ಬಾಗಲಕೋಟೆ : ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢ ಶಾಲೆ 9 ನೇ ತರಗತಿ ವಿದ್ಯಾರ್ಥಿ ಮಹೇಶ ಎಚ್ ಕರಡಿ ಸೃಜನಾತ್ಮಕ ಕಲೆ ಸ್ಪರ್ಧೆಯಲ್ಲಿ ಬಾಗಲಕೋಟೆ ಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಬಾಗಲಕೋಟ ಜಿಲ್ಲೆಯಿಂದ ಪ್ರತಿನಿಧಿಸಿ ಬೆಂಗಳೂರಿನ ಬಾಲ ಭವನ ಸೊಸೈಟಿಯಲ್ಲಿ ನೆಡೆದ ಸೃಜನಾತ್ಮಕ ಕಲೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಬಾಗಲಕೋಟ ಜಿಲ್ಲೆ ಹಾಗೂ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢ ಶಾಲೆ ಮತ್ತು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ವಿದ್ಯಾರ್ಥಿ ಮತ್ತು ಮಾರ್ಗದರ್ಶನ ಮಾಡಿದ ಚಿತ್ರಕಲಾ ಶಿಕ್ಷಕರಾದ ಎಸ್ ಎಸ್ ಗೌಡರ ಗುರುಗಳನ್ನು ಇಲಕಲ್ಲ ಹುನಗುಂದ ಅವಳಿ ತಾಲೂಕು ಹಾಗೂ ಬಾಗಲಕೋಟ ಜಿಲ್ಲೆಯ ಎಲ್ಲಾ ಚಿತ್ರಕಲಾ ಶಿಕ್ಷಕರು ಗ್ರಾಮದ ಸರಕಾರಿ ಪ್ರೌಢ ಶಾಲೆ ಎಸ್ ಡಿ ಎಂ ಸಿ ಯವರು ಎಲ್ಲ ಶಾಲೆಯ ಗುರುಗಳು ಶಿಕ್ಷಣ ಪ್ರೇಮಿಗಳು ಗ್ರಾಮಸ್ಥರು ಪರವಾಗಿ ಅಭಿನಂದಿಸಿದ್ದಾರೆ.

