ಮಹಿಳೆಯರಿಂದ ಸಮಾಜದ ಕಣ್ತೆರೆಸುವ ಚುಟುಕುಗಳು – ಬಾಲಶೇಖರ ಬಂದಿ

Must Read

ಮೂಡಲಗಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿ

ಮೂಡಲಗಿ – ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮೂಡಲಗಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಹಮ್ಮಿಕೊಂಡ ಜಿಲ್ಲಾಮಟ್ಟದ ಮಹಿಳಾ ಚುಟುಕುಗೋಷ್ಠಿ ಅರ್ಥಪೂರ್ಣವಾಗಿ ನೆರವೇರಿತು.

ಮಹಿಳಾ ಚುಟುಕುಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲಶೇಖರ ಬಂದಿ ಯವರು, ಪ್ರಸ್ತುತ ಸನ್ನಿವೇಶದಲ್ಲಿ ಯುವ ಹಾಗೂ ಹಿರಿಯ ಬರಹಗಾರ್ತಿಯರಿಂದ ಉತ್ತಮ ಚುಟುಕುಗಳು ಮೂಡಿ ಬರುತ್ತಿದ್ದು ಅದರಲ್ಲೂ ವಿಶೇಷವಾಗಿ ಮಹಿಳಾ ಕವಯಿತ್ರಿಯರು ಪ್ರಸ್ತುತ ಸಮಾಜದ ಕಣ್ಣು ತೆರೆಸುವ ನಿಟ್ಟಿನಲ್ಲಿ ಹಲವಾರು ಚುಟುಕುಗಳನ್ನು ಬರೆದಿರುವುದು ಗಮನಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಗೋದಾವರಿ ದೇಶಪಾಂಡೆ ಅವರು ಇವತ್ತಿನ ಸನ್ನಿವೇಶದಲ್ಲಿ ಮಹಿಳೆಯರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳ ಜೊತೆಗೆ ಅವುಗಳ ಅನುಭವವನ್ನೇ ಚುಟುಕುಗಳಾಗಿ ಪರಿವರ್ತಿಸಿರುವುದು ಚುಟುಕು ಸಾಹಿತ್ಯದ ಅಭಿಲಾಷೆಯನ್ನು ಹೆಚ್ಚಿಸುತ್ತದೆ ಎಂಬ ಸಂದೇಶವನ್ನು ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಡಾ. ಮಹಾನಂದಾ ಪಾಟೀಲ ಅವರು ಮಾತನಾಡಿ ಅಕ್ಕಮಹಾದೇವಿಯಿಂದ ಹಿಡಿದು ಇವತ್ತಿನವರೆಗೂ ಮಹಿಳೆಯರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚುಟುಕು ಸಾಹಿತ್ಯ ಮೂಡಿಬರಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿಯ ಅಧ್ಯಕ್ಷರಾದ ಚಿದಾನಂದ ಹೂಗಾರ ರವರು ಸಾಹಿತ್ಯ ಎಂಬುದು ನಿಂತ ನೀರಾಗಬಾರದು ಅದು ಹೊಸ ಹೊಸ ಭಾವನೆಗಳೊಂದಿಗೆ ಚುಟುಕಾಗಿ ಮೂಡಿ ಬಂದು ವೇದಿಕೆಗಳ ಮೂಲಕ ಬೆಳಗಬೇಕು ಎಂದು ಚುಟುಕುಗೋಷ್ಠಿಯ ಉದ್ದೇಶವನ್ನು ಸಾರಿ ಹೇಳಿದರು.

ನಿಂಗಪ್ಪ ಸಂಗ್ರೇಜಿಕೊಪ್ಪ ಹಾಗೂ ಸಿದ್ದಣ್ಣ ನಡಗಡ್ಡಿ ಇವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ನೇಮಿಸಿ ಆದೇಶ ಪತ್ರವನ್ನು ನೀಡುವ ಮೂಲಕ ಅವರನ್ನು ಅಧಿಕೃತವಾಗಿ ಬರಮಾಡಿಕೊಳ್ಳಲಾಯಿತು.

ವೇದಿಕೆಯಲ್ಲಿ ಹಿರಿಯ ಜಾನಪದ ಸಾಹಿತಿ ಬಸಪ್ಪ ಇಟ್ಟನ್ನವರ, ಅನಂತ ಬೊಂಗಾಳೆ,ಡಾ.ಮಹಾದೇವ ಪೋತರಾಜ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿಯಲ್ಲಿ ಆಶಾ ಹಾಲಪ್ಪನವರ, ಕಾಜಲ್ ಹೆಗಡೆ, ಗಂಗವ್ವ ಮಠಪತಿ,ಮಹಾದೇವಿ ಕೋಳಿ, ಸರಿತಾ ಪಾಂಡವ, ಸಕ್ಕೂಬಾಯಿ ಮುಗಳಖೋಡ, ವಿಜಯಲಕ್ಷ್ಮಿ ತಿರಕನ್ನವರ, ಸವಿತಾ ಕೊಲ್ಕರ, ಪವಿತ್ರ ತೇಗೂರ, ಶೈಲಜಾ ಬಡಿಗೇರ, ಗೀತಾ ಮುತ್ತೆಪ್ಪಗೋಳ, ಸವಿತಾ ಲೋಕುರಿ, ಸರಸ್ವತಿ ಶೆಕ್ಕಿ, ವಿದ್ಯಾಶ್ರೀ ಪೂಜಾರಿ, ಶಶಿರೇಖಾ ಬೆಳ್ಳಕ್ಕಿ, ಭಾಗೀರಥಿ ಕುಳಲಿ,ರಾಜೇಶ್ವರಿ ಹಳ್ಳೂರ, ವಿದ್ಯಾಶ್ರೀ ಸಾಯನ್ನವರ, ಸಹನಾ ಕರಗಣ್ಣಿ,ಕಾಶವ್ವ ಮರೆನ್ನವರ,ಸೌಭಾಗ್ಯ ಕಾಳಪ್ಪಗೋಳ, ಜ್ಯೋತಿ ದಳವಾಯಿ, ಪ್ರತಿಭಾ ಪಾಟೀಲ, ಲಕ್ಷ್ಮಿಬಾಯಿ ಬಿಳ್ಳೂರ, ಪವಿತ್ರ ಕುಬ್ಬನವರ,ನಿಂಗವ್ವ ವಡೆರಟ್ಟಿ, ಪ್ರಿಯಾಂಕಾ ಅಸುಂಡಿ,ಅಶ್ವಿನಿ ಮೇಟಿ, ಪುಣ್ಯಲಕ್ಷ್ಮೀ ಗಾಡವಿ, ಲತಾ ಬುದ್ನಿ, , ಜ್ಯೋತಿ, ಗೀತಾ ಹಿರೇಮಠ ಈ ಎಲ್ಲಾ ಕವಯಿತ್ರಿಯರು ತಮ್ಮ ಚುಟುಕುಗಳನ್ನು ವಾಚನ ಮಾಡಿದರು.

ಎಲ್ಲ ಕವಯಿತ್ರಿಯರಿಗೂ ಚುಟುಕು ಸಿರಿ ಬಿರುದಾಂಕಿತ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯಲ್ಲಪ್ಪ ಗದಾಡಿ, ಸುಭಾಷ ಕುರಣೆ, ಶಿವಕುಮಾರ ಕೊಡಿಹಾಳ, ದುರ್ಗಪ್ಪ ದಾಸನ್ನವರ, ಬಾಳೇಶ ಫಕಿರಪ್ಪನವರ, ಬಾಳಪ್ಪ ನಂದಿ, ಪ್ರಕಾಶ ಮೇತ್ರಿ, ಮುರುಗೇಶ ಗಾಡವಿ, ಸದಾಶಿವ ಯಕ್ಸಂಬಿ, ಅರ್ಜುನ ಕಾಂಬಳೆ,ಅಡಿವೆಪ್ಪ ತುಪ್ಪದ ಉಪಸ್ಥಿತರಿದ್ದರು.

ಸವಿತಾ ಲೋಕೂರಿ ಮತ್ತು ರಾಜೇಶ್ವರಿ ಹಳ್ಳೂರ ಸ್ವಾಗತಿಸಿದರು ಶಶಿರೇಖಾ ಬೆಳ್ಳಕ್ಕಿ ನಿರೂಪಿಸಿದರು ಭಾಗೀರಥಿ ಕುಳಲಿ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....

More Articles Like This

error: Content is protected !!
Join WhatsApp Group