ಕಲಬುರಗಿ :ಶಿಕ್ಷಕಿ ನಂದಿನಿ ಸನಬಾಳ್ ಹಾಗೂ ಹಿರಿಯ ಮುಖ್ಯ ಶಿಕ್ಷಕಿ ನಾಗಲಾಂಬಿಕಾ ಬೀಳ್ಕೊಡುಗೆ ಕಲಬುರಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ ಗ್ರಾಮದಲ್ಲಿ ಹೆಚ್ಚುವರಿ ಯಾಗಿ ವರ್ಗಾವಣೆಗೊಂಡ ಶಿಕ್ಷಕರಿಗೆ ಶಾಲಾ ವಿದ್ಯಾರ್ಥಿಗಳಿಂದ,ಶಿಕ್ಷಕರಿಂದ, ಎಸ್ ಡಿ ಎಂ ಸಿ ಹಾಗೂ ಅಡುಗೆ ಸಿಬ್ಬಂದಿಯವರಿಂದ ಸನ್ಮಾನ ಮಾಡಲಾಯಿತು.
ನಾಗಲಾಂಬಿಕ ಮುಖ್ಯ ಶಿಕ್ಷಕಿಯರ ಆಡಳಿತ ತುಂಬಾ ಗಟ್ಟಿಯಾಗಿತ್ತು ಹಾಗೂ ಅವರ ಕಾರ್ಯ ವೈಖರಿ ಶ್ಲಾಘನೀಯವಾಗಿತ್ತು ಮತ್ತು ನಂದಿನಿ ಸನಬಾಳ ಇವರು ಪಾಠ ಬೋಧನೆಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಮಕ್ಕಳನ್ನು ಸ್ಪರ್ಧೆಗಳಿಗೆ ಸಿದ್ದಗೊಳಿಸುತ್ತಿದ್ದರು ಎಂದು ಭವಾನಿ ಭಟ್ ಶಿಕ್ಷಕಿ ಮಾತನಾಡಿದರು.
ನಾಗಲಾಂಬಿಕ ಮುಖ್ಯ ಶಿಕ್ಷಕಿಯರ ಶಿಸ್ತಿನ ಆಡಳಿತ ನಮಗೆ ಮಾದರಿಯಾಗಿದೆ ಹಾಗೂ ನಂದಿನಿ ಸನಬಾಳ ಎಂದರೆ ನಗುಮೊಗದ ಅಜಾತಶತ್ರು ಎಂದರೆ ತಪ್ಪಾಗಲಿಕ್ಕಿಲ್ಲ ಹಾಗೂ ಇವರಲ್ಲಿರುವ ಸಹನೆ ತಾಳ್ಮೆ ನಾವು ಕೂಡ ಅಳವಡಿಸಿಕೊಂಡಿದ್ದೇವೆ ತುಂಬಾ ಆತ್ಮೀಯವಾಗಿ ಎಲ್ಲಾ ಶಿಕ್ಷಕಿಯರೊಂದಿಗೆ, ಮಕ್ಕಳು ಹಾಗೂ ಪಾಲಕ ಪೋಷಕರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಶಿಕ್ಷಕಿಯಾಗಿದ್ದರು ಎಂದು ರೋಹಿಣಿ ಧನಶೆಟ್ಟಿ ಶಿಕ್ಷಕಿ ಹೇಳಿದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಿಕ್ಷಕಿಯರಿಗೆ ಶುಭವಾಗಲಿ ಎಂದು ವಿಜಯ್ ಕುಮಾರ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲಬುರಗಿ ದಕ್ಷಿಣ ಶುಭ ಹಾರೈಸಿದರು, ಇಸಿಓ, ಶ್ರೀಕಾಂತ ಸಿಆರಸಿ. ಗೌತಮ್ ದಂಡಿನ್ಕರ್, ರಮೇಶ ಹಾಗರಗಿ , ಗೀತಾ ಭರಣಿ, ಅಂಬಿಕಾ ಅಬ್ಬಿಗೇರಿ, ಶೇಶಿಕಲಾ, ಮಲ್ಲಮ್ಮ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

