ಮಹೇಶಕುಮಾರಗೆ “ಕರ್ನಾಟಕ ಕುಮಾರ ರತ್ನ” ಮತ್ತು “ಕರುನಾಡ ಅಪ್ಪು ರತ್ನ “ಪ್ರಶಸ್ತಿ ಪ್ರದಾನ

Must Read

ರಬಕವಿ-ಬನಹಟ್ಟಿ- ಸ್ಪೂರ್ತಿ ಕಲಾ ಟ್ರಸ್ಟ್ , ನೃತ್ಯ, ಸಂಗೀತ ಹಾಗೂ ಅಭಿನಯ ತರಬೇತಿ ಶಾಲೆಯ 13ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಉದಯಭಾನು ಕಲಾಸಂಘದಲ್ಲಿ ನಡೆದ ಅದ್ದೂರಿಯಾಗಿ ಜರುಗಿದ ಕಾರ್ಯಕ್ರಮದಲ್ಲಿ ರಬಕವಿಯ ಶುಭಂ ವಾರ್ತೆ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಮಹೇಶಕುಮಾರ ಬಿ.ಕೆ. “ಮಾಧ್ಯಮ ಕ್ಷೇತ್ರ” ಮತ್ತು “ಶಿಕ್ಷಣ ಕ್ಷೇತ್ರ” ದಲ್ಲಿನ ಸೇವೆಗಾಗಿ ರಾಜ್ಯ ಪ್ರಶಸ್ತಿಯಾದ ‘ಕರ್ನಾಟಕ ಕುಮಾರ ರತ್ನ’ ಹಾಗೂ ಕರುನಾಡ ಅಪ್ಪು ರತ್ನ ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಇವರು  ಈಗಾಗಲೇ “ನೇಕಾರ ಪತ್ರಕರ್ತ” ” ಪಂಜೇ ಮಂಗೇಶರಾಯ” ಪ್ರಶಸ್ತಿ ಹೀಗೆ ಹತ್ತು-ಹಲವಾರು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿತೆರೆ ,ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ನಟ ರವಿಚೇತನ , ಕನ್ನಡ ಸೇನೆ ಅಧ್ಯಕ್ಷ ಆನಂದಕುಮಾರ, ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಡಿ ವನಜ ಮತ್ತು ರೂವಾರಿ ಮಹಾದೇವಯ್ಯ ಹಾಗೂ ಪ್ರಶಸ್ತಿ ಪುರಸ್ಕೃತರು ಇದ್ದರು. ರಾಜ್ ಸಂಪಾಜೆ ಕಾರ್ಯಕ್ರಮ ನಿರ್ವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group