ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಗಾಗಿ ಬೃಹತ್ ಪ್ರತಿಭಟನೆ – ಡಾ.ಅಡಿವೆಪ್ಪ ಇಟಗಿ 

Must Read

ಬೆಳಗಾವಿ :ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 11,000 ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕಳೆದ 15 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ನಮ್ಮ ಹೋರಾಟ ಸೇವಾ ಭದ್ರತೆಗೆ ಅಥವಾ ಖಾಯಮಾತಿಗಾಗಿ ನಿರಂತರವಾಗಿ ಮುಂದುವರಿಯುತ್ತದೆ ಎಂದು ಡಾ.ಅಡಿವೆಪ್ಪ ಇಟಗಿ ಹೇಳಿದರು.

ಕಾಲೇಜಿ ಶಿಕ್ಷಣ ಆಯುಕ್ತರು ಯುಜಿಸಿ /ನಾನ್ ಯು. ಜಿ .ಸಿ ಎಂದು ಭೇದ ಭಾವ ಮಾಡಿ ಈಗಾಗಲೇ ಕೌನ್ಸಿಲಿಂಗ್ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರನ್ನು ಕೈ ಬಿಟ್ಟು ಕೇವಲ ಅರ್ಹತೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದು ನ್ಯಾಯ ಸಮ್ಮತ ವಲ್ಲ, ಇದನ್ನು ಪ್ರತಿಭಟಿಸಿ ಸೇವೆ ಸಲ್ಲಿಸಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆಯನ್ನು ನಾಳೆ ಹಮ್ಮಿಕೊಳ್ಳಲಾಗಿದೆ.

ಇಲ್ಲಿವರೆಗೂ ಸರ್ಕಾರ ನಮ್ಮ ಬೇಡಿಕೆ ಗಳಿಗೆ ಸ್ಪಂದಿಸಿಲ್ಲ ಸೇವಾ ಖಾಯಮಾತಿ ಇಲ್ಲವೇ ಸೇವಾ ಭದ್ರತೆ ನಮ್ಮ ಪ್ರಮುಖ ಬೇಡಿಕೆ ಆಗಿದ್ದು ಸರ್ಕಾರ ಕೂಡಲೆ ಈಡೇರಿಸಬೇಕು ಬೇಡಿಕೆ ಈಡೇರುವರೆಗೂ ಹೋರಾಟ ಮುಂದುವರಿಯುತ್ತದೆ ರಾಜ್ಯಾಧ್ಯಕ್ಷರಾದ ಡಾ. ಹನುಮಂತ ಗೌಡ ಕಲ್ಮನಿಯವರ ಮಾರ್ಗದರ್ಶನದಂತೆ ಬೆಳಗಾವಿ ಜಿಲ್ಲೆಯಿಂದ ಎಲ್ಲ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳುತ್ತಿದ್ದೇವೆ ರಾಜ್ಯಾದ್ಯಂತ ಎಲ್ಲಾ ಅತಿಥಿ  ಉಪನ್ಯಾಸಕರು ನಾಳೆ ಆಗಮಿಸಲಿಪ್ರ ಬೆಳಗಾವಿಯ ಸುವರ್ಣ ಸೌಧದ ಬಲಭಾಗದಲ್ಲಿರುವ ಸುವರ್ಣ ಗಾರ್ಡನ್ ಪೆಂಡಾಲ್ ನಂಬರ 02ನಲ್ಲಿ ಹೋಗಿ ನಮ್ಮ ಬೇಡಿಕೆ ಈಡೇರುವವರಿಗೆ ಸತ್ಯಾಗ್ರಹ ಮಾಡಲಾಗುವುದು.
ಕಾರಣ ಸರ್ಕಾರ ನಮ್ಮ ಬೇಡಿಕೆ ಸ್ಪಂದಿಸಿ ನಮ್ಮ ಸೇವೆ ಕಾಯಂಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಸರಕಾರಕ್ಕೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರೊ. ನೀಲಕಂಠ ಭೂಮಣ್ಣವರ, ಸಂಚಾಲಕರಾಗಿರುವ ಪ್ರೊ. ಸುನಿಲ ಕಾಂಬಳೆ, ಪ್ರೊ. ಮರಿಗೌಡ ಚೋಬಾರಿ ಮಹಿಳಾ ಪ್ರಮುಖ ರಾಗಿರುವ ಡಾ. ಪದ್ಮಾ ಹೊಸಕೋಟೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group