ಹುನಗುಂದ: ಮಾಜಿ ಸಚಿವ ಜನನಾಯಕ ಎಸ್.ಆರ್. ಕಾಶಪ್ಪನವರ ಅವರ ಜನ್ಮ ಅಮೃತ ಮಹೋತ್ಸವವನ್ನು ೨೦೨೬ ರಲ್ಲಿ ಹಮ್ಮಿಕೊಳ್ಳಲಾಗಿದೆ.
ಆ ನಿಮಿತ್ತ ಸಂಸ್ಮರಣ ಗ್ರಂಥವನ್ನು ಪ್ರಕಟಿಸಲಾಗುವುದು. ಅವರ ಒಡನಾಡಿಗಳು, ಆಪ್ತರು, ಸಂಪರ್ಕದಲ್ಲಿ ಇದ್ದವರು ಅವರ ಬಗ್ಗೆ ಲೇಖನ ಕಳಿಸಬಹುದು. ಅಲ್ಲದೆ ಅವರ ಜೊತೆಗಿನ ಅಥವಾ ವಿವಿಧ ಸಂದರ್ಭಗಳಲ್ಲಿ ತೆಗೆದ ಫೋಟೋಗಳನ್ನು ಕೂಡ ಕಳಿಸಬಹುದು.
ಸ್ಕ್ಯಾನ್ ಮಾಡಿಕೊಂಡು ಮತ್ತೆ ತಮಗೆ ಫೋಟೋಗಳನ್ನು ಮರಳಿಸಲಾಗುವುದು. ಲೇಖನ ನಾಲ್ಕು ಪುಟಗಳಲ್ಲಿ ಇರಲಿ. ಬರೆದಿರಬಹುದು ಅಥವಾ ಡಿ.ಟಿ.ಪಿ. ಮಾಡಿರಬಹುದು. ತಮ್ಮ ಲೇಖನಗಳನ್ನು ಸಿದ್ದಲಿಂಗಪ್ಪ ಬೀಳಗಿ ಸಂಪಾದಕರು ಹಾಗೂ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ೫೮೭೧೧೮ (ಮೊ.೭೮೯೨೮೩೪೧೪೪) ಇವರಿಗೆ ಡಿಸೆಂಬರ್ ೩೧ ರೊಳಗೆ ಕಳಿಸಬೇಕು ಎಂದು ಪ್ರಧಾನ ಸಂಪಾದಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

