ಮಹಾದೇವಿಯಕ್ಕಗಳ-೧೫ನೇ ಸಮ್ಮೇಳನ

Must Read

ಕಲಬುರಗಿ- ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗವು ಸತತವಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ `ಮಹಾದೇವಿಯಕ್ಕಗಳ ೧೫ನೇ ಸಮ್ಮೇಳನ’ ಇದೇ ತಿಂಗಳ ದಿನಾಂಕ ೧೩ ಮತ್ತು ೧೪ ರಂದು, ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಜರುಗಲಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾ ವಾಲಿ ಅವರು ಆಯ್ಕೆ ಆಗಿದ್ದಾರೆ. “ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ-೨೦೨೫” ಈ ಪ್ರಶಸ್ತಿಯನ್ನು ಪ್ರಖ್ಯಾತ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಸಾಹಿತಿಗಳು, ಅಕ್ಕಮಹಾದೇವಿ ಸಮಿತಿ, ಉಡುತಡಿ ಇದರ ಅಧ್ಯಕ್ಷರಾದ ಡಾ. ಲೀಲಾದೇವಿ ಆರ್. ಪ್ರಸಾದ ಅವರಿಗೆ ಕೊಡಮಾಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಸ್ಥಳೀಯರಾದ, ವಿಭಿನ್ನ ಕಾಯಕದಲ್ಲಿ ನಿರತರಾಗಿರುವ ೫ ಜನ ಮಹಿಳೆಯರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ. ಈ ಸಮ್ಮೇಳನದ ವಿಶೇಷವೆಂದರೆ ೨೦೦ ಜನ ಮಹಿಳೆಯರೇ ಭಾಗವಹಿಸುವುದು. ಇವರಲ್ಲಿ ಗೃಹಿಣಿಯರ ಸಂಖ್ಯೆಯೇ ಹೆಚ್ಚಿಗಿರುತ್ತದೆ. ಜೊತೆಗೆ ಕಿರಿಯ ವಯಸ್ಸಿನ ಬಾಲಕಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿ ಕೊಡಲಾಗಿದೆ.

ದಿನಾಂಕ ೧೩ ರಂದು ಮುಂಜಾನೆ ಈ ಸಮ್ಮೇಳನವನ್ನು ಉದ್ಘಾಟಿಸುವವರು ಕಲಬುರಗಿ ಭಾಗದ ಪ್ರಖ್ಯಾತ ಜನಪದ ಹಾಡುಗಾರ್ತಿಯಾದ ನೆಲೋಗಿ ಗ್ರಾಮದ ಶ್ರೀಮತಿ ನೀಲಮ್ಮ ನೆಲೋಗಿ ಅವರು. ಈ ಸಮ್ಮೇಳನದಲ್ಲಿ ಶರಣೆಯರ ಕುರಿತು ವಿಚಾರಗೋಷ್ಠಿಗಳು, ಜನಪದ ಹಾಡುಗಳು, ವಚನಗಳ ಗಾಯನ ಮತ್ತು ಚಿತ್ರ ಬಿಡುಸುವುದು, ಶರಣರ ಕುರಿತು ನಾಟಕ, ವಚನ ನೃತ್ಯ ಪ್ರದರ್ಶನಗಳೂ ನೆರವೇರಲಿವೆ.
ಕಲಬುರಗಿಯ ನಾಗರಿಕರು ಈ ಸಮ್ಮೇಳನಕ್ಕೆ ಪ್ರೇಕ್ಷಕರಾಗಿ ಹಾಜರಾಗಿ, ಪ್ರೋತ್ಸಾಹಿಸಬೇಕೆಂದು ಬಸವ ಸಮಿತಿ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಕಲಬುರಗಿ, ಕಾರ್ಯದರ್ಶಿಗಳಾದ ಶ್ರೀಮತಿ ಅನುಸುಯಾ ನಡಕಟ್ಟಿ, ಕಾರ್ಯಾಧ್ಯಕ್ಷರೂ ಸಂಚಾಲಕರೂ ಆದ ಡಾ. ಜಯಶ್ರೀ ದಂಡೆ ಅವರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group