ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

Must Read

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ ಕರ್ನಾಟಕ ವಿಮೋಚನಾ ರೂವಾರಿ ಚಂದ್ರಶೇಖರ ಸಂಗಶೆಟ್ಟಿ ಪಾಟೀಲ ಮಹಾಗಾಂವ ಇವರ ಅನುಪಮ ಸೇವೆ ಅಪ್ರತಿಮ.

ಸ್ವಾತಂತ್ರ ಯೋಧ ಕೆಚ್ಚೆದೆಯ ಹೋರಾಟಗಾರರ ಪರಂಪರೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ. ತಮ್ಮ ಜೀವಿತ ಕಾಲದಲ್ಲಿ ತಮಗಿಂತ 6 ವರ್ಷ ಚಿಕ್ಕವರಾದ ವೀರೇಂದ್ರ ಪಾಟೀಲ ಅವರನ್ನು ರಾಜಕೀಯಕ್ಕೆ ತಂದವರು ಚಂದ್ರಶೇಖರ ಪಾಟೀಲ ಅವರು.

ಚಂದ್ರಶೇಖರ ಪಾಟೀಲರು ಸಂಗಶೆಟ್ಟಿ ಮತ್ತು ವೀರಮ್ಮ ದಂಪತಿಗಳಿಗೆ ಗುಲ್ಬರ್ಗದ ಮಹಾಗಾಂವದಲ್ಲಿ 25 ಜನವರಿ 1918 ರಂದು ಅಂದಿನ ಹೈದ್ರಾಬಾದ ರಾಜ್ಯಕ್ಕೆ ಸೇರಿದ ಮಹಾಗಾಂವದಲ್ಲಿ( ಇವತ್ತಿನ ಕಲಬುರ್ಗಿ ಜಿಲ್ಲೆ) ಜನಿಸಿದರು. 22 ಡಿಸೆಂಬರ್ 1960 ರಂದು ಅವರು ಮೋಟಾರು ವಾಹನ ಅಪಘಾತದಲ್ಲಿ ನಿಧನರಾದರು. ಅವರು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದ್ ಕರ್ನಾಟಕದ ವಿಮೋಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು. ಅವರ ಬಗ್ಗೆ ವಿವಿಧ ಪುಸ್ತಕಗಳನ್ನು ಬರೆಯಲಾಗಿದೆ.

ಅವುಗಳಲ್ಲಿ ಹೈದರಾಬಾದ್ ಕರ್ನಾಟಕದ ಹುಲಿ ಚಂದ್ರಶೇಖರ ಪಾಟೀಲ್ ಮಹಾಗಾಂವ್ (2019 ರಲ್ಲಿ ಪ್ರಕಟವಾಯಿತು) ಮತ್ತು ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ (ಕರ್ನಾಟಕ ಸರ್ಕಾರದಿಂದ ಪ್ರಕಟವಾಯಿತು).

ಚಂದ್ರಶೇಖರ್ ಎಸ್. ಪಾಟೀಲ್ ಇವರು ಮೊದಲನೆಯ ಬಾರಿಗೆ ವಿಧಾನ ಸಭೆಗೆ ಚುನಾಯಿತರಾದರು

ವಿಧಾನಸಭೆಯ ಸದಸ್ಯರು : 1952–1957ರ ಅವಧಿಯಲ್ಲಿ ಅಧಿಕಾರದಲ್ಲಿ ಕ್ಷೇತ್ರ : ಕಮಲಾಪುರ, ಗುಲ್ಬರ್ಗ

1957–1960ರ ಅವಧಿಯಲ್ಲಿ ಅಧಿಕಾರದಲ್ಲಿ
ಕ್ಷೇತ್ರ :ಆಳಂದ್, ಕರ್ನಾಟಕ
ರಾಜಕೀಯ ಪಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಇವರು ಲಲಿತಾ ಬಾಯಿ ಪಾಟೀಲ್ ಅವರನ್ನು ಮದುವೆಯಾಗಿದ್ದರು ಮತ್ತು ಇವರಿಗೆ ಆರು ಜನ ಮಕ್ಕಳಿದ್ದರು.ಇವರು ಮಧ್ಯಮ ಕೃಷಿ ವ್ಯಾಪಾರಸ್ಥರ ಕುಟುಂಬದಲ್ಲಿ ತಮ್ಮ ಕೃಷಿ ಕಾಯಕದ ಜೊತೆಗೆ ದೇಶದ ಸ್ವಾತಂತ್ರ್ಯ ಹೋರಾಟಗಾರ ಕಾರ್ಯಕರ್ತರಾಗಿದ್ದರು. ಇವರೊಬ್ಬ ಶ್ರೇಷ್ಠ ರಾಜಕಾರಣಿ.ಚಂದ್ರಶೇಖರ್ ಎಸ್. ಪಾಟೀಲ್ ಮೊದಲ ಕರ್ನಾಟಕ ವಿಧಾನಸಭೆಗೆ ಸೇರಿದವರು .

ಅವರು 1957 ರಲ್ಲಿ ಆಳಂದ ಕ್ಷೇತ್ರದಿಂದ ಎರಡನೇ ಕರ್ನಾಟಕ ವಿಧಾನಸಭೆಗೆ ಎರಡನೇ ಅವಧಿಗೆ ಆಯ್ಕೆಯಾದರು ಆದರೆ ಈ ಅವಧಿಯನ್ನು ಪೂರ್ಣಗೊಳಿಸುವ ಮೊದಲೇ ನಿಧನರಾದರು.

*ಆಕಸ್ಮಿಕ ಸಾವು*
ಡಿಸೆಂಬರ್ 20, 1960 ರಂದು, ರಾಜೇಂದ್ರ ಪ್ರಸಾದ್ ಭಾಗವಹಿಸಿದ್ದ ಖೆಡ್ಡಾ ವೀಕ್ಷಣೆ ಕಾರ್ಯಕ್ರಮದಿಂದ 23 ಇತರ ಶಾಸಕರೊಂದಿಗೆ ವಿಶೇಷ ಬಸ್‌ನಲ್ಲಿ ಹಿಂತಿರುಗುತ್ತಿದ್ದಾಗ, ಚಂದ್ರಶೇಖರ್ ಎಸ್ ಪಾಟೀಲ್ ಕೆಂಗೇರಿ ಬಳಿ ಗಂಭೀರ ಅಪಘಾತಕ್ಕೀಡಾದರು . ರಸ್ತೆಯ ತಿರುವಿನಲ್ಲಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡರು.  ಅವರಿಗೆ ರಕ್ತಸ್ರಾವವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ನಂತರ ಸಾವನ್ನಪ್ಪಿದರು. ಕರ್ನಾಟಕದ ಹುಬ್ಬಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಅವರ ಸಮ್ಮುಖದಲ್ಲಿ ಗೌರವ ಮತ್ತು ಲಿಂಗಾಯತ ಧರ್ಮದ ಬಸವ ತತ್ವ ವಿಧಿವಿಧಾನಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಮಹಾಗಾಂವ್‌ನಲ್ಲಿ ನಡೆಸಲಾಯಿತು .

ಹೈದ್ರಾಬಾದ ಕರ್ನಾಟಕದ ಶಿಲ್ಪಿ ಲಿಂಗೈಕ್ಯ  ಚಂದ್ರಶೇಖರ ಸಂಗಶೆಟ್ಟಿ ಪಾಟೀಲ ಒಬ್ಬ ದಿಟ್ಟ ಸಮಾಜವಾದಿ ಚಿಂತಕ ಹೋರಾಟಗಾರ ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದ ಹುಲಿ ಮಹದೇವಪ್ಪ ರಾಮಪುರೆ ಅವರ ಗೆಳೆತನ ಮತ್ತು ವೀರೇಂದ್ರ ಪಾಟೀಲ ಅವರ ಆತ್ಮೀಯತೆ ಇವರ ಹೋರಾಟದ ಕಿಚ್ಚನ್ನು ಹೆಚ್ಚಿಸಿತು. ಇನ್ನು ಉತ್ತರ ಕರ್ನಾಟಕಕ್ಕೆ ಹಲವಾರು ವಿಧಾಯಕ ಯೋಜನೆಗಳನ್ನು ತರ ಬೇಕೆಂದು ಕನಸು ಕಂಡವರು. ಇನ್ನೂ ಹಲವು ದಶಕ ಬಾಳಿ ನಾಡು ನುಡಿ ದೇಶದ ಸೇವೆ ಮಾಡ ಬೇಕೆಂದಿದ್ದ ದೇಶ ಭಕ್ತ ಪ್ರಾಮಾಣಿಕ ದಕ್ಷ ರಾಜಕಾರಣಿ, ಚಂದ್ರಶೇಖರ ಪಾಟೀಲ ಇವರು ಬಯಲಲ್ಲಿ ಬಯಲಾದರು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಹಲವು ಕ್ರಮ : ಮೇಲ್ಮನೆ ಸದಸ್ಯ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ಗ್ರಾಮ ಪಂಚಾಯಿತಿಗಳಿಗೆ ನೂತನ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಜೊತೆಗೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್...

More Articles Like This

error: Content is protected !!
Join WhatsApp Group