ವಿಶ್ವಮಾನವ ದಿನಾಚರಣೆ ಹಾಗೂ ರಾಜ್ಯಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Must Read
    ಬೆಂಗಳೂರು: ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 28ರಂದು ವಿಶ್ವಮಾನವ ದಿನಾಚರಣೆ ವಿಚಾರ ಸಂಕಿರಣ, ಅನ್ನಪೂರ್ಣೇಶ್ವರಿ ಫೌಂಡೇಶನ್ ಮೂರನೇ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

     ಕಾರ್ಯಕ್ರಮವು ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಆವರಣದ ನಯನ ಸಭಾಂಗಣದಲ್ಲಿ ನಡೆಯಲಿದೆ. ಬೆಳಗಾವಿ ಭೂತರಾಮನಹಟ್ಟಿ ಶ್ರೀಕ್ಷೇತ್ರ ಮುಕ್ತಿ ಮಠದ ಪರಮಪೂಜ್ಯ ಮಹರ್ಷಿ ತಪೋ ರತ್ನ ಶಿವಾಚಾರ್ಯರು – ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ.

ಕಾರ್ಯಕ್ರಮವನ್ನು ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಶಂಕರ್ ಹಾಲಪ್ಪ ಹೆಗಡೆ ಉದ್ಘಾಟಿಸಲಿದ್ದು, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಅನಂತನಾಯಕ ಎನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬರಮಣ್ಣ ಲಕ್ಷ್ಮಣ ಉಪ್ಪಾರ ಸೇರಿದಂತೆ ಸಮಾಜಸೇವಕ ಡಾ ನಾಗರಾಜ್ ಎ ಜಿ, ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿ  ರಮೇಶ್ ದೊರೆ ಅಲ್ದಾಳ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ರಾಜು ಮಹಾದೇವ ನಾಶಿಪುಡಿ, ಬಾಗಲಕೋಟೆ ಜಿಲ್ಲೆಯ ಸಮಾಜ ಸೇವಕಿ ಶ್ರೀಮತಿ ನವನೀತ ಗೋವಿಂದರಾಜ ಮುಳಗುಂದ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ರಾಜ್ಯಾಧ್ಯಕ್ಷ ಎಮ್‌ಟಿ ಮಹೇಶ ಕುಮಾರ, ಪ್ರಣವ ಮೀಡಿಯಾ ಹೌಸ್ ನ ಮಾಧ್ಯಮ ಸಮಾಲೋಚಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಪದ್ಮಾವತಿ ಕೆವಿ, ಶೈಕ್ಷಣಿಕ ಆಡಳಿತ ಅಧಿಕಾರಿಗಳು ಜನನಿ ಪಬ್ಲಿಕ್ ಶಾಲೆ, ಭೀಮಪಿ ಲಮಾಣಿ ರಾಷ್ಟ್ರೀಯ ಉಪಾಧ್ಯಕ್ಷ,,  ಸೋಮಶೇಖರ ಹೊರಕೇರಿ ಕರಕುಶಲ ಕಲಾವಿದ ಕೆಂಗೇರಿ ಚಕ್ರಪಾಣಿ ಇತಿಹಾಸ ಸಂಶೋಧಕ ಭಾಗವಹಿಸುವರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ವಾನ್ ಡಾ. ರಾಜಗೋಪಾಲ ಭಾಗವತ್ ಅವರ ಹಾಡುಗಾರಿಕೆ, ವಿದುಷಿ ಡಾ. ಪೂರ್ಣಿಮಾ ಭಾಗವತ್ ಅವರ ನಟವಾಂಗ ಹಾಗೂ ವಿದುಷಿ ನಂದನ–ನಯನ ಭಾಗವತ್ ಅವರ ಭರತನಾಟ್ಯ ಪ್ರದರ್ಶನ ನಡೆಯಲಿದೆ .

ರಾಜ್ಯದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ, ಔದ್ಯಮಿಕ ಹಾಗೂ ನ್ಯಾಯಾಂಗ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ  ಡಾ ಮಾದೇವ ನಾಗರಾಳ ,ಡಾ ಸಂಗಪ್ಪ ಬಾ ಬಿಜ್ಜರಗಿ, ಡಾ ಲಿಂಗಾನಂದ ಕೆ ,ಡಾ ವಿ ಎಸ್ ನಾಯಕ್, ಡಾ ಮೀರಾಕುಮಾರ್, ಮಹಾದೇವಿ ಸರವರ, ಶ್ರೀಮಂತ ಪಾಟೀಲ್ ,ವಿಠ್ಠಲ ಕೆ ಬುಕ್ಕನಟ್ಟಿ, ಬರಮಣ್ಣ ಎಲ್ಲಪ್ಪ ಚಿಕ್ಕೋಡಿ, ಯು ಎಮ್ ಫಾರೂಕ್ ,ಮೌನೇಶ್ ಐ ಮಾಯಾಚಾರಿ, ಮೌನೇಶ್ ಅರ್ಜುನ ಬಡಿಗೇರ, ವಿನಾಯಕ ಮೋಹನ ಪತ್ತಾರ, ಸಿದ್ದಯ್ಯ ದ ಒಡೆಯರ ,ಉಮೇಶ ಜಾನು ಮನೋಜ, ಕಾಳಪ್ಪ ಬಡಗೇರ ,ಮಂಜುನಾಥ ಬಸವರಾಜ ಪತ್ತಾರ ,ಹಾಲಪ್ಪ ಮಾಯಪ್ಪ ಜಿಗನ ,ಪ್ರದೀಪ ಕೃಷ್ಣೇಗೌಡ, ಶ್ರೀಕಾಂತ ಹಾದಿಮನಿ. ಮಲ್ಲಯ್ಯ ಪಂಚಯ್ಯ ಹಿರೇಮಠ. ಲಾವಣ್ಯ ವಿನೋದ .ಜಯಶ್ರೀ ಸೂರ್ಯವಂಶಿ .ಪ್ರೀತಿ ಶಿವಾನಂದ ಪೂಜಾರಿ. ಗೌರಿ ಪುರಾಣಿಕ ಮಠ. ಕಿಶೋರ್ ರಮೇಶ್ ರಜಪೂತ, ಎಂ ಮರಿಯಣ್ಣ ಗೋಡೆ ಕೆರೆ, ಅಜಿತ್ ಸಾಬಣ್ಣವರ ಸಿದ್ದರಾಮ ಕಾಂಬಳೆ ,ನಾಗರಾಜು ಎಚ್ ಎನ್ ,ಎಸ್ ಶಾಂತ ರಾಜ್ ಶ್ರೀಮತಿ ಸುಮಿತ್ರ ಬಿ ಆರ್, ಸರಿನಾ ಭಾನು, ಎಸ್ ಪ್ರತಿಮಾ ಹಾಸನ್, ವನಿತಾ ಎಸ್ ಗೀತಾ,ಆನಂದ ಜಾದವ ,ಸುರೇಶ್ ಗೌಡ ಕೆರೆ, ಅಡವೆಪ್ಪ ಗುರುಸಿದ್ದಪ್ಪ ಕೊಪ್ಪದ ,ದಿಲೀಪ್ ನಿಂಬಾಲ್ಕರ್ ,ಸುನಿತಾ ಮಹಾವೀರ ಚೌಗಲೇ ,ದಯಾನಂದ ತಳು ಕಾಂಬಳೆ  ಮತ್ತು ಮನೀಷ ದಯಾನಂದ ತಳುಕಾಂಬಳೆ ಅನೇಕ ಗಣ್ಯರಿಗೆ ಈ ಸಂದರ್ಭದಲ್ಲಿ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಧ್ಯಯನ, ಸೇವೆ ಮತ್ತು ಸಂಸ್ಕಾರಗಳ ಸಮನ್ವಯದೊಂದಿಗೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿದ ಇವರ ಕಾರ್ಯ ಚಟುವಟಿಕೆಗಳು ಸಮುದಾಯದ ಚಿಂತನೆಗೆ ದಿಕ್ಕು ನೀಡಿವೆ. ಶಿಕ್ಷಣ ವಿಸ್ತರಣೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯಗಳ ಬಲವರ್ಧನದಲ್ಲಿ ಇವರ ಪಾತ್ರ ಗಮನಾರ್ಹವಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ ಬೆಳಗಾವಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಎಸ್ ಕಡಲಗಿ ಮತ್ತು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷ ನಿತ್ಯಾ ಎಂ ಆಚಾರ್ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group