ಇದೂ ಒಂದು ಭ್ರಷ್ಟ ಸರಕಾರ
ಇದು ಭ್ರಷ್ಟ ಸರಕಾರ
ಹೌದು, ಇದೂ ಒಂದು
ಭ್ರಷ್ಟ ಸರಕಾರ
ಸಿ ಎಂ.ಕುರ್ಚಿಗೆ ನಿತ್ಯ
ಕದನ ಕಾದಾಟ
ಭೋವಿ ವಾಲ್ಮೀಕಿ ನಿಗಮಗಳ
ಖಾಲಿ ಮಾಡಿ ಮಾರಾಟ
ಕನ್ನಡ ಕೊಲ್ಲುವ ಕೆಲಸ
ನಿತ್ಯ ರಾಜ್ಯೋತ್ಸವದ ಕೂಗಾಟ
ಸಂಗೊಳ್ಳಿ ರಾಯಣ್ಣನ ಸಂಸ್ಥೆಯ
ಗ್ರಾಹಕರ ಠೇವಣಿಗೆ ಪರದಾಟ
ಬರೀ ಹುಸಿ ಭರವಸೆ
ಪಾಪ ಮುಖ್ಯಮಂತ್ರಿಗಳು
ಬಸವ ಜಯಂತಿ ದಿನ
ಪ್ರಮಾಣವಚನ ಪಡೆದಿದ್ದಾರೆ
ಬಸ್, ಕರೆಂಟ್ ಫ್ರೀ
ತೆರಿಗೆ ಮುಗಿಲು ಮುಟ್ಟಿದೆ
ಬೆಲೆ ಏರಿಕೆ ನಿಲ್ಲಲೊಲ್ಲದು
ಮಂತ್ರಿಗಳ ಪ್ರವಾಸ ಭತ್ಯೆ
ಸಾಹಿತ್ಯ ಪರಿಷತ್ ಅಧ್ಯಕ್ಷನ
ಭಯಂಕರ ಬಾನಗಡಿ
ವಿರೋಧ ಪಕ್ಷದವರು ಮಲಗಿದ್ದಾರೆ
ಇಲ್ಲಾ ಮಲಗಿದಂತೆ ನಟನೆ
ಎಲ್ಲದ್ದಕ್ಕೂ ಕೊಡಬೇಕು
ಲಂಚ ಸಂಬಳದ ಮೇಲೆ ಗಿಂಬಳ
ಎಲ್ಲಾ ಕಾವಿ, ಖಾದಿಗಳು
ಪ್ರಯಾಗರಾಜದಲ್ಲಿ
ಮುಳುಗಿ ಶುದ್ಧವಾದರೂ
ರಾಮ ಕೃಷ್ಣ ಅಳುವುದನ್ನು
ನಿಲ್ಲಿಸಿಲ್ಲ ಚುನಾವಣೆ ಭಾಷಣ
ಇವಿಎಂ ಕೃಪೆಯಿದ್ದರೆ ಗೆಲುವು
ಕೋತಿಗೆ ಪಟ್ಟಾಭಿಷೇಕ
ನರಿಯ ಪೌರೋಹಿತ್ಯ
ಕುರಿಗಳು ಆಹೇರಿ ಹಾಕಲು
ಸಾಲಿನಲ್ಲಿ ನಿಂತಿದ್ದಾರೆ.
ಮತ್ತೆ ಭದ್ರತೆಯ ಮೇಲೆ
ನೂರೆಂಟು ದಾಳಿ________________________
ನಿರಂಜನ ಪಾಟೀಲ ಬೆಳಗಾವಿ
Must Read

