ಬೀದರ – ಕೇವಲ 500 ರೂ. ವಿಚಾರಕ್ಕೆ ಯುವಕರ ಎರಡು ಗುಂಪುಗಳು ಹಾಡಹಗಲೇ ಕೇಂದ್ರ ಬಸ್ ನಿಲ್ದಾಣದ ಎದುರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಕೈಯಲ್ಲಿ ಮಾರಕಾಸ್ರ್ತ ಹಿಡಿದು ಪರಸ್ಪರ ಹೊಡೆದಾಡಿಕೊಂಡ ಯುವಕರ ದೃಶ್ಯದ ವಿಡಿಯೋ ಬೆಚ್ಚಿಬೀಳಿಸುವಂತಿದೆ.
ಕೇವಲ 500 ರೂ ಸಾಲದ ವಿಚಾರವಾಗಿ ಯುವಕರ ನಡುವೆ ವಾಗ್ವಾದ ಆಗಿತ್ತು ಎನ್ನಲಾಗುತ್ತಿದೆ. ಮೊದಲು ವಾಗ್ವಾದದಿಂದ ಆರಂಭಗೊಂಡು ಕಾಲೇಜಿನಿಂದ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ತೀವ್ರಗೊಂಡು ಯುವಕನ ಮೇಲೆ ಅಟ್ಯಾಕ್ ಮಾಡಲಾಗಿದೆ.
ಗಲಾಟೆಯಲ್ಲಿ ಗಂಭೀರ ಗಾಯಗೊಂಡ ಕಾಲೇಜು ಯುವಕರು ವಿಷ್ಣು (17) ಹಾಗು ಕೇದಾರನಾಥ್ ಎಂಬ ಯುವಕರಿಗೆ ಗಂಭೀರ ಗಾಯಗಳಾಗಿದ್ದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

