ಡಿ.೧೬ರಂದು ವಿಶೇಷ ‘ಸ್ವಾತಿ’ ಪೂಜೆ

Must Read

ಮೈಸೂರು – ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಡಿ.೧೬ರಂದು ಮಂಗಳವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೯ ಗಂಟೆಯಿಂದ ಸಂಕಲ್ಪದೊಂದಿಗೆ ಪ್ರಾರಂಭವಾಗಿ ಮಧ್ಯಾಹ್ನ ೧.೩೦ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ಏರ್ಪಡಿಸಲಾಗಿದೆ. ಸಂಜೆ ಧನುರ್ಮಾಸದ ಪ್ರಯುಕ್ತ ಪ್ರಾಕಾರೋತ್ಸವ ಇರುವುದಿಲ್ಲ. ೧೬ ಡಿಸೆಂಬರ್‌ರಿಂದ ೧೬ ಜನವರಿ ೨೦೨೬ರವರೆಗೆ ಬೆಳಿಗ್ಗೆ ೫.೩೦ರಿಂದ ೧೦ ಗಂಟೆವರೆಗೆ ಮತ್ತು ಸಂಜೆ ೫.೩೦ರಿಂದ ೭.೩೦ವರೆಗೆ ಧನುರ್ಮಾಸದ ಪ್ರಯುಕ್ತ ದೇವಸ್ಥಾನದ ಪೂಜಾ ವೇಳೆಯನ್ನು ನಿಗದಿಪಡಿಸಲಾಗಿದೆ. ಡಿ.೩೦ರಂದು ವೈಕುಂಠ ಏಕಾದಶಿ ವಿಶೇಷ ಪೂಜೆ ಸಹ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ. ಮಾಹಿತಿಗೆ ಮೊಬೈಲ್ ೯೩೪೨೧೮೮೩೨೩, ೭೫೯೮೮೩೨೨೭೧ ಸಂಪರ್ಕಿಸಬಹುದು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group