ಬೀದರ – ನಗರದಲ್ಲಿ ಏಕಕಾಲಕ್ಕೆ ಮೂರು ಕಡೆ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ
ಆದಾಯಕ್ಕಿಂತ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿದ್ದು ಕೃಷ್ಣಾ ಮೇಲ್ದಂಡೆ ಯೋಜನೆ ಚೀಫ್ ಇಂಜಿನಿಯರ್ ನಿವಾಸದ ಮೇಲೆ, ಯಾದಗಿರಿ ಜಿಲ್ಲೆಯ ಶಾಹಪೂರ ತಾಲೂಕಿನ ಭೀಮರಾಯನ ಗುಡಿ ವೃತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್ ಬಕ್ಕೂ ಸಿಂಗ್ ನಾಯಕ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ
ನಗರದ ಶಿವನಗರದ ನಿವಾಸ, ಶಾಹಪೂರ ತಾಲೂಕಿನ ಭೀಮರಾಯನ ಗುಡಿಯ ನಿವಾಸ ಮತ್ತು ಕಚೇರಿ ಮೇಲೆ ದಾಳಿ ಹಾಗೂ ಶಿವನಗರ ನಿವಾಸದ ಮೇಲೆ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ತೀವ್ರ ತಪಾಸಣೆ ಮಾಡುತ್ತಿದ್ದಾರೆ
ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ದಾಳಿ ನಡೆದಿದೆ
ವರದಿ : ನಂದಕುಮಾರ ಕರಂಜೆ, ಬೀದರ

