ಬಾಗಲಕೋಟೆ – ಜಿಲ್ಲೆಯಲ್ಲಿ ನೂತನವಾಗಿ ಸಾಂಸ್ಕೃತಿಕ ಸೇವೆಗೆ ಸಿದ್ಧವಾಗಿರುವ ಗಾನಯೋಗಿ ಪಂಡಿತ. ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಇದೇ ರವಿವಾರ ದಿ. 28 ರಂದು ಉದ್ಘಾಟನೆಗೊಂಡು ಲೋಕಾಪ೯ನೆಗೊಳ್ಳಲಿದೆ.
ತನ್ನಿಮಿತ್ತ ಬಾಗಲಕೋಟೆಯ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಪೂರ್ವಭಾವಿ ಸಭೆ ಜರುಗಿತು . ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಶೈಲ ಕರಿಶಂಕರಿ ಅವರು ವಹಿಸಿ ಮಾತನಾಡುತ್ತಾ ನಮ್ಮ ನಾಡಿನ ಕಲೆ. ಸಾಹಿತ್ಯ ಸಂಗೀತವು ನಮ್ಮ ಬದುಕಿನ ಜೀವಾಳವಾಗಿರಬೇಕು. ತೆರೆಮರೆಯಲ್ಲಿರುವ ಕಲಾವಿದರನ್ನು ಈ ಪ್ರತಿಷ್ಠಾನದ ಮೂಲಕ ಗುರುತಿಸುವ ಕಾರ್ಯವನ್ನು ಮಾಡಬೇಕೆಂಬ ಸದುದ್ದೇಶದಿಂದ ಈ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ ಎಂದ ಅವರು ರವಿವಾರ ದಿ.28 ರಂದು 9:30 ಕ್ಕೆ ಪೂಜ್ಯರ ಭಾವ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮವು ವಿವಿಧ ಭಾಗಗಳಿಂದ ಬರುವ ಪೂಜ್ಯರ ಸಮ್ಮುಖದಲ್ಲಿ ಪ್ರತಿಷ್ಠಾನ ಉದ್ಘಾಟನೆಗೊಳ್ಳುವುದು. ನಾಡಿನ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವದು ಎಂದರು.
ಸಂಘಟಕರು ಹಾಗೂ ಸಂಗೀತಗಾರರಾದ ಆನಂದಕುಮಾರ್ ಕಂಬಳಿಹಾಳ, ಪ್ರತಿಷ್ಠಾನದ ಗೌರವಾಧ್ಯಕ್ಷ ಸಿದ್ದರಾಮಯ್ಯ ರುದ್ರಾಕ್ಷಿಮಠ, ಉಪಾಧ್ಯಕ್ಷ ಶರಣಬಸವ ಶಾಸ್ತ್ರಿಗಳು, ಕಾಯ೯ದಶಿ೯ ಶಂಕರ ಲಮಾಣಿ, ಮುಖಂಡರಾದ ಚಿನ್ನಪ್ಪಗೌಡ್ರು ಜಲಗೇರಿ, ಸಹಕಾಯ೯ದಶಿ೯ ಬಸವರಾಜ ಸಿಂಧಗಿಮಠ ಸೇರಿದಂತೆ ಅನೇಕರು ಕಾರ್ಯಕ್ರಮದ ರೂಪರೇಷೆಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.
ಹಿರಿಯ ಕಲಾವಿದರಾದ ಭೀಮಪ್ಪ ರಾಠೋಡ,ವೀರೇಶ ನಾಗಠಾಣ, ಲಕ್ಕವ್ವ ಕಪರಟ್ಟಿ, ಶಶಿಧರ ಜಿಗಜಿಣಗಿ ಸೇರಿದಂತೆ ಪದಾಧಿಕಾರಿಗಳು, ಕಲಾವಿದರು, ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು

