ಬಾದಾಮಿ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ – ರಾಜೇಂದ್ರ ದೇಶಪಾಂಡೆ

Must Read

ಅಮೀನಗಡ : ಪತ್ರಿಕೋದ್ಯಮ ಸಂವಿಧಾನದ 4 ನೇ ಅಂಗವಾಗಿದೆ ಸಮಾಜವನ್ನು ತಿದ್ದಿ, ಬಡೆದೆಬ್ಬಿಸುವ ಮಹತ್ತರ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ, ಇದರಿಂದ ಅವರ ಸಮಾಜ ಸೇವೆಗೆ ಸಂದ ನಿಜವಾದ ಗೌರವ ಇದಾಗಿದೆ. ಈ ಗೌರವ ಸನ್ಮಾನ, ಪ್ರಶಸ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರವರ ಜವಾಬ್ದಾರಿಯನ್ನು ತಾವು ಮತ್ತಷ್ಟು ಗಟ್ಟಿಗೊಳಿಸಿದ್ದೀರಿ ನಮ್ಮಿಂದ ಯಾವುದೇ ಸಹಕಾರ ಬೇಕಾದರೂ ನೇರವು ನೀಡುತ್ತೇವೆ  ಎಂದು ರಾಜೇಂದ್ರ ದೇಶಪಾಂಡೆ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬದಾಮಿ ನಗರದ ಶ್ರೀ ಸಾಯಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬದಾಮಿ ಹಾಗೂ ಜಿಲ್ಲಾ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮತ್ತು ಧಾರ್ಮಿಕ ಸಮಾಜ ಸೇವಕರಿಗೆ ಬಿಬಿ ನ್ಯೂಸ್ ನಡೆಸಿದ *ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ* ಅಭಿಯಾನದಡಿ “ರಾಜ್ಯ ಪ್ರಶಸ್ತಿ” ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಅವರು ಉದ್ಘಾಟಕರಾಗಿ ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಮಾತನಾಡಿದ ನಾಗರಾಜ ಕಾಚಟ್ಟಿ ನಗರದಲ್ಲಿ ಇತ್ತಿಚೆಗೆ ನಿರ್ಮಾಣಗೊಂಡು ಅಭಿವೃದ್ಧಿ ಮಾಡುತ್ತಿರುವ ಶ್ರೀ ಸಾಯಿ ಮಂದಿರದ ನಿರ್ಮಾಣಕ್ಕೆ ಈ ದಿನ ಧಾರ್ಮಿಕ ಸಮಾಜ ಸೇವಾ ರತ್ನಾ ರಾಜ್ಯ ಪ್ರಶಸ್ತಿಯನ್ನು ಪಡೆಯುತ್ತಿರುವ ಕಮಲಮ್ಮ ಜಿಗಬಡ್ಡಿ ಹಾಗೂ ಬಸಮ್ಮ ಗುರಯ್ಯ ಕಾರೂಡಗಿಮಠ ಅಮ್ಮನವರನ್ನು ಗುರುತ್ತಿಸಿದ್ದು ನಿಜಕ್ಕೂ ಶ್ಲಾಘನೀಯ. ಅವರ ನಿರಂತರ ಹೋರಾಟ, ಸೇವೆಯ ಫಲವಾಗಿ ಅಸಂಖ್ಯಾತ ಶ್ರೀ ಸಾಯಿ ನಾಥರ ಭಕ್ತರು ಈ ದೇವಸ್ಥಾನ ಹುಡುಕಿಕೊಂಡು ಬಂದು ದರ್ಶನ ಪಡೆಯುತ್ತಾರೆ. ಇದಕ್ಕೆ ಕಾರಣ ಇವರ ಶ್ರಮ,ಹಾಗೆ ನಗರದ ಹೋಟೆಲ್ ಉದ್ಯಮಿ ರಾಕೇಶ ಖಾಲ್ ಹಾಗೂ ರಾಮ್ ಶೆಟ್ಟಿ ಬಹಳ ತಳ ಮಟ್ಟದಿಂದ ಹೋಟೆಲ್ ಸರ್ವರ್ ಆಗಿ ಈಗ ಇಬ್ಬರು ಮಾಲಿಕರಾಗಿ 30 ಜನರಿಗೆ ಕೆಲಸ ಕೊಟ್ಟು ಸೋಮಾರಿ ಯುವಕರಿಗೆ ಮಾದರಿಯಾಗಿ ಸುಸಜ್ಜಿತ ಹೋಟೆಲ್ ಉದ್ಯಮ ಮಾಡುತ್ತಿದ್ದಾರೆ. ಇವರಿಗೆ ಬೆಸ್ಟ್ ಮ್ಯಾನೇಜ್‌ಮೆಂಟ್‌ ಅವಾರ್ಡ ಸಿಕ್ಕಿದ್ದು ಬಹಳ ಖುಷಿ ತಂದಿದೆ. ಇವರಿಬ್ಬರು ನನ್ನ ಕಣ್ಣ ಮುಂದೆ ಬೆಳೆದ ಯುವಕರು, ಅದರಂತೆ ಇಲ್ಲಿ ಈ ದಿನ ಸನ್ಮಾನಕ್ಕೆ ಪಾತ್ರರಾಗಿ ಆಗಮಿಸಿದ ತಮಗೆ ಅಭಿನಂದನೆಗಳು ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು .

ನಗರದ ಅಂಜುಮನ್ ಇಸ್ಮಾಂ ಕಮಿಟಿ ಅಧ್ಯಕ್ಷ ಮೊಹಮ್ಮದ್ ಯುಶೂಫ್ ಫಿರಜಾದೆ ಮಾತನಾಡಿ ಇವತ್ತಿನ ಕೆಲವು ಮಾಧ್ಯಮಗಳು ವೈಯಕ್ತಿಕ ರಾಜಕೀಯ ಹಾಗೂ ನಾಯಕರನ್ನು ಮೆಚ್ಚಿಸುವ ಕೆಲಸ ಮಾಡುತ್ತಿವೆ. ಸಮಾಜದ ನಿಜವಾದ ಅಭಿವೃದ್ಧಿ, ಭ್ರಷ್ಟಾಚಾರಗಳಿಗೆ ಕುಮ್ಮಕ್ಕೂ ಕೊಡುತ್ತಿವೆ. ನಿಜವಾದ ಪತ್ರಕರ್ತರು ಸತ್ಯ,ಧರ್ಮ ಹಾಗೂ ಸಾಮಾಜಿಕ ಜವಾಬ್ದಾರಿ ಅರಿತು ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಬಾಗಲಕೋಟೆ ಇಂದ ಪ್ರಥಮವಾಗಿ ನಮ್ಮ ಬದಾಮಿ ನಗರದಲ್ಲಿ ಈ ದಿನಾಚರಣೆ ಅಂಗವಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ಖುಷಿ ತಂದಿದೆ ಈ ಸಂಘದ ಸರ್ವ ಸದಸ್ಯರಿಗೆ ಧನ್ಯವಾದ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶ್ರೀ  ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ಬದಾಮಿ ಇವರು ಮಾತನಾಡಿ ಬಾಗಲಕೋಟೆ ಕರ್ನಾಟಕ ಪತ್ರಕರ್ತರ ಸಂಘ ಬಹಳ ದೊಡ್ಡ ಕಾರ್ಯವನ್ನು ಮಾಡಿದೆ ,ರಾಜ್ಯ ಮಟ್ಟದ ಗೌರವ ಪುರಸ್ಕಾರವನ್ನು ಸಾಧಕರಿಗೆ ಮಾಡಿದ್ದು ಬಹಳ ಖುಷಿಯಾಗಿದೆ. ಒಬ್ಬ ನಿವೃತ್ತ ನಿಕ್ಷಕ 65 ಲಕ್ಷ ರೂಪಾಯಿ ವೆಚ್ಚದಲ್ಲಿ ಯಾವುದೇ ಮೂಲದಿಂದ ಹಣ ಪಡೆಯದೆ ಸಾರ್ವಜನಿಕವಾಗಿ ಶ್ರೀ ವೆಂಕಟೇಶ್ವರ ದೇವಸ್ಥಾನ ಕಟ್ಟಿ ಮಾದರಿಯಾಗಿದ್ದಾನೆ. ಇಂತಹ ದಾನಿಗೆ ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಹುಡುಕಿ ಕೊಟ್ಟಿದ್ದು ಬಹಳ ದೊಡ್ಡ ಕೆಲಸ ಎಂದರು. ಅವರಂತೆ ವಿವಿಧ ಸಾಧಕರನ್ನು ನೋಡಿ ಬಹಳ ಖುಷಿ ಆಯಿತು ಆ ಸಾಯಿನಾಥನ ಅನುಗ್ರಹ ನಿಮ್ಮೆಲ್ಲರ ಮೇಲೆ ಹಾಗೂ ಈ ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲ ಪತ್ರಿಕಾ ಮಾಧ್ಯಮದವರಿಗೆ ಶ್ರೀ ಸಾಯಿನಾಥನ ಅನುಗ್ರಹ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಹಲವಾರು ಸಾಧಕರಿಗೆ ವಿವಿಧ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಮಲಮ್ಮ ವಿ ಜಿಗಬಡ್ಡಿ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ
ಬಸಮ್ಮ ಗುರಯ್ಯ ಕಾರೂಡಗಿಮಠ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಮಲ್ಲಪ್ಪ ಸಂಗಪ್ಪ ಮೂಲಿಮನಿ – ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ಮಲ್ಲಮ್ಮ ಸಂಗಣ್ಣ ಬಿರಾದಾರ್- ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ರತ್ನಾ ಬಾ ದೇವರೆಡ್ಡಿ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಭೀಮಪ್ಪ ಸತ್ಯಪ್ಪ ಬೂದನಗಡ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಶಂಕರಲಿಂಗಪ್ಪ ಎಸ್ ಮಂಕಣಿ ,ಸಹಕಾರಿ ರಂಗದ ಭೀಷ್ಮ, ರಾಜ್ಯ ಪ್ರಶಸ್ತಿ ಶೇಖರಯ್ಯ ಪರಯ್ಯ ಬಿಕ್ಷಾವತಿಮಠ – ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿ , ಬಸವರಾಜ್ ಕುಂಬಾರ – ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ರಾಮ್ ಬಿ ಶೆಟ್ಟಿ ಬೆಸ್ಟ್‌ ಹೋಟೆಲ್ ಮ್ಯಾನೆಜ್‌ಮೆಂಟ್‌ ಅವಾರ್ಡ  ರಾಕೇಶ್ ನಾಗೇಶ ಕಲಾಲ್ ಬೆಸ್ಟ್ ಹೋಟೆಲ್ ಮ್ಯಾನೆಜ್‌ಮೆಂಟ್‌ , ಬಸವರಾಜ್ ಪು ಕುಂಬಳಾವತಿ – ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ. ದೇವೇಂದ್ರಗೌಡ ಹೊನ್ನಪ್ಪಗೌಡ ಪಾಟೀಲ – ಪೂರ್ಣಿಮಾ ಗ್ರಾಮೀಣ ಅಭಿವೃದ್ಧಿ ಸಂಘಕ್ಕೆ – ಅತ್ಯುತ್ತಮ ಗ್ರಾಮೀಣ ಅಭಿವೃದ್ಧಿ ರತ್ನ ರಾಜ್ಯ ಪ್ರಶಸ್ತಿ ಬೆನಕಪ್ಪ ಎಮ್ ಸಂಕನೂರು- ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ,  ಶ್ರೀಧರ ಚಂದ್ರಪ್ಪ ಚಿತ್ರಗಾರ, – ಜ್ಯೋತಿಷ್ಯ ಬ್ರಹ್ಮ ರಾಜ್ಯ ಪ್ರಶಸ್ತಿ ಸಂಗಣ್ಣ ಬಿ ಬಿರಾದಾರ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ , ಎಮ್ ಎಸ್ ವಾರದ ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು ,

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ ಅವರು ಇಷ್ಟು ಜನ ಸಾಧಕರಿಗೆ ಗುರುತಿಸಿ ಗೌರವಿಸಿ ಸನ್ಮಾನ ಮಾಡಿದ್ದು ಶ್ಲಾಘನೀಯ ಮಾಧ್ಯಮ ಇಂತಹ ಸಾಮಾಜಿಕ ಕಾರ್ಯ ಮಾಡಿದ್ದನ್ನು ನೋಡಿದ್ದು ಇದೆ ಮೊದಲು ಎಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಕುಂಬಾರ ಧನ್ಯವಾದ ಹೇಳಿದರು.

ಸಮಾರಂಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಶಿವಪೂಜಾ ಶಿವಚಾರ್ಯ ಮಹಾಸ್ವಾಮಿಗಳು ಬದಾಮಿ, ಹಾಗೂ ರಾಜೇಂದ್ರ ದೇಶಪಾಂಡೆ, ಎಸ್ ಎಸ್ ಮಿಟ್ಟಲಕೊಡ, ನಾಗರಾಜ್ ಕಾಚಟ್ಟಿ, ಎಮ್ ಎಸ್ ಹಿರೇಮಠ ಮೊಹಮ್ಮದ್ ಯುಶೂಫ್ ಫಿರಜಾದೆ, ಕಮಲಮ್ಮ ಜಿಗಬಡ್ಡಿ, ಬಸಮ್ಮ ಗು ಕಾರೂಡಗಿಮಠ ರತ್ನಾ ಬಾ ದೇವರಡ್ಡಿ, ವಾಯ್ ಬಿ ಕಾರೂಡಗಿಮಠ ಸೇರಿದಂತೆ ಜಿಲ್ಲಾ ಅಧ್ಯಕ್ಷ ಡಿ ಬಿ ವಿಹಯಶಂಕರ್ ತಾಲೂಕು ಅಧ್ಯಕ್ಷ ಬಸವರಾಜ್ ಚಂಚಿ, ಜಿಲ್ಲಾ ಕಾರ್ಯದರ್ಶಿ ಕಿರಣರಾಜ್ ಕಾಳಗಿ, ಆಪ್ತ ಸಲಹೆಗಾರರು ಭೀಮಸೆಂಗ್ ರಾಠೋಡ ಅನೇಕರು ಹಾಜರಿದ್ದರು.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group