ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ, ಶ್ರೀ ಶಿವಬೋಧ ರಂಗ ಪ್ರೌಢ ಶಾಲೆಯಲ್ಲಿ ” ಮಕ್ಕಳ ದಿನಾಚರಣೆ” ಪ್ರಯುಕ್ತ ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ/ನಿಯರಿಗೆ ನೋಟ-ಬುಕ್ ಹಾಗೂ ಪೆನ್ನುಗಳನ್ನು ಶಿಕ್ಷಕ ರಮೇಶ ಎಸ್. ಬಿರಾದಾರ ಅವರು ಉಚಿತವಾಗಿ ನೀಡಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ ಆರ್. ಸೋನವಾಲ್ಕರ, ನಿರ್ದೇಶಕರಾದ ಸಂದೀಪ ಸೋನವಾಲ್ಕರ ಹಾಗೂ ಗುರುಗಳು ಮತ್ತು ಗುರು ಮಾತೆಯರಾದ ಜ್ಯೋತಿ ಬಂಡಿವಡ್ಡರ, ವೀಣಾ ಸರೀಕರ, ಆರ್ ಕೆ ಕಳಸನ್ನವರ, ಎಸ್ ಆರ್ ಗಲಗಲಿ, ಆರ್. ಎಂ. ಕಾಂಬಳೆ ಉಪಸ್ಥಿತರಿದ್ದರು.
ಉಪಪ್ರಾಚಾರ್ಯರಾದ ಬಿ. ಕೆ. ಕಾಡಪ್ಪಗೋಳ ಸ್ವಾಗತಿಸಿದರು, ಶ್ರೀಮತಿ ಕವಿತಾ ಬಾರಡ್ಡಿ ನಿರೂಪಿಸಿದರು ಮತ್ತು ಎಸ್. ಎಸ್. ಕುರಣೆ ವಂದಿಸಿದರು.

