ಬೆಂಗಳೂರು: ಬೆಂಗಳೂರಿನ ಶಿಕ್ಷಕರ ಸದನ ಸಭಾ ಭವನದಲ್ಲಿ ನವೋದಯ ಹಬ್ಬ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಲಾಯಿತು.
ಚಲನಚಿತ್ರ ನಟ ಸಾಯಿಪ್ರಕಾಶ್, ಸ್ಪಾರ್ಕ್ ಅಕಾಡೆಮಿ ಅಧ್ಯಕ್ಷರಾದ ಸೋಮೇಶ ನವೋದಯ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಮಹೇಶ್ ಪಿ, ಕೆ ಬಿ ಮಹದೇವಯ್ಯ, ಸಾವಿತ್ರಿ ಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲತಾ ಮೇಡಂ, ಶ್ರೀಮತಿ ನಿಶ್ಚಿತ, ವೇಣು ಸಿ ವಿ, ಮುಂತಾದ ಗಣ್ಯ ಮಾನ್ಯರು ಭಾಗವಹಿಸಿದ್ದರು.
ಎಳ್ಳು ಬೆಲ್ಲ, ಯಶೋಗಾಥರು, ಚಂದಮಾಮ, ಮೊಗ್ಗರಳಿ ಹೂವಾಗಿ, ಗುರು ನಮನ, ನವರಾತ್ರಿ , ವಿವೇಕ ಕಾವ್ಯ ಸಿರಿ ಕವನ ಸಂಕಲನಗಳು, ಶತ್ರುಂಜಯ ಪ್ರವಾಸ ಕಥನ, ಕ್ಷಣ ಹೊತ್ತು ಅನುಭವ ಮುತ್ತು ಲೇಖನ ಕೃತಿ ಸೇರಿದಂತೆ ಕನ್ನಡ ಸಾರಸ್ವತ ಲೋಕಕ್ಕೆ 14 ಕೃತಿಗಳನ್ನು ನೀಡಿರುವ ಸಂತೋಷ್ ಬಿದರಗಡ್ಡೆ ಅವರು 2005 ರ ಬಾದಾಮಿಯ ಚಾಲುಕ್ಯ ಉತ್ಸವದಿಂದ ಹಿಡಿದು ಪ್ರಸ್ತುತ ಈವರೆಗಿನ ಎರಡು ನೂರಕ್ಕೂ ಹೆಚ್ಚು ತಾಲೂಕ, ಜಿಲ್ಲಾ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ನಿರೂಪಣೆ ನಿರ್ವಹಣೆ ಮಾಡುತ್ತಾ ಬಂದಿದ್ದು, ಕನ್ನಡ ಸಾಹಿತ್ಯ ಪರಿಷತ್ ಆದಿಯಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕಥೆ ಕವಿತೆ ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಿಸಿದ್ದು ಜಿಲ್ಲಾ ,ರಾಜ್ಯ ಉತ್ತಮ್ಮ ಶಿಕ್ಷಕ ಪ್ರಶಸ್ತಿ, ನೇಶನ್ ಬಿಲ್ಡರ್ ಅವಾರ್ಡ್, ನಕ್ಷತ್ರ ಸೂಪರ್ ಅಚಿವರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಸಾಹಿತ್ಯಿಕವಾಗಿ ಶೈಕ್ಷಣಿಕವಾಗಿ ಅಲ್ಲದೆ ಪ್ರವೃತ್ತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ತಮ್ಮನ್ನು ನಿರೂಪಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಂತೋಷ್ ಬಿದರಗಡ್ಡೆ ಅವರಿಗೆ ನಾಡಿನ ಖ್ಯಾತ ನಿರೂಪಕಿಯಾಗಿದ್ದ ಅಪರ್ಣಾ ಅವರ ಹೆಸರಿನಲ್ಲಿ ಕೊಡಲ್ಪಡುವ ಈ ಬಾರಿಯ ರಾಜ್ಯಮಟ್ಟದ “ಅಪರ್ಣ ನಿರೂಪಣಾ ರತ್ನ ಪ್ರಶಸ್ತಿ” ದೊರೆತಿದೆ.
ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂತೋಷ್ ಬಿದರಗಡ್ಡೆ ಅವರನ್ನು ಸಾಹಿತಿ ಮಿತ್ರರು, ಪ್ರತಿಭಾ ಪರಿಷತ್ ಹಾಗೂ ವಿವಿಧ ಸಾಹಿತ್ಯ ಸಂಘಟನೆಗಳು ಅಭಿನಂದಿಸಿದ್ದಾರೆ.

