ಹಿರೇಮಳಗಾವಿ ಶಾಲೆಯ ವೀಣಾ ಹುಚಕರಿ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Must Read

2025-26 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಕಂಠಪಾಠ ಕನ್ನಡ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಕು.ವೀಣಾ ಸಂಗನಬಸಪ್ಪ ಹುಚಕರಿ ವಿದ್ಯಾರ್ಥಿನಿಗೆ ಶಾಲೆಯ ಸರ್ವ ಶಿಕ್ಷಕ ಬಳಗವು ಸನ್ಮಾನವನ್ನು ಮಾಡಿ ಪ್ರೋತ್ಸಾಹಿಸಿದರು.

ಮುಖ್ಯ ಗುರುಗಳು ಶ್ರೀಮತಿ ಬಿ ಬಿ ದೇವದುರ್ಗ, ಹಿರಿಯ ಶಿಕ್ಷಕ ಬಿ ಎಂ ಅಂಗಡಿ, ವಿಜ್ಞಾನ ಶಿಕ್ಷಕ ಎಂ ಎಚ್ ಪೂಜಾರಿ, ಗಣಿತ ಶಿಕ್ಷಕ ಮುತ್ತು ವಡ್ಡರ, ಸಮಾಜ ವಿಜ್ಞಾನ ಶಿಕ್ಷಕ ಹನಮಂತ ಮಾದರ, ಗೌರವ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಕನಕನ್ನವರ ಮತ್ತು ಅಡುಗೆ ಸಿಬ್ಬಂದಿಯವರು, ಹಿರೇಮಳಗಾವಿ ಗ್ರಾಮದ ಶಿಕ್ಷಣ ಪ್ರೇಮಿಗಳು, ಊರಿನ ಗುರು ಹಿರಿಯರು ಹಾಗೂ ಸರ್ವ ವಿದ್ಯಾರ್ಥಿಗಳ ಬಳಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವೀಣಾ ಹುಚಕರಿ ವಿದ್ಯಾರ್ಥಿನಿಗೆ ಶುಭಾಶಯ ಕೋರಿ ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group