ಮುಧೋಳ – ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ವರದಾನವಾಗಿವೆ ಎಂದು ಮುಧೋಳದ ಪುರಸಭೆಯ ಸದಸ್ಯೆ ರಾಜಿಮಾ ಭೇಪಾರಿ ಹೇಳಿದರು.
ಅವರು ಜನತಾ ಕಾಲೋನಿಯಲ್ಲಿ ಜರುಗಿದ ಅಲ್ಪಸಂಖ್ಯಾತರ ಮಹಿಳಾ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಭವಿಷ್ಯದ ಚಿಂತನೆಯನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದ ಅವರು ಬಡವರ ನಾಡಿ ಮಿಡಿತವನ್ನು ಅರಿತು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2028 ರ ವರೆಗೆ ಅವಧಿ ಪೂಣ೯ಗೊಳಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು
ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಮಂಟೂರ, ಮುಗಳಖೋಡ ಗ್ರಾ.ಪಂ.ಸದಸ್ಯ ಶಂಕರಗೌಡ ಪಾಟೀಲ, ಜುನ್ನೂರಿನ ಲೋಕಣ್ಣ ಪೂಜಾರಿ ಮುಂತಾದವರಿದ್ದರು

