ಸಿಂದಗಿ: ಶಾಸಕ ಅಶೋಕ ಎಮ್ ಮನಗೂಳಿ ರವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯವಾಗಿ ದೆಹಲಿಗೆ ತೆರಳಿದ್ದಾರೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಮತ್ತು
ಮಾಧ್ಯಮಗಳಲ್ಲಿ ಬರುತ್ತಿರುವ ವಿಷಯ ಕಪೋಕಲ್ಪಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ನಾನು ನಾಯಕತ್ವ ಬದಲಾವಣೆ ವಿಷಯವಾಗಿ ನಮ್ಮ ಪಕ್ಷದ ಹೈ-ಕಮಾಂಡ್ ಜೊತೆ ಚರ್ಚೆಮಾಡುವಷ್ಟು ದೊಡ್ಡ ನಾಯಕನಲ್ಲ. ಪಕ್ಷದ ಹಿತದೃಷ್ಟಿಯಿಂದ ಆ ವಿಷಯವಾಗಿ ಬಗೆಹರಿಸಿಕೊಳ್ಳಲು ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಸಮರ್ಥರಿದ್ದಾರೆ. ನಾನು ಈ ಇಬ್ಬರೂ ನಾಯಕತ್ವ ದಲ್ಲಿ ವಿಶ್ವಾಸ ಹೊಂದಿರುತ್ತೇನೆ. ನಾನು ದೆಹಲಿಗೆ ತೆರಳಿರುವ ವಿಷಯವೆಂದರೆ ಒಂದು ವೇಳೆ ರಾಜ್ಯದಲ್ಲಿ ಸಂಪುಟ ಪುನರ ರಚನೆಯಾದರೆ ವಿಜಯಪುರ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಹಿಂದಿನಿಂದಲೂ ಕಾಂಗ್ರೇಸ್ ಪಕ್ಷದ ಪರವಾಗಿ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಟ್ಟ ಜಿಲ್ಲೆಯಾಗಿದೆ ಆದ್ದರಿಂದ ಈಗಾಗಲೇ ಇರುವ ಇಬ್ಬರೂ ಸಚಿವರನ್ನು ಸಂಪುಟದಲ್ಲಿ ಮುಂದುವರೆಸುವ ಜೊತೆಗೆ ಹೆಚ್ಚುವರಿಯಾಗಿ ಇನ್ನೊಂದು ಸಚಿವ ಸ್ಥಾನವನ್ನು ನಮ್ಮ ಜಿಲ್ಲೆಗೆ ನೀಡಬೇಕು ಮತ್ತು ಸಚಿವರಾದ ಶಿವಾನಂದ ಪಾಟೀಲ ರವರನ್ನು ಸಂಪುಟದಿಂದ ಕೈ ಬಿಡಬಾರದು ಎಂಬ ವಿಷಯವಾಗಿ ದೆಹಲಿಗೆ ತೆರಳಲಾಗಿತ್ತು ಎಂಬುವದನ್ನು ಈ
ಮೂಲಕ ಸ್ಪಷ್ಟ ಪಡಿಸುತ್ತೇನೆ ಎಂದಿದ್ದಾರೆ

