ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಕ್ರೀಡಾ ಹಬ್ಬ

Must Read

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2025-26 ನೇ ಸಾಲಿನ ಕ್ರೀಡಾ ಹಬ್ಬ ಜರುಗಿತು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎನ್.ಆರ್.ಠಕ್ಕಾಯಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಬಹಳ ಸಹಕಾರಿಯಾಗಿವೆ ಎಂದರು. ಸೋಲು ಗೆಲುವು ಎರಡನ್ನೂ ಮಕ್ಕಳು ಸಮಾನವಾಗಿ ಸ್ವೀಕರಿಸುವ ಹಾಗೂ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.ಕ್ರೀಡಾ ಸಾಧಕರ ಬದುಕು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಅವರು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ ಕ್ರೀಡಾ ಹಬ್ಬ ಉದ್ಘಾಟಿಸಿದರು. ಉಪಾಧ್ಯಕ್ಷರಾದ ರಮೇಶ ಸೂರ್ಯವಂಶಿ ಕ್ರೀಡಾ ಜ್ಯೋತಿಯನ್ನು ಸ್ವೀಕಾರ ಮಾಡಿದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ಎಸ್.ಡಿ.ಎಂ.ಸಿ ಪದಾಧಿಕಾರಿಗಳಾದ ರಾಮಲಿಂಗಪ್ಪ ಮೆಕ್ಕೇದ, ದುಂಡಪ್ಪ ಮಡಿವಾಳರ ಗುಂಡು ಎಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಆರ್‌.ನರಿ, ಎಸ್.ವಿ. ಬಳಿಗಾರ, ಎಚ್.ವಿ.ಪುರಾಣಿಕ, ಸಂತೋಷ ಸಾಳುಂಕೆ, ಎಂ. ಎನ್. ಕಾಳೆ, ವಿ.ಬಿ. ಪಾಟೀಲ, ಶಾಲಾ ಕ್ರೀಡಾ ಮಂತ್ರಿಯಾದ ಮುತ್ತುರಾಜ ಜೋಗಿಗುಡ್ಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೇತನಾ ಗಡಾದ ಸ್ವಾಗತಿಸಿದರು. ಮೂಗಪ್ಪ ನಾಗಣ್ಣವರ ಪ್ರಾರ್ಥಿಸಿದರು. ಶ್ರದ್ದಾ ಹೊಂಗಲ ನಿರೂಪಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group