಯಮಿ ವೆಂಕಟೇಶ್ ಆರ್ ಗುತ್ತೇದಾರ ಎರಡು ಲಕ್ಷ ರೂಪಾಯಿ, ದ್ವಿತೀಯ ಬಹುಮಾನ ಬಿಜೆಪಿ ಮುಖಂಡ ರವಿ ನಾಯ್ಕೋಡಿ ಒಂದು ಲಕ್ಷ ರೂಪಾಯಿ, ತೃತೀಯ ಬಹುಮಾನ ರೈತ ಮುಖಂಡ ಪೀರು ಕೇರೂರ ಐವತ್ತು ಸಾವಿರ ರೂಪಾಯಿ, ಹಾಗೂ ನಾಲ್ಕನೇ ಬಹುಮಾನ ಕಾಂಗ್ರೆಸ್ ಯುವ ಮುಖಂಡ ಇರ್ಫಾನ ಬಾಗವಾನ ನೀಡಿದ್ದಾರೆ.

“ ಅರಿವೇ ಅಂಬೇಡ್ಕರ್ – ಅಮರ ಅಂಬೇಡ್ಕರ್ ” ಎಂಬ ಘೋಷವಾಕ್ಯದೊಂದಿಗೆ ಅಂಬೇಡ್ಕರರ ಸ್ಮರಣೆ ಟೂರ್ನಿಯುದ್ದಕ್ಕೂ ನಡೆಯಲಿದೆ. ನೂತನವಾಗಿ ಎಸ್.ಪಿ.ಎಲ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಇರ್ವರಿಗೂ ಅಭಿನಂದನೆ ತಿಳಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತವೀರ ಬಿರಾದಾರ ಮಾತನಾಡಿ ನೀಮ್ಮಲ್ಲಿ ಒಬ್ಬರಾಗಿ ಎಸ್.ಪಿ.ಎಲ್ ಹಾಗೂ ಸಿಂದಗಿಯ ಉತ್ತುಂಗಕ್ಕೆ ಶ್ರಮಿಸುವೆ ಎಂದು ಹೇಳಿದರು.

ಈ ‌ಸಮಯದಲ್ಲಿ ಎಸ್.ಪಿ.ಎಲ್.ಸಹ ಸಂಯೋಜಕ ಜಿಲಾನಿ ನಾಟೀಕಾರ, ಸಂಯೋಜಕರಾದ ಮಹ್ಮದ್ ಪಟೇಲ ಬಿರಾದಾರ, ಮಲ್ಲು ಕೂಚಬಾಳ, ಶಿವಾನಂದ ಆಲಮೇಲ, ಹುಸೇನ ತಾಂಬೋಳಿ, ಸಿದ್ದು ಮ್ಯಾಗೇರಿ, ಬಾಲಕೃಷ್ಣ ಛಲವಾದಿ, ಮುತ್ತು , ದಿನೇಶ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group