ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರಿಂದ ರೂ 12. ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಶಹರ ಸಿಪಿಆಯ್ ಆರ್,ಬಿ, ಸುರೇಶಬಾಬು ಹೇಳಿದರು.
ಅಕ್ಟೋಬರ 31 ಹಾಗೂ ನವೆಂಬರ 1 ರಂದ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಕೇಶವಾಪೂರ ಮೂಲದ ನಂದೀಶ ಹನುಮಂತಪ್ಪ ಸಕ್ತನವರ,ನವೀನ ಅಶೋಕ ಮುಂಡರಗಿ,ರಮೇಶ ಶಂಕರಪ್ಪ ಅಗಡಿ ಇವರು ಗೋಕಾಕ ನಗರದ ಸಚೀನ ಅಶೋಕ ಗೊಂದಳಿ ಇವರ ಮನೆಯ ಬೀಗ ಮುರಿದು ಮನೆಗಳ ಕಪಾಟಿನಲ್ಲಿ ಇಡಲಾಗಿದ್ದ ಅಪಾರ ಚಿನ್ನಾಭರಣ ಕಳ್ಳತನ ಮಾಡಿದ್ದರು.
‘ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ನಂತರ ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ’ ಎಂದು ಅವರು ಹೇಳಿದರು.
ಇನ್ನು ನಗರದ ಪ್ರಮುಖ ಪ್ರದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವುದು ಸವಾಲಾಗಿತ್ತು. ಪೊಲೀಸ್ ಅಧಿಕಾರಿಗಳ ಚಾಣಾಕ್ಷ ನಡೆಯಿಂದ ಆರೋಪಿಗಳ ಬಂಧನ ಸಾಧ್ಯವಾಗಿದೆ’ ಎಂದರು.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಇವರು ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಶಹರ ಠಾಣೆಯ ಪಿಎಸ್‌ಐ ಕಿರಣ ಮೊಹಿತೆ,ಹೆಚ್ಚುವರಿ ಪಿಎಸ್‌ಐ ನಿಖೀಲ ಕಾಂಬಳೆ, ಸಿಬ್ಬಂದಿಗಳಾದ ಕುಮಾರ ಇಳಿಗೇರ,ಮಂಜು ಹುಚ್ಚಗೌಡರ,ಎ,ಸಿ ಕಾಪಸಿ ಸೇರಿದಂತೆ ಬೆಳಗಾವಿಯ ಟೆಕ್ನಿಕಲ್ ಸೆಲ್ ನವರ ಕಾರ್ಯವನ್ನು ಶ್ಲಾಘಿಸಿದ್ದಾರೆ .

