ಬೆಂಗಳೂರು – ಡಿ 28ರಂದು ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ ಬೆಂಗಳೂರು ಇಲ್ಲಿ ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ (ರಿ) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ) ವತಿಯಿಂದ ವಿಶ್ವಮಾನವ ದಿನಾಚರಣೆ ಹಾಗೂ ಮೂರು ವರ್ಷ ಪೂರ್ಣಗೊಳಿಸಿದ ಅನ್ನಪೂರ್ಣೇಶ್ವರಿ ಫೌಂಡೇಶನ್ ಸ್ಥಾಪಕ ದಿನೋತ್ಸವ ಮತ್ತು ರಾಜ್ಯಮಟ್ಟದ ” ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ” ಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮೇಲಿನ ಪ್ರಶಸ್ತಿಗೆ ಮಹಿಳಾ ಸಾಧಕಿಯಾದ ಹಾಸನ ನಗರದ ಶಿಕ್ಷಕಿ, ಸಾಮಾಜಿಕ ಚಿಂತಕಿ, ಸಾಹಿತಿ, ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾಗಿರುವ ಹಾಗೂ ಜಿಲ್ಲೆ, ರಾಜ್ಯ,ಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಪ್ರತಿಮಾ ಹಾಸನ ಅವರಿಗೆ ಪ್ರದಾನ ಮಾಡಲಾಯಿತು.
ನಾಡು ನುಡಿ ಕಲೆ ಸಂಸ್ಕೃತಿಗೆ ನೀಡಿರುವ ಇವರ ಸೇವೆಯು ಅಪಾರವಾಗಿದ್ದು, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿಯನ್ನು ಪಡೆದು ಹಾಸನದ ಹೆಮ್ಮೆಯ ಪುತ್ರಿಯಾಗಿ ಗುರುತಿಸಿಕೊಂಡಿರುವ ಮಹಿಳಾ ಸಾಧಕಿಯಾದ, ಮಹಿಳಾ ಹೋರಾಟಗಾರ್ತಿಯಾದ ಪ್ರತಿಮಾ ಅವರು ಸಲ್ಲಿಸಿರುವ ಹಾಗೂ ಹಲವಾರು ಪ್ರಕಾರಗಳಲ್ಲಿ 12 ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಹಲವು ಕೃತಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಹಾಗೂ ಗಾಯಕಿ,ಅಂಕಣಗಾರ್ತಿ, ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಶಿಕ್ಷಣ ಕ್ಷೇತ್ರಕ್ಕೆ ಆಯ್ಕೆ ಮಾಡಿ ಪ್ರತಿಷ್ಠಿತವಾದ ” ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ‘ ನೀಡಿ ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಷ. ಬ್ರ. ಮಹರ್ಷಿ ತಪೋ ರತ್ನ ಶಿವಾಚಾರ್ಯರು, ಶಿವಸಿದ್ಧಿ ಸೋಮೇಶ್ವರ ಮಹಾ ಸಂಸ್ಕೃತಿಗಳು, ಶ್ರೀ ಕ್ಷೇತ್ರ ಮುಕ್ತಿ ಮಠ, ಭೂತರಾಮನಹಟ್ಟಿ, ಬೆಳಗಾವಿ ಹಾಗೂ ಶ್ರೀಮತಿ ನಿತ್ಯ ಎಂ ಆಚಾರ್ ಅಧ್ಯಕ್ಷರು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ). ನಿರಂಜನ್ ಶೆಟ್ಟಿ, ಸುಜ್ಞಾನಮೂರ್ತಿ. ಪಿ, ಇನ್ನು ಹಲವರು ಉಪಸ್ಥಿತರಿದ್ದರು.

