ಹುನಗುಂದ :ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ) ಕರ್ನಾಟಕ ಹಾಗೂ ಬೆಂಗಳೂರಿನ ದಿನೇಶ್ ಫೌಂಡೇಷನ್, ಇವರ ಸಹಯೋಗದಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿದಿನಾಂಕ: 16 ನವೆಂಬರ್ 2025, ರವಿವಾರದಂದು ಪೇದಾರಾದ್ರಿ ರಾಜೇಂದ್ರ ಬಿಂದಾಸ್ ಸದಸ್ಯ ಜೆ.ಎಸ್.ಎಸ್. ಕಾಲೇಜು ಆವರಣ ದ ಏಳನೇ ಬ್ಲಾಕ್ ಜಯನಗರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ತಾಲೂಕಿನ ತಿಮ್ಮಾಪುರ ಗ್ರಾಮದ ಬೆಂಗಳೂರಿನ ಬೆಂಗಳೂರಿನ ನಿವಾಸಿಗಳಾದ ಶ್ರೀಮತಿ ವನಿತಾ ಅಮರಯ್ಯ ಹಿರೇಮಠ ರವರಿಗೆ ಗಾಯನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಸುವರ್ಣ ಕನ್ನಡ ರಾಜ್ಯೋತ್ಸವ ಮತ್ತು ಕವಿ ಕಾವ್ಯ ಸಂಭ್ರಮ 2025″ ಕಾರ್ಯಕ್ರಮದಲ್ಲಿ ಮೇಲ್ಕಂಡ ಟ್ರಸ್ಟ್ ರವರಿಂದ “ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ನೀಡಿ, ಗೌರವಿಸಲಾಯಿತು
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟಿನ ರಾಜ್ಯಾಧ್ಯಕ್ಷ ಡಾ.ಜಿ.ಶಿವಣ್ಣ, ರಾಜ್ಯ ಪರಿಷತ್ತಿನ ಸರಕಾರಿ ನೌಕರರ ಸಂಘದ ಸದಸ್ಯ ಶ್ರೀಮತಿ ಸೌಭಾಗ್ಯ ಎ ಎಂ ಬೆಂಗಳೂರ, ವಕೀಲರ ಸಂಘದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ ಟಿ ತ್ಯಾಗರಾಜ್ ಶಿವಮೊಗ್ಗ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಶಿವನಾಯಕ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಇವರು ಮುಂದಿನ ದಿನಮಾನಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಅಭಿಮಾನಿಗಳ ಅಭಿಮಾನಿಗಳು ಹಾರೈಸಿದರು
ಕಿರು ಪರಿಚಯ : ಹೆಸರು: ವನಿತಾ.ಎ. ಹಿರೇಮಠ.ಊರು: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮ ಶೈಕ್ಷಣಿಕ ಅರ್ಹತೆ: M.A in English, M.B.A, B.Ed
*ಬಿ.ಮ್ಯೂಸಿಕ್ ‘ಹಂಸಲೇಖಾ ದೇಸಿ ಕಾಲೇಜ’ನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ
*ಶ್ರೀಮತಿ ಮಂಜುಳಾ ಗುರುರಾಜ್ ರವರ ‘ಸಾಧನಾ ಸಂಗೀತ ಶಾಲೆ’ಯಲ್ಲಿ ಸುಗಮ ಸಂಗೀತ ಅಭ್ಯಾಸ
ವೃತ್ತಿ:
*ಪ್ರಸ್ತುತ ಹಂಸಲೇಖ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*ಶೇಷಾದ್ರಿಪುರಂ ಪದವಿ ಕಾಲೇಜು ಮತ್ತು ಇತರ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಂಗೀತ ಕಾರ್ಯಕ್ರಮಗಳು:
*ಜೀ ಕನ್ನಡ ಚಾನೆಲ್ , ಚಂದನ ವಾಹಿನಿ, ಶಂಕರ ಚಾನೆಲ್, ಬಸವ ಟಿವಿ , ಈ ಟಿವಿ ಕನ್ನಡ ಚಾನೆಲ್ ಪ್ರಸ್ತುತ ಪಡಿಸಿದ ಹಲವರು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ.
*ಭಾರತ್ ಅಂತಾರಾಷ್ಟ್ರೀಯ ಜಾಂಬೂರಿ ಸ್ಕೌಟ್ಸ್ ಮತ್ತು ಗೈಡ್ಸ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ಕಲಾ ಕೇಂದ್ರ, Indian Institute Of World Culture, Indian Institute for Social and Economic Change, Iskcon Heritage Fest, ಹಾಸನಾಂಬ ದೇವಸ್ಥಾನ, ಕೋಡಿ ಮಠ ಮತ್ತು ತುಮಕೂರು ಮಠ ಇನ್ನು ಹಲವಾರು ಪ್ರಸಿದ್ಧ ವೇದಿಕೆಗಳಲ್ಲಿ ಗಾಯನ ಪ್ರಸ್ತುತಿ.
ಪ್ರಶಸ್ತಿಗಳು:
1. ರಾಜ್ಯಮಟ್ಟದ ಸಿದ್ಧಶ್ರೀ ಪ್ರಶಸ್ತಿ
2. ಭಾರತ ಸೇವಾರತ್ನ ಪ್ರಶಸ್ತಿ
3. ಕನ್ನಡ ಸೇವಾರತ್ನ ಪ್ರಶಸ್ತಿ
4. ಕೆಂಪೇಗೌಡ ಪ್ರಶಸ್ತಿ

