ಸಿಂದಗಿ; ಶಾಸಕ ಅಶೋಕ ಮನಗೂಳಿ ಅವರು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕಾಂಗ್ರೆಸ್ ಓಬಿಸಿ ರಾಜ್ಯ ಕಾರ್ಯದರ್ಶಿ ಎಂ.ಎ.ಖತೀಬ ಹೇಳಿದರು.
ಪಟ್ಟಣದ ಮುರಿಗೆಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರು ಹುಟ್ಟುಹಬ್ಬದ ನಿಮಿತ್ತ ಭೀಮು ವಾಲಿಕಾರ ಅವರು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡಿ ಮಾತನಾಡಿದರು.
ಕಾಂಗ್ರೆಸ್ ಬಗರ್ ಹುಕುಂ ಸದಸ್ಯ ಭೀಮು ವಾಲಿಕಾರ ಮಾತನಾಡಿ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಹಾಗೆ ನಮ್ಮ ಶಾಸಕ ಅಶೋಕ ಮನಗೂಳಿ ಅವರು ಕ್ಷೇತ್ರದ ಜನತೆಗೆ ನೀಡಿದ ವಾಗ್ದಾನದಂತೆ ಪ್ರತಿಯೊಂದು ಹಳ್ಳಿಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಶಿವನಗೌಡ ಬಿರಾದಾರ ಮಾತನಾಡಿ, ದಿ.ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಕಂಡ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದು ಜನರ ಮೆಚ್ಚುಗೆ ಗಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಸದಸ್ಯ ಅಂಬ್ರೀಶ ಚೌಗಲೆ, ಚಂದ್ರು ಕಾಂಬಳೆ, ವಿಜು ತಾಳಿಕೋಟಿ, ರಮೇಶ ನಡುವಿನಕೇರಿ, ನಿಕೀಲ ಬಳ್ಳಾರಿ, ಸಚೀನ ಕುಂಬರ, ಗುರು ಬಳ್ಳಾರಿ, ಅನಂತ ನಿಂಬಾಳಕರ, ವಿಜು ಬೂದಿಹಾಳ, ಅಂಬಿ ಸಾಗರ, ವಿನಾಯಕ, ಸಂಗು ಸೆರಿದಂತೆ ಅನೇಕರಿದ್ದರು.

