ಮೂಡಲಗಿ – ಮೂಡಲಗಿಯ ಉಪನೋಂದಣಿ ಕಚೇರಿಯು ಬರುವ ನಾಲ್ಕನೇ ಶನಿವಾರ ರಜಾ ದಿನದಂದು ಸಾರ್ವಜನಿಕ ಸೇವೆಗೆ ಲಭ್ಯವಿರುತ್ತದೆ.. ದಿ. 25 ರಂದು ಮಂಗಳವಾರ ಕಚೇರಿಗೆ ರಜೆ ಕೊಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಉಪ ಕಾರ್ಯದರ್ಶಿಗಳು ಕಂದಾಯ ಇಲಾಖೆ ಇವರ ಅಧಿಸೂಚನೆ ಸಂಖ್ಯೆ:ಕಂಇ/39/ಎಂಎಸ್‌ಎಂಯು/2024/ಇ ಬೆಂಗಳೂರು, ದಿನಾಂಕ:20-05-2025 ಮತ್ತು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ ಜ್ಞಾಪನ ಪತ್ರ ಸಂಖ್ಯೆ:ಆರ್‌ಜಿಎನ್/163/2025-26 ದಿನಾಂಕ:23-05-2025ರ ಆದೇಶದಂತೆ, ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳು ಸರದಿಯ ಆಧಾರದ ಮೇಲೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರ ರಜಾ ದಿನದಂದು ಕರ್ತವ್ಯ ನಿರ್ವಹಿಸುವ ಒಂದು ಉಪ ನೋಂದಣಿ ಕಛೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಿ ಆದೇಶಿಸಿದ್ದಾರೆ.
ಅದರಂತೆ ದಿನಾಂಕ:22-11-2025ರ 4ನೇ ಶನಿವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ಉಪ ನೋಂದಣಿ ಕಛೇರಿಯು ಕರ್ತವ್ಯ ನಿರ್ವಹಿಸಲಿದ್ದು, ಬರುವ ಮಂಗಳವಾರ ದಿನಾಂಕ:25-11-2025ರ ಈ ಕಛೇರಿಗೆ ರಜೆ ಇರುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಮಹಾಂತೇಶ ಪಟಾತರ ಜಿಲ್ಲಾ ನೋಂದಣಿ ಅಧಿಕಾರಿಗಳು ಬೆಳಗಾವಿ ಹಾಗೂ ಹರಿಯಪ್ಪ ಓ ಉಪ ನೋಂದಣಿ ಅಧಿಕಾರಿ ಮೂಡಲಗಿ ಮನವಿ ಮಾಡಿದ್ದಾರೆ.

