ಬಹುಮುಖ ಪ್ರತಿಭೆಯ ಸಾಹಿತಿ ರಂಗಕರ್ಮಿ ಡಾ. ನಿರ್ಮಲಾ ಬಟ್ಟಲ

Must Read

ನಾವು ನಮ್ಮವರು

 

ಡಾ. ನಿರ್ಮಲಾ ಬಟ್ಟಲ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಅವರು ನಗುಮೊಗದ ಒಬ್ಬ ಸ್ನೇಹಪರ ಜೀವಿ, ಉದಾತ್ತ ನಿಲುವಿನ ಚಿಂತಕಿ, ಅಪ್ಪಟ ಶಿಕ್ಷಣ ಪ್ರೇಮಿ, ರಂಗಭೂಮಿಯಲ್ಲಿ ಆಸಕ್ತಿ ಯುಳ್ಳ ಒಬ್ಬ ಅತ್ಯುತ್ತಮ ಕಲಾವಿದೆ ಹಾಗೂ ಶ್ರೇಷ್ಠ ಸಾಹಿತಿ.

ಡಾ.ನಿರ್ಮಲಾ ಬಟ್ಟಲ – ಶಿಕ್ಷಕಿ

ಡಾ.ನಿರ್ಮಲಾ ಬಟ್ಟಲ ಅವರು ಅಕ್ಷರಗಳ ದೀಪ ಹಚ್ಚುವ ಕೈ,
ಅಜ್ಞಾನದ ಕತ್ತಲೆ ಓಡಿಸುವ ಶಕ್ತಿ ಆಯಿ.
ಮಕ್ಕಳ ಕನಸಿಗೆ ರೆಕ್ಕೆ ಕೊಡುವ ಮನಸು,
ಭವಿಷ್ಯದ ದಾರಿ ತೋರಿಸುವ ಜ್ಞಾನ ಬೆಳಕು.

ಡಾ.ನಿರ್ಮಲಾ ಬಟ್ಟಲ ಅವರು ಬೆಳಗಿನ ನಗುವಿನಿಂದ ಪಾಠ ಆರಂಭ, ಪ್ರತಿಯೊಂದು ಪದದಲ್ಲೂ ಪ್ರೀತಿ ಸಂಚಾರ.
ಶಿಸ್ತಿನ ಜೊತೆಗೆ ಸಹನದ ಬಣ್ಣ,
ಅವಳ ಮಾತುಗಳಲ್ಲಿ ಜೀವನ ಪಾಠದ ಕಿರಣ.

ಡಾ.ನಿರ್ಮಲಾ ಬಟ್ಟಲ ಅವರು ಸಣ್ಣ ಮನಸಿಗೆ ದೊಡ್ಡ ಧೈರ್ಯ, ಭಯವನ್ನೇ ಗೆಲ್ಲಿಸುವ ಮೃದು ಶೌರ್ಯ.
ತಪ್ಪು ಮಾಡಿದರೆ ತಿದ್ದುವ ಕೈ,
ಬಿದ್ದಾಗ ಎತ್ತಿ ನಿಲ್ಲಿಸುವ ತಾಯಿ.

ಡಾ.ನಿರ್ಮಲಾ ಬಟ್ಟಲ ಅವರು ಜ್ಞಾನದ ಮೂರ್ತಿಯಾಗಿ ನಿಲ್ಲುವಳು,
ಮಕ್ಕಳ ಮನದಲ್ಲಿ ಸ್ಫೂರ್ತಿ ಬಿತ್ತುವಳು.
ನಾಡಿನ ನಾಳೆ ಕಟ್ಟುವ ಶಿಲ್ಪಿ ಅವಳು,
ಶಿಕ್ಷಕಿ ಎಂಬ ಹೆಸರಿಗೆ ಗೌರವದ ರೂಪು.

ಡಾ. ನಿರ್ಮಲಾ ಬಟ್ಟಲ ಅವರು ಸರಳತೆಯಲ್ಲೇ ಸುಂದರತೆಯನ್ನು ಕಾಣುವ ಅಪೂರ್ವ ವ್ಯಕ್ತಿತ್ವ. ಅವರ ನಡವಳಿಕೆ, ಮಾತು, ಚಿಂತನೆ—ಎಲ್ಲವೂ ಸಹಜವಾಗಿ ಮನಸೆಳೆಯುವಂತಹವು. ಆಡಂಬರವಿಲ್ಲದ ಜೀವನವೇ ಅವರ ಅಲಂಕಾರ; ಅದೇ ಅವರ ನಿಜವಾದ ಸುಂದರತೆ.

ಡಾ. ನಿರ್ಮಲಾ ಬಟ್ಟಲ ಅವರು ಜ್ಞಾನವಂತೆಯಾಗಿ ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಆಳವಾದ ಅಧ್ಯಯನ, ಸ್ಪಷ್ಟ ಚಿಂತನೆ ಮತ್ತು ವಿಚಾರಸಮ್ಮತ ಮಾತುಗಳು ಕೇಳುವವರಲ್ಲಿ ಜ್ಞಾನಾಸಕ್ತಿಯನ್ನು ಮೂಡಿಸುತ್ತವೆ. ಜ್ಞಾನವನ್ನು ಹಂಚಿಕೊಳ್ಳುವುದೇ ಅವರ ಸೇವಾಭಾವ.

ಡಾ. ನಿರ್ಮಲಾ ಬಟ್ಟಲ ಅವರು ಒಬ್ಬ ಉತ್ತಮ ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಬರಹಗಳಲ್ಲಿ ಮಾನವೀಯತೆ, ಸಂವೇದನೆ ಮತ್ತು ಬದುಕಿನ ಸತ್ಯಗಳು ಸರಳ ಭಾಷೆಯಲ್ಲಿ ಅನಾವರಣಗೊಳ್ಳುತ್ತವೆ. ಓದುಗರ ಮನಸ್ಸಿಗೆ ನೇರವಾಗಿ ತಲುಪುವ ಶಕ್ತಿ ಅವರ ಸಾಹಿತ್ಯದ ವೈಶಿಷ್ಟ್ಯ.

ಡಾ. ನಿರ್ಮಲಾ ಬಟ್ಟಲ ಅವರು ಶಿಕ್ಷಕಿಯಾಗಿ, ಉಪನ್ಯಾಸಕರಾಗಿ, ಪ್ರಸ್ತುತ ಪ್ರಾಚಾರ್ಯರಾಗಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕಥೆ,ಕವನ, ಲೇಖನಗಳನ್ನು ಬರೆಯುವುದು ಹಾಗೂ ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚು.

ಡಾ. ನಿರ್ಮಲಾ ಬಟ್ಟಲ ಅವರು ಎಂ.ಎ,ಎಂ.ಎಡ್, ಪಿ ಎಚ್.ಡಿ, ಪಿ.ಜಿ.ಡಿ,ಎಚ್.ಇ, ಪಿ.ಜಿ.ಡಿ. ವೈ. ಇ.ಶಿಕ್ಷಣವನ್ನು ಪೂರೈಸಿದ್ದಾರೆ. ಎಂ. ಎ ಕನ್ನಡ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,ಎಂ.ಎ ಇತಿಹಾಸ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ, ಎಂ.ಎಡ್ ಮತ್ತು ಪಿ. ಎಚ್. ಡಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಿಪ್ಲೋಮಾ ಇನ್ ಹೈಯರ್ ಎಜುಕೇಶನ್ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು, ಪಿ.ಜಿ. ಡಿಪ್ಲೋಮಾ ಇನ್ ಯೋಗ ಶಿಕ್ಷಣ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಸ್ಲೇಟ್ – ರಾಜ್ಯ ಉಪಾನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಡಾ. ನಿರ್ಮಲಾ ಬಟ್ಟಲ ಅವರು 2023ನೇ ಸಾಲಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, 20 24 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಕಮಿಟಿ, ಪ್ರಸಾರಂಗ, ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರು.

ಡಾ. ನಿರ್ಮಲಾ ಬಟ್ಟಲ ಅವರು ಆರು ವರ್ಷದ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ. ಐದು ಅಂತರಾಷ್ಟ್ರೀಯ ಶೈಕ್ಷಣಿಕ ವಿಚಾರ ಸಂಕೀರ್ಣಗಳಲ್ಲಿ, ಹದಿನಾರು ರಾಷ್ಟ್ರೀಯ ಶೈಕ್ಷಣಿಕ ವಿಚಾರ ಸಂಕೀರ್ಣಗಳಲ್ಲಿ, ಹದಿನೇಳು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಲೇಖನಗಳನ್ನು ಮಂಡಿಸಿದ್ದಾರೆ.

ಡಾ. ನಿರ್ಮಲಾ ಬಟ್ಟಲ ಅವರು ಮನದಾಳದ ಮಾತು ಕವನ ಸಂಕಲನ ಮತ್ತು ಭಾವಾವಲೋಕನ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ. 2018ರಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದಿಂದ ಮ. ಘು.ಘಿವಾರಿ ಸಾಹಿತ್ಯ ಪ್ರಶಸ್ತಿ ದೊರಕಿದೆ.

ಡಾ. ನಿರ್ಮಲಾ ಬಟ್ಟಲ ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್,ಅಖಿಲ ಭಾರತ ಕವಯತ್ರಿಯರ ಸಮಾವೇಶ, ಉತ್ತರ ಕರ್ನಾಟಕ ಲೇಖಕರ ಸಂಘ, ಕರ್ನಾಟಕ ಲೇಖಕಿಯರ ಸಂಘ, ರೆಡ್ ಕ್ರಾಸ್ ಸಂಘ, ಪರಿಸರ ಮಿತ್ರ ಸಂಘ, ಅಕ್ಕನ ಅರಿವು ವೇದಿಕೆ, ಅಕಾಡೆಮಿ ಆಫ್ ಕಂಪೇರಿಟಿವ್ ಫಿಲಾಸಫಿ ಅಂಡ್ ರಿಲಿಜನ್ ಸಂಸ್ಥೆಯ ಆಜೀವ ಸದಸ್ಯರಾಗಿದ್ದಾರೆ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಬೆಳಗಾವಿಯ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹಾನಗರ ಪಾಲಿಕೆಯ ಕನ್ನಡ ಜಾಗೃತ ಸಮಿತಿಯ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡಿರುತ್ತಾರೆ.

ಹವ್ಯಾಸಗಳು

1..ಕಥೆ ಕವನ ಪ್ರಬಂಧ ಮತ್ತು ಲೇಖನಗಳನ್ನು ಬರೆಯುವುದು
2..ಶೈಕ್ಷಣಿಕ ನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆ
3.. ಚಿತ್ರಕಲೆ, ಕಲಾ ಕೃತಿಗಳ ರಚನೆ
4.. ಜನಪದ ಸಾಹಿತ್ಯ ಮತ್ತು ಸುಗಮ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
5.. ಇವರು ಬರೆದ ಕಥೆ, ಕವನ, ಲೇಖನಗಳು ತುಷಾರ ಮಾಸಪತ್ರಿಕೆ, ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಮತ್ತು ಸoಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.
6.. 2005ರಲ್ಲಿ ಕರ್ನಾಟಕ ಏರ್ಪಡಿಸಿದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ
7.. ಶೈಕ್ಷಣಿಕ ಆಪ್ತ ಸಲಹೆಗಾರರಾಗಿ ಹಲವಾರು ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ
8.. ಸುವರ್ಣವಾಹಿನಿಯ ಚರ್ಚಾ ಸ್ಪರ್ಧೆಯಲ್ಲಿ ಮತ್ತು ಬಸವ ವಾಹಿನಿಯ ಚರ್ಚೆಯಲ್ಲೂ ಭಾಗವಹಿಸಿದ್ದಾರೆ.
9.. ಬೆಳಗಾವಿಯ ವೇಣು ಧ್ವನಿ ಸಮುದಾಯ ಬಾನುಲಿ ಕೇಂದ್ರದ ಮಹಿಳಾ ವೇದಿಕೆಯಲ್ಲಿ ಹಲವಾರು ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
10.. ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನಾ ಗೋಷ್ಠಿಗಳಲ್ಲಿ ಚಿಂತಕರಾಗಿ ಭಾಗವಹಿಸಿದ್ದಾರೆ.
11.. ಬೆಳವಡಿ ಉತ್ಸವ ಕಿತ್ತೂರು ಉತ್ಸವಗಳಲ್ಲಿ ಮತ್ತು
ಶರಣ ಸಾಹಿತ್ಯ, ಮಹಿಳೆ ಮತ್ತು ಪ್ರೇರಣಾತ್ಮಕ ವಿಷಯಗಳ ಮೇಲೆ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ.
12.. ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಬೆಳಕಿನ ಕನ್ನಡಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
13.. ಭುವನೇಶ್ವರಿ ಉತ್ಸವ ಮಂಡಳಿ ಏರ್ಪಡಿಸಿದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿದ ಚನ್ನಬಸವಣ್ಣ ನಾಟಕವು ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.
14.. ಬೆಳಗಾವಿಯ ರಂಗಸಂಪದ ಆನ್ ಲೈನ್ ನಾಟಕದಲ್ಲಿ ಮತ್ತು ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪಂಚಕನ್ಯಾ ಸ್ಮರೇ ನಿತ್ಯo ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
15.. ಬೆಳಗಾವಿಯ ರಂಗಸಂಪದ ಸಕ್ರಿಯ ಸದಸ್ಯರಾಗಿ ನಾಯಿ ಕಳೆದಿದೆ, ಪರಿಮಳದವರು ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
16.. ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರವಾಗುವ ವಚನಾಮೃತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
17.. ಒಡಿಸ್ಸಾದ ಸಾಹಿತ್ಯ ಸಾಂಸ್ಕೃತಿ ಸಮಾರೋಹ ಸಂಸ್ಥೆ ಆಯೋಜಿಸಿದ ಎರಡನೆಯ ರಾಷ್ಟೀಯ ಸಾಹಿತ್ಯ ಹಬ್ಬ 2023 ಮತ್ತು 2024ರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಹೀಗೆ ಹತ್ತು ಹಲವಾರು ಕ್ಷೇತ್ರ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಒಬ್ಬ ಅತ್ಯುತ್ತಮ ಉಪನ್ಯಾಸಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ರಂಗಕರ್ಮಿಯಾಗಿ ಬೆಳಗಾವಿ ಯ ಜನಮಾನಸದಲ್ಲಿ ನೆಲೆ ನಿoತು ತಮ್ಮ ಛಾಪನ್ನು ಮೂಡಿಸಿದ್ದಾರೆ

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ – ಪುಣೆ –

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group