ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲೆಯ ಸಾಹಿತ್ಯ ಕವಿಗೋಷ್ಠಿ ಕಾರ್ಯಕ್ರಮ ರವಿವಾರ ೯ ರಂದು ಕನ್ನಡ ಭವನ ನೆಹರು ನಗರ ರಾಮದೇವ ಹೋಟೆಲ್ ಹಿಂದೆ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು. ಮಂಗಳಾ ಮೆಟಗುಡ್ಡ ಜಿಲ್ಲಾಧ್ಯಕ್ಷರು ಕ ಸಾ ಪ ಬೆಳಗಾವಿ ಜಿಲ್ಲೆ ಅವರು ವಹಿಸಿದ್ದರು. ಮಹಾಂತೇಶ ಮೆಣಸಿನಕಾಯಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನವರಿ 10, 11 ರಂದು. ಹಾರೂಗೇರಿಯ ಜೈನ ಭವನದಲ್ಲಿ 17ನೇ ಜಿಲ್ಲಾ ಸಮ್ಮೇಳನ ಜರಗುವುದು ಎಂದು ತಿಳಿಸಲಾಯಿತು. ಸರ್ವಾಧ್ಯಕ್ಷತೆಯನ್ನ. ವಿ ಎಸ್ ಮಾಳಿ ಅವರು ವಹಿಸಿಕೊಳ್ಳುವವರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದಾನಮ್ಮ ಅಂಗಡಿ ಸಾಹಿತಿಗಳು ಬೆಳಗಾವಿ ಅವರು ಆಗಮಿಸಿದ್ದರು. ಡಿಸೆಂಬರ್ 28ರಂದು ಎಂಕೆ ಹುಬ್ಬಳ್ಳಿಯಲ್ಲಿ ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವುದು. ಎಂ ಡಿ ಅಲಾಸೆ ಸುಶೀಲ ಗುರವ, ಅನ್ನಪೂರ್ಣ ಖನೋಜ, ಶೋಭಾ ಬನಶಂಕರಿ. ರಾಜನಂದ ಗಾರಿಗಿ,ಎಂ ಆರ್ ಪಾಟೀಲ್, ಭಾರತಿ ಮಠದ, ಬಸವರಾಜ ಕಲಗೊಂಡ, ಆನಂದ ಕೊಂಡುಗುರಿ, ಸಾವಿತ್ರಿ ಹೊತ್ತಿಗಿಮಠ, ಅಪ್ಪ ಸಾಹೇಬ್ ಲಿಂಬಿಗಿಡದ ಮುಂತಾದವರು ಕವನ ವಾಚಿಸಿದರು.ವಿ ಎಂ ಅಂಗಡಿ ಸ್ವಾಗತಿಸಿದರು.ಮಲ್ಲಿಕಾಜು೯ನ ಕೋಳಿ ನಿರೂಪಿಸಿದರು.ಶಿವಾನಂದ ತಲ್ಲೂರ ವಂದಿಸಿದರು.
ನಿಲಗಂಗಾ ಚರಂತಿಮಠ,ಡಾ ಗುರುದೇವಿ ಹುಲೆಪ್ಪನ್ನವರಮಠ, ಸ ರಾ ಸುಳಕೂಡೆ,ಸುಮನ ಪರೀಟ,ಗೀತಾ ಶೆಟ್ಟರ, ಬಿ ಬಿ ಮಠಪತಿ,ಭಾರತಿ ಮಠದ,ಬಿ ಕೆ ಮಲಾಬಾದಿ,ಸುರೇಶ ಹಂಜಿ,ನಿತಿನ ಮೆಣಸಿನಕಾಯಿ,ಎಂ ಡಿ ಅಲಾಸೆ,ಸುನಿಲ ಪರೀಟ,ಶ್ರೀರಂಗ ಜೋಷಿ,ಸುಮಾ ಬೇವಿನಕೊಪ್ಪಮಠ,ಮುಂ,ಉಪಸ್ಥಿತರಿದ್ದರು

