ಹಳ್ಳೂರ – ಭಾರತ ಸರ್ಕಾರದ ರಾಷ್ಟ್ರೀಯ ಅರಿಶಿನ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮುಗಳಖೋಡ ಪಟ್ಟಣದ ಪುರಸಭೆಯ ಸದಸ್ಯ ಚೇತನ ಯಡವಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಅರಿಶಿಣ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಕೆಎಲ್‌ಇ ಕಾರ್ಯಧ್ಯಕ್ಷ ಪ್ರಭಾಕರ ಕೋರೆ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಪೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ವಿಪ ಸದಸ್ಯ ಮಹಾಂತೇಶ ಕವಟಗಿಮಠ, ಉದ್ಯಮಿ ಮಹೇಶ ಭಾತೆ, ಭಾಜಪ ಚಿಕ್ಕೋಡಿ ಜಿಲ್ಲಾಧ್ಯಕ್ಷಸತೀಶ ಅಪ್ಪಾಜಿಗೋಳ, ಕುಡಚಿ ಮತಕ್ಷೇತ್ರದ ಭಾಜಪ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾದವ, ಮಲ್ಲಿಕಾರ್ಜುನ ಖಾನಗೌಡರ, ಬಸನಗೌಡ ಆಸಂಗಿ, ಶಿವಾನಂದ ಮೆಕ್ಕಳಕಿ, ನಿಂಗಪ್ಪ ಪಕಾಂಡಿ, ಹಾರೂಗೇರಿ ಪುರಸಭೆಯ ಅಧ್ಯಕ್ಷ ಸಂತೋಷ ಲಾಳಿ, ಮುಗಳಖೋಡ ಪುರಸಭೆಯ ಅಧ್ಯಕ್ಷ ಶಾಂತವ್ವ ಗೋಕಾಕ, ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ, ಲಕ್ಷ್ಮಣ ಕೂಡಲಗಿ, ಮಲ್ಲಿಕಾರ್ಜುನ ತೇಲಿ, ರಾಜಶೇಖರ ಖಣದಾಳೆ, ದತ್ತಾ ಸಣ್ಣಕ್ಕಿ, ಆಗ್ರಾಣಿ ಶೇಗುಣಶಿ, ಕೃಷ್ಣರಾವ ನಾಯಿಕ ಸೇರಿದಂತೆ ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು, ಎಲ್ಲಾ ಅರಿಶಿಣ ಬೆಳೆಯ ರೈತ ಬಾಂಧವರು ಅಭಿನಂದಿಸಿದ್ದಾರೆ

