ಹಾಸನದ ಹಾಸನಾಂಬ ‘ಕಲಾಕ್ಷೇತ್ರದಲ್ಲಿ ಸ್ಥಳೀಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘವು ಹಮ್ಮಿ ಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಶುಕ್ರವಾರ ದಕ್ಷಯಜ್ಞ ನಾಟಕ ಪ್ರದರ್ಶಿಸಿದರು.
ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ತಾವು ರಂಗಭೂಮಿಗೆ ಬಂದು 18 ವರ್ಷ ಆಗಿದೆ. ಈವರೆಗೆ 200 ನಾಟಕಗಳಲ್ಲಿ ನಟಿಸಿದ್ದೇನೆ. ಸಂಘ ಹಲವಾರು ಹೊಸ ನಾಟಕ ಪ್ರದರ್ಶಿಸಿದೆ. ಪೌರಾಣಿಕ ನಾಟಕೋತ್ಸವ ನಡೆಸಿದ್ದೇವೆ.ಮುಂದೆಯೂ ರಂಗ ಚಟುವಟಿಕೆ ನೆಡೆಸಲು ಸಂಘದ ಕಲಾವಿದರು ಅಧ್ಯಕ್ಷ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾಟಕದ ಮೇಷ್ಟ್ರು ಡಿ.ಸಿ ಪುಟ್ಟರಾಜು ನಮಗೆ ಹೊಸ ಹೊಸ ನಾಟಕ ಕಲಿಸಿ ಕೊಟ್ಟ ಕಡಿಮೆ ಸಂಭಾವನೆ ಸ್ವೀಕರಿಸಿ ಆತ್ಮೀಯತೆಯಲ್ಲಿ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರಿಗೆ ನಾವು ಕಲಾವಿದರು ಪ್ರೀತಿಯಿಂದ ಬೆಳ್ಳಿ ಕಿರೀಟ ಉಂಗುರ ತೊಡಿಸಿ ಗೌರವಿಸಲಾಗುತ್ತಿದೆ ಎಂದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರಚಿತ ದಕ್ಷಯಜ್ಞ ನಾಟಕ ಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹತ್ತು ವರ್ಷಗಳ ಹಿಂದೆ ಎ.ಸಿ. ರಾಜು ಈ ನಾಟಕವನ್ನು ಇಲ್ಲಿ ನಿರ್ದೇಶಿಸಿ ನಾಟಕ ಪ್ರದರ್ಶನ ಕುರಿತಾಗಿ ಬರೆದಿದ್ದೆ. ನಾಟಕವೀಕ್ಷಣೆ ವಯಸ್ಕರ ಮನಸ್ಸಿಗೆ ಉಲ್ಲಾಸ ತರುತ್ತದೆ. ಪ್ರೇಕ್ಷಕರೆ ಕಲಾವಿದರಿಗೆ ಸ್ಫೂರ್ತಿ. ಜೀವಂತ ಕಲೆ ನಾಟಕ ಹೀಗೆ ಸಾಗಲಿ ಎಂದು ಆಶಿಸಿದರು.
ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಸಮಿತಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಲಾವಿದರು ರಮೇಶ್ ಗೌಡಪ್ಪ, ಸಿ.ಎಂ.ಶ್ರೀಕಂಠಪ್ಪ, ವೇದ ಶಿವಕುಮಾರ್, ವಕೀಲರು ಐ.ಎ.ಮಹೇಂದ್ರ, ಬಿ.ಕೆ.ವಿಶ್ವನಾಥಗೌಡ ಎಂ.ಟಿ.ತಿಮ್ಮೇಗೌಡ, ಕಲಾವಿದರು ಕೆ.ಕೆ.ರಂಗಸ್ವಾಮಿ, ಟಿ.ವಿ.ನಾಗರಾಜ್ ಹೆಚ್.ಎಂ.ಪ್ರಭಾಕರ್, ಸಾವಿತ್ರಿ ಗಂಗಾಧರ್, ಯರೇಹಳ್ಳಿ ಮಂಜೇಗೌಡರು, .ಜಗದೀಶ್ ರಾಮಘಟ್ಟ, ಗ್ಯಾರಂಟಿ ರಾಮಣ್ಣ, ಶಶಿಕುಮಾರ್ ಸಾಲಗಾಮೆ, ನಾಟಕ ನಿರ್ದೇಶಕರು ಎ.ಸಿ. ರಾಜು, ಸೀನ್ಸ್ ಮಾಲೀಕರು ಲಕ್ಷಣ್ ಕಡಗ, ನಿ. ಪ್ರಾಧ್ಯಾಪಕರು ಎ ಹೆಚ್ ಗಣೇಶ ಅಂಕಪುರ, ಕಾರ್ಲೆ ಗೋವಿಂದೇಗೌಡರು ಇದ್ದರು. ಸಿಗರನಹಳ್ಳಿ ಚಂದ್ರಶೇಖರ್ ನಿರೂಪಿಸಿದರು. ಬ್ಯಾಟಾಚಾರ್ ಪ್ರಾರ್ಥಿಸಿದರು.
ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿಯ ಉತ್ತಮ ಬೆಳಕು ಮೇಕಪ್ ಮೈಕ್ ವಸ್ತ್ರಾಲಂಕಾರಗಳಲ್ಲಿ ದಕ್ಷ ಯಕ್ಷ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ನಾಟಕದ ದಕ್ಷಬ್ರಹ್ಮ ಪಾತ್ರದಲ್ಲಿ ಸತೀಶ್ ಕಬ್ಬತ್ತಿ. ಬಾಲ ಬ್ರಹ್ಮ – ಬಾನು ಶೇಖರ್ ಈಶ್ವರ -ನಿರಂಜನ, ಬ್ರಹ್ಮ – ನಾಗರಾಜ್ ಸಿ.ಜಿ. ಗಮನ ಸೆಳೆದರು. ಚಂದ್ರಮ ರೋಹಿಣಿ ಪಾತ್ರಗಳಲ್ಲಿ ನಿಂಗರಾಜು ಮತ್ತು ನಾಗಮಣಿ, ವಸುಂದರ ಪದ್ಮ ಪಾತ್ರಗಳಲ್ಲಿ ಮಂಜುನಾಥ್ ಚಂದನ ಜೋಡಿ ಚಂದವಾಗಿ ನರ್ತಿಸಿ ಶೃಂಗಾರ ಗೀತೆಗಳಿಂದ ರಂಜಿಸಿದರು. ನಾರದನ ಪಾತ್ರವನ್ನು ಇಬ್ಬರು ರಮೇಶ್ ಕೆ ಮತ್ತು ಆನಂದಮೂರ್ತಿ ನಿಭಾಯಿಸಿದರು. ಭೃಗು ಮಹರ್ಷಿ – ಡಿ.ವಿ.ನಾಗಮೋಹನ್ ನಂದಿ – ಜಗದೀಶ್, ವೀರಭದ್ರ ಪಾತ್ರ ಕುಮಾರ್ ಸ್ತ್ರೀ ಪಾತ್ರಗಳು ಆದಿಶಕ್ತಿ ದೀಪು, ಪುಪ್ಪವತಿ- ಮಂಜಳ ಉಮೇಶ್, ರೇವತಿ – ಮಮತ, ಭರಣಿ – ಸಾವಿತ್ರಿ ಗಂಗಾಧರ್ ಅಭಿನಯಿಸಿದರು. ವಾದ್ಯ ಗೋಷ್ಠಿ ಕ್ಯಾಸಿಯೋ ವಿಶ್ವ ಮಂಡ್ಯ, ತಬಲ ಲೋಕಾಭಿರಾಮ ಮಂಡ್ಯ ಸಾತ್ ನೀಡಿದರು.

