ಸಿಂದಗಿ : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡ ಉದ್ಯಮಿ ಹಾಗೂ ಗುತ್ತಿಗೆದಾರ ಹಣಮಂತ ಚಿಂಚಲಿ ರವರಿಗೆ ಆರ್ಎಂಎನ್ ಪೌಂಡೇಶನ್ ಅಧ್ಯಕ್ಷ ಯುವ ಮುಖಂಡ ರವಿಕಾಂತ್ ನಾಯ್ಕೊಡಿ ಸನ್ಮಾನಿಸಿ ಗೌರವಿಸಿ ತಾಲೂಕಿನ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಚರ್ಚಿಸಿದರು.
ನಂತರ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಾತನಾಡಿ, ಗುತ್ತಿಗೆದಾರರು ಇಡೀ ರಾಜ್ಯಾದ್ಯಂತ ವಿವಿಧ ಯೋಜನೆಯಡಿ ಕಾಮಗಾರಿಗಳನ್ನು ಮಾಡಿ ಬಿಲ್ಲುಗಳಾಗದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ನನ್ನ ಗಮನಕ್ಕಿದೆ ಸರಕಾರ ಮಟ್ಟದಲ್ಲಿ ಚರ್ಚೆಗೆ ಮುಂದಾಗುವೆ ಎಂದು ಭರವಸೆ ನೀಡಿದರು.

