ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ದೇವರ ದರ್ಶನ ಪಡೆದರು.
ಶನಿವಾರದಿಂದ ಆರಂಭಗೊಂಡಿರುವ ಆಂಜನೇಯ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ನೆರವೇರಿಸಿದರು.
ದೇವರ ದರ್ಶನ ಪಡೆದು ಮಾತನಾಡಿದ ಅವರು, ಅರಭಾವಿ ಕ್ಷೇತ್ರದ ಮುಕುಟದಂತಿರುವ ಆಂಜನೇಯ ಸ್ವಾಮಿ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿಯನ್ನು ದಯಪಾಲಿಸಲಿ . ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ದೇವಸ್ಥಾನದ ಅರ್ಚಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅರಭಾವಿಯ ವೇಮೂ ಶಿವಯ್ಯ ಹಿರೇಮಠ, ಮುಖಂಡರಾದ ಶಂಕರ ಬಿಲಕುಂದಿ, ನಿಂಗಪ್ಪ ಇಳಿಗೇರಿ, ಭೀಮಶಿ ಹಳ್ಳೂರ, ಮುತ್ತೆಪ್ಪ ಜಲ್ಲಿ, ನ್ಯಾಯವಾದಿ ಅಡಿವೆಪ್ಪ ಬಿಲಕುಂದಿ, ಗಣಪತಿ ಇಳಿಗೇರಿ, ರಮೇಶ ಮಾದರ, ಅಶೋಕ ಪೂಜೇರಿ, ಇಕ್ಬಾಲ ಸರ್ಕಾವಸ್, ಸಂಜು ಮಾದರ, ಪಪಂ ಮುಖ್ಯಾಧಿಕಾರಿ ಬಬಲೇಶ್ವರ, ಪಟ್ಟಣ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

