ಸಿಂದಗಿ; ಭಾರತವು ಕಲೆ ಸಾಂಸ್ಕೃತಿಕ ಬೀಡಾಗಿದೆ ಅದಕ್ಕೆ ಗ್ರಾಮಗಳ ಸರ್ವೊತೋಮುಖ ಬೆಳವಣಿಗೆಯೇ ದೇಶದ ನಿಜವಾದ ಬೆಳವಣಿಗೆ ಗ್ರಾಮಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು. ಆಗ ದೇಶದ ಚಿತ್ರವೇ ಬದಲಾಗುತ್ತದೆ. ಒಂದು ರಾಷ್ಟ್ರ ಆಧುನಿಕ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ವಾಗಲು ಆರ್ಥಿಕ ಶಕ್ತಿ ಮತ್ತು ಶಸ್ತ್ರಾಸ್ತ್ರಗಳಿಂದ ಗುರುತಿಸುತ್ತದೆ. ಆದರೆ ಭಾರತೀಯ ಪರಂಪರೆಯಲ್ಲಿ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಭಾರತದ ನಿಜವಾದ ಶಕ್ತಿ ಅದು ಅದಮ್ಯ ಜ್ಞಾನ ಮತ್ತು ಶಿಸ್ತು ಎಂದು ಪರಮಾಣು ವಿಜ್ಞಾನಿ ಹಾಗೂ ಭಾರತ ಅಣುಶಕ್ತಿ ಆಯೋಗದ ಅಧ್ಯಕ್ಷ, ಮುಂಬೈ ಬಿಎಆರ್‌ಸಿ ನಿರ್ದೇಶಕ ಡಾ.ಅನಿಲ ಕಾಕ್ಕೋಡ್ಕರ್ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ನಡೆದ ಸಾರಂಗಮಠದ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ವತಿಯಿಂದ ಪ್ರತಿ ವರ್ಷ ದೇಶದ ಶ್ರೇಷ್ಠ ವಿಜ್ಞಾನಿಗೆ ಕೊಡಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಭಾರತದ ಸೈನಿಕರ ಬಲಾಢ್ಯತನ ಮತ್ತು ಆರ್ಥಿಕ ಶಕ್ತಿಯಲ್ಲಿ ದೊಡ್ಡ ದಾಪುಗಾಲು ಹಾಕುತ್ತಿದೆ. ಆದರೆ, ತಂತ್ರಜ್ಞಾನ ಅಳವಡಿಕೆಯಿಂದ ಕೃಷಿ ತನ್ನ ಮಹತ್ವವನ್ನು ಕಳೆದುಕೊಂಡು ತಲಾ ಆದಾಯದಲ್ಲಿ ನಾವು ಪ್ರಪಂಚದಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದ್ದೇವೆ. ಇದಕ್ಕೆ ಕಾರಣ ಆರ್ಥಿಕ ಹಂಚಿಕೆ ದೇಶದ ಕೆಲವೇ ಜನರ ಸೊತ್ತಾಗಿರುವುದು ಶೋಚನೀಯ. ಶಿಕ್ಷಣದ ಮೂಲ ಉದ್ದೇಶವೇ ಮಾನವೀಯ ಶಿಕ್ಷಣ ನೀಡುವುದಾಗಿದೆ. ನಮ್ಮ ನೈಜಜ್ಞಾನದಿಂದ ಮಾತ್ರ ನಮ್ಮ ರಾಷ್ಟ್ರವನ್ನು ಬಲಾಡ್ಯ ರಾಷ್ಟ್ರ ಮಾಡಲು ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಸಿಎಫ್‌ಟಿರ್‌ಐ ನಿವೃತ್ತ ಉಪನಿರ್ದೇಶಕ ಡಾ.ಪರಮಹಂಸ ಸಾಲಿಮಠ ಮಾತನಾಡಿ, ಸಿಂದಗಿಯ ಸಾರಂಗಮಠ ದೇಶದ ಶ್ರೇಷ್ಠ ವಿಜ್ಞಾನಿಗಳಿಗೆ ಖಗೋಳ ತಜ್ಞ ಭಾಸ್ಕರಾಚಾರ್ಯ -೨ರ ಹೆಸರಿನಲ್ಲಿ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಪರಮಾಣು ವಿಜ್ಞಾನಿ ಡಾ.ಕಾಕ್ಕೋಡ್ಕರ ಅವರು ಈ ದೇಶ ಕಂಡ ಅತ್ಯಂತ ಶ್ರೇಷ್ಠ ಪರಮಾಣು ವಿಜ್ಞಾನಿ. ಅವರ ಕಾರ್ಯಕ್ಕೆಜಗತ್ತು ಬೆರಗಾಗಿದೆ. ಪರಮಾಣು ಕ್ಷೇತ್ರದಲ್ಲಿ ಅವರ ಅಪ್ರತಿಮ ಸಾಧನೆಯಾಗಿದೆ ಎಂದರು.
ಈ ಸಂರ್ಭದಲ್ಲಿ ಭಾರತದ ಟಾಪ್‌ಟೆನ್ ಅಂತರರಾಷ್ಟ್ರೀಯ ಫೈನ್‌ಆರ್ಟ ಕಲಾವಿದ ಪೂಜಾ ಈರಣ್ಣ ರುಕುಂಪುರ ಪ್ರಶಸ್ತಿ ದಾನಿರವರು ಪ್ರತಿ ವರ್ಷ ನೀಡಲಾಗುತ್ತಿರುವ ಭಾಸ್ಕರರಾಷ್ಟ್ರೀಯ ಪ್ರಶಸ್ತಿಯನ್ನು ಪರಮಾಣು ವಿಜ್ಞಾನಿ ಡಾ.ಕಾಕ್ಕೋಡ್ಕರ ಅವರಿಗೆ ಭಾಸ್ಕರರಾಷ್ಟ್ರೀಯ ಪ್ರಶಸ್ತಿ, ಫಲಕ, ೧ ಲಕ್ಷ ನಗದು ರೂ ನೀಡಿ ಗೌರವಿಸಲಾಯಿತು.
ಈ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪರಮಾಣು ವಿಜ್ಞಾನಿ ಡಾ.ಕಾಕ್ಕೋಡ್ಕರ ಅವರೊಂದಿಗೆ ಅಣುಶಕ್ತಿ, ಪರಮಾಣು ಶಕ್ತಿ ಸೇರಿದಂತೆ ವಿವಿಧ ಪ್ರಶ್ನೆಗಳ ಮೂಲಕ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ, ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು.
ವೇದಿಕೆ ಮೇಲೆ ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಎಂಎಲ್ಸಿ ಅರುಣ ಶಹಾಪೂರ, ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ಹ.ಮ.ಪೂಜಾರಿ, ಡಾ.ಬಿ.ಸಿ.ಉಪ್ಪಿನ, ಅಶೋಕ ಬೂದಿಹಾಳ ಸೇರಿದಂತೆ ಇತರರು ಇದ್ದರು.
ಪ್ರಾಧ್ಯಾಪಕ ಡಾ.ರವಿ ಗೋಲಾ, ಪೂಜಾ ಹಿರೇಮಠ ನಿರೂಪಿಸಿದರು. ಪ್ರಾಚಾರ್ಯ ಡಿ.ಎಂ.ಪಾಟೀಲ ಸ್ವಾಗತಿಸಿದರು. ಶ್ರೀಮಠದ ಉತ್ತರಾಧಿಕಾರಿ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ವಂದಿಸಿದರು.

