ಸಿಂದಗಿ: ಶಿಕ್ಷಣ ಜೀವನದ ಅವಿಭಾಜ್ಯ ಅಂಗ ಅದರ ಜೊತೆಗೆ ಕ್ರೀಡೆಯೂ ಮಗುವಿನ ದೈಹಿಕ, ಮಾನಸಿಕ, ಬೌದ್ಧಿಕ ಬೆಳೆವಣಿಗೆ ಮತ್ತು ಆರೋಗ್ಯವಂತನ್ನಾಗಿ ಮಾಡುವುದು, ಕೊರೋನ ಸಮಯದಲ್ಲಿ ಕೆಲವೊಂದು ಶಾಲೆಗಳು ಮಚ್ಚಿ ಹೋದರೂ ಭೀಮಾ ಶಾಲೆಯು ಆನ್ ಲೈನ್ ಕ್ಲಾಸ್ ಮುಖಾಂತರ ಮಕ್ಕಳನ್ನು ಶಿಕ್ಷಣ ನೀಡಿದ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತರಗತಿ ನಡೆಸುವುದನ್ನು ನಾವು ನೋಡಿದ್ದೇವೆ, ನಾಣ್ಯಕ್ಕೆ ಎರಡು ಮುಖವಿದ್ದಂತೆ ಒಂದು ಮುಖ ಪಠ್ಯ ಚಟುವಟಿಕೆಯಾದರೆ ಇನ್ನೊಂದು ಮುಖ ಪಠ್ಯೇತರ ಚಟುವಟಿಕೆಯಾದ ಕ್ರೀಡೆ ಮಗುವಿನ ಸರ್ವೋತ್ತಮುಖ ಬೆಳೆವಣಿಗೆಯಾಗುವುದು ಎಂದು ಕಲಕೇರಿಯ ಶ್ರೀ ಬಸವೇಶ್ವರ ಪದವಿ ಪೂರ್ವಮಹಾವಿದ್ಯಾಲಯದ ನಿವೃತ ದೈಹಿಕ ಉಪನ್ಯಾಸಕರು ಶಾಂತೂ ದುರ್ಗಿ ಹೆಳಿದರು.
ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಎರಡು ದಿನಗಳಕಾಲ ಕ್ರೀಡೊತ್ಸವ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್ ಮಾತನಾಡಿ, ಕ್ರೀಡೆಯಿಂದ ಮಕ್ಕಳಲ್ಲಿ ಸಹ ಸಂಬಂಧ, ಒಗ್ಗಟ್ಟಿನ ಮನೋಭಾವನೆ ಬೆಳೆಯುವುದು ಹಾಗೂ ದೈಹಿಕವಾಗಿ ಸದೃಢ ಹೊಂದುವರು ಎಂದರು.
ಮಕ್ಕಳು ಹೂಬ್ಸ್, ಡೆಂಬಲ್ಸ್, ನೃತ್ಯವನ್ನು ಪ್ರದರ್ಶಸಿದರು, ಓಟದ ಸ್ಪರ್ಧೆ, ಲೇಮನ್ ಸ್ಪರ್ಧೆ, ಚೆರ್ ಪಾಸಿಂಗ್, ಗೆಟ್ ರಡಿ ಟು ಸ್ಕೂಲ್, ಬೂಕ್ ಬ್ಯಾಲನ್ಸಿಂಗ್, ಆಟವನ್ನು ಚಿಕ್ಕ ಮಕ್ಕಳಿಗೆ ಆಡಿಸಿದರು.
ಶಾಲೆಯ ತಂಡಗಳಾದ ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ, ವಿಜಯನಗರ ತಂಡಗಳಿಂದ ವಾಲಿಬಾಲ್, ಫುಟ್ ಬಾಲ್, ಖೋಖೋ, ಹ್ಯಾಂಡ್ ಬಾಲ್, ಕಬ್ಬಡಿ ಗುಂಪು ಆಟಗಳ ಸ್ಪರ್ಧೆ ಏರ್ಪಟ್ಟಿತ್ತು. ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಜಿ.ಕೆ. ಪಡಗಾನೂರ, ಪ್ರಶಾಂತ ಕಮತಗಿ, ಶರಣು ಮಾವೂರ, ಭೀಮಾಶಂಕರ ತಾರಾಪೂರ, ಶಾಂತು ಕುಂಬಾರ, ಪ್ರಾಂಶುಪಾಲರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

