ನನ್ನೊಲವಿನ ಜಾಣೆ
ಇದ್ದಾರೆ ಅದೆಷ್ಟೋ ಜನರು
ನನ್ನ ನಿನ್ನ ಸುತ್ತ ಮುತ್ತ
ಭಾವಗಳ ಅರಿಯದವರು
ಶಬ್ದಗಳ ಮೆರವಣಿಗೆ
ಮಾಡುವವರು
ಪದ ಅಕ್ಷರಗಳ ಜೋಡಿಸಿ
ಕವನ ಕಾವ್ಯ ಹೊಸೆಯುವವರು
ವೇದಿಕೆಯಲ್ಲಿ ಹಾರ ತುರಾಯಿ
ಸತ್ಕಾರ ಸಮ್ಮಾನ
ಮಾಡಿ ಕೊಳ್ಳುವವರು
ಪತ್ರಿಕೆ ಟಿವಿ ಮಾಧ್ಯಮದಲ್ಲಿ
ಬಿಟ್ಟಿ ಪ್ರಚಾರ
ಮಾಡಿಕೊಂಡವರು ನೂರು
ನಿನ್ನಂತೆ ಅಂತರಂಗದಲ್ಲಿ
ದೀಪ ಹಚ್ಚಿ
ಮನಸ್ಸು ಹಸನು
ಮಾಡಿದವರನು
ನಿನ್ನ ಬಿಟ್ಟು
ನಾನೊಬ್ಬರನ್ನು ಕಾಣೆ
ನೀನು ಹೃದಯದ ಒಡತಿ
ನನ್ನೊಲವಿನ ಜಾಣೆ
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

