ನಂದಿನಿ ಸನಬಾಳಗೆ ‘ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ

Must Read

ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠ ಜೊತೆಗೆ ಸಹಪಠ್ಯಗಳ ಆಟ… ಅದರೊಂದಿಗೆ ಕಲಿಕಾ ಚಟುವಟಿಕೆಗಳ ಮೂಲಕ ಬೋಧನೆ ಮಾಡುತ್ತಾ ಬರುತ್ತಿರುವ ಇವರು, ಶೈಕ್ಷಣಿಕವಾಗಿ ಆದರ್ಶ ಸಂಘಟನೆಗಳ ಮೂಲಕ ಅಕ್ಷರದ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದರೆ ಅತಿಯಶೋಕ್ತಿ ಆಗಲಾರದು. ಬಿಸಿಲು ನಾಡಿನ ಭರವಸೆಯ ಶಿಕ್ಷಕಿ ನಂದಿನಿ ಸನಬಾಳ್ ರವರು. ಕಳೆದ ೨೨ ವರ್ಷಗಳಿಂದ

ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಸಾಹಿತ್ಯ ಸಂಸ್ಕೃತಿ ಹಾಗೂ ಸಮಾಜ ಸೇವೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸೇವೆ
ಸಲ್ಲಿಸುತ್ತಿರುವುದ್ದಾರೆ.

ಶ್ರೀಮತಿ ನಂದಿನಿ ಸನಬಾಳ್ ಇವರು ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾರೆ, ತಂದೆ ದಿವಂಗತ ಪುಟ್ಟರಾಜ್ ಶಂಭುಶಂಕರ ಹಾಗೂ ತಾಯಿ ಶ್ರೀಮತಿ ರಾಜೇಶ್ವರಿ. ಪಿ. ಇವರ ನೆಚ್ಚಿನ ಕುವರಿಯಾಗಿ ೨೧-೩-೧೯೮೧ ರಂದು ಬೀದರ್ ಜಿಲ್ಲೆಯ ಹುಮನಾಬಾದ ಎಂಬ ಗ್ರಾಮದಲ್ಲಿ
ಜನಿಸಿದರು. . ಶ್ರೀಮತಿ ನಂದಿನಿ ಸನಬಾಳ್ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಬೀದರ್  ಜಿಲ್ಲೆ ಬಸವಕಲ್ಯಾಣ ತಾಲೂಕು ರಾಜೇಶ್ವರ್ ಗ್ರಾಮದ ಪಾರ್ವತಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ಪೂರೈಸಿದರು. ಚಿಕ್ಕಂದಿನಲ್ಲಿ ಅಕ್ಷರದ ರುಚಿ ಕಂಡ ಇವರು ಪ್ರತಿ ಹಂತದಲ್ಲಿ ಒಬ್ಬ ಕ್ರಿಯಾತ್ಮಕ ವಿದ್ಯಾರ್ಥಿಯಾಗಿ ಜೊತೆಗೆ ಸರ್ವ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದರು.
ಪ್ರೌಢ ಶಿಕ್ಷಣವನ್ನು ಸತ್ಯಾಶ್ರಯ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ರಾಜೇಶ್ವರ್ ಗ್ರಾಮದಲ್ಲಿ ಪೂರೈಸಿದರು. ಈ ಹಂತದಲ್ಲಿ ವೈಜ್ಞಾನಿಕ ಮನೋಭಾವ ಹೊಂದಿದ
ಇವರು ಅಜ್ಞಾನಕ್ಕೆ ವಿಜ್ಞಾನವೇ ಮದ್ದು ಎಂದು ಅರ್ಥೈಸಿಕೊಂಡಿದ್ದರು.

ಪದವಿಪೂರ್ವ ಶಿಕ್ಷಣವನ್ನು ಬೀದರ ಜಿಲ್ಲೆಯ ಹುಮನಾಬಾದನ ಶ್ರೀ ವೀರಭದ್ರೇಶ್ವರ
ಪದವಿಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು. ಶಿಕ್ಷಕರ ಶೈಕ್ಷಣಿಕ ತರಬೇತಿಯನ್ನು ಕಲಬುರ್ಗಿ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಪಡೆಯುವ ಮೂಲಕ ಮುಂದೆ ಶಿವಮೊಗ್ಗದ ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪಡೆದರು. ಇಷ್ಟು ಮಾತ್ರವಲ್ಲದೆ ಮನೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ರೂಢಿಸಿಕೊಂಡರು.

ಸಹೃದಯಿ/ವೈಚಾರಿಕ ಮನೋಭಾವವುಳ್ಳ
ಶ್ರೀಮತಿ ನಂದಿನಿ ಸನಬಾಳ್ ಅವರು  ಒಬ್ಬ ಅಪ್ಪಟ ಪ್ರಗತಿಪರ ಚಿಂತಕರು ಸ್ವಾಮಿ ವಿವೇಕಾನಂದ ಮದರ್ ತೆರೇಸಾ, ಬಸವಣ್ಣ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಅಕ್ಷರದ ಅವ್ವ ಮಾತೆ ಸಾವಿತ್ರಿ ಫುಲೆ ಸೇರಿದಂತೆ ಅನೇಕ ರಾಷ್ಟ್ರ ನಾಯಕರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಇವರು ಇತ್ತೀಚೆಗೆ ತಮ್ಮ ಶಾಲೆಯ ಮಗುವೊಂದು ಹೃದಯಸಂಬಂಧಿ ಚಿಕಿತ್ಸೆ ಪಡೆಯಬೇಕಾದ ಸಂದರ್ಭದಲ್ಲಿ ಅವರ ತಾಯಿಯಿಂದ ವಿಷಯ ತಿಳಿದು ಅವರ ಬಡತನಕ್ಕೆ ಮರುಕಪಟ್ಟು ತಮ್ಮ ಶಿಕ್ಷಕ ಬಳಗದ ಮೂಲಕ ಹಣ ಸೇರಿಸಿ ತಮ್ಮಿಂದ ಉಳಿದ ಹಣ ಹಾಕುವ ಮೂಲಕ ಆ ಬಡ ಕುಟುಂಬದ ಮಗುವಿನ ಹೃದಯಸಂಬಂಧಿ ಚಿಕಿತ್ಸೆಗೆ ನೆರವಾಗುವ ಮೂಲಕ ಸಹೃದಯಿ ಶಿಕ್ಷಕಿಯಾಗಿ ಪ್ರೀತಿ ತೋರಿರುವರು.

ಶಾಲೆಯಲ್ಲಿ ಎಲ್ಲ ಮಕ್ಕಳು ಇವರನ್ನು ಕಂಡ ತಕ್ಷಣ ಇವರ ಬಳಿ ಬರುವದು. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಅವರ ಜೀವನ ಹೇಗೆ ಸಾಗಿದೆ ಎಂಬುದನ್ನು ತಿಳಿದುಕೊಂಡು ತಮ್ಮಿಂದ ಕೈಲಾದ ಮಟ್ಟಿಗೆ ಸಹಾಯ ನೀಡುವ ಇವರ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜಮುಖಿಯಾಗಿ ತಮ್ಮದೇ ಚಟುವಟಿಕೆಗಳಲ್ಲಿ ನಿರತರಾಗಿರುವುದನ್ನು ಕಂಡು ಅವರ ಬದುಕಿಗೆ ಅನುಕೂಲವಾಗುವ ಸಲಹೆಗಳನ್ನು ನೀಡುವುದಲ್ಲದೇ ಅವರ ಮಕ್ಕಳು ತಮ್ಮ ಕೈಯಲ್ಲಿ ಕಲಿಯುತ್ತಿರುವುದನ್ನು ಕಂಡಾಗ ತುಂಬಾ ಸಂತೋಷ ಪಡುವ ಮನೋಭಾವ ಇವರದು.

೨೦೦೩ರಲ್ಲಿ ತಮ್ಮ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ್ದು ಕಲಬುರಗಿ ತಾಲೂಕಿನ ಪಾಳಾ ಎನ್ನುವ ಗ್ರಾಮದಲ್ಲಿ. ಇವರದ್ದು ಆದರ್ಶ ಕುಟುಂಬ. ಸುರೇಂದ್ರ ಸನಬಾಳ್ ಇವರ ಪತಿ, ಇವರ ಪತಿಯ ಪ್ರೋತ್ಸಾಹ ಕೂಡ ಇವರಿಗೆ ದೊರೆಯುವ ಮೂಲಕ ತಮ್ಮ ಉತ್ತಮ ಹವ್ಯಾಸ ಮುಂದುವರೆದಿದೆ ಎಂದು ಹೆಮ್ಮೆ ಯಿಂದ ಹೇಳುವ ಶ್ರೀಮತಿ ನಂದಿನಿ ಸನಬಾಳ್ ದಂಪತಿಗಳು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿರುವರು. ಕುಮಾರಿ ಶ್ರದ್ಧಾ ಮತ್ತು ಕನಿಷ್ಕ ಮತ್ತು ಕುಮಾರ ರೀಯಾಂಶ ಸನ್ಬಾಳ್ ಎಂಬ ಮುದ್ದು ಮಕ್ಕಳ ಜೊತೆ ಸದಾ ಶೈಕ್ಷಣಿಕವಾಗಿ ಒಂದಿಲ್ಲ ಒಂದು ಕಾರ್ಯನಿರ್ವಸುತ್ತ ಬರುತ್ತಿರುವ ಈ ದಂಪತಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸುರೇಂದ್ರ ಸನಬಾಳ್ ಅವರು

ಕಲ್ಬುರ್ಗಿ ನಗರ ಸರಕಾರಿ ಆಸ್ಪತ್ರೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಸಂದರ್ಭದಲ್ಲಿ ಪತಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ಬಡವರಿಗೆ ಸಂದರ್ಭದಲ್ಲಿ ಅಲ್ಪಸಲ್ಪ ಧನ ಸಹಾಯ
ಮಾಡಿದ್ದಾರೆ. ಹಿರಿಯ ಮಗಳು ಬಿ.ಇ.ಸಿವ್ಹಿಲ್ 7 ಸೆಮಿಸ್ಟರ್ ಓದುತ್ತಿದ್ದಾಳೆ.ಎರಡನೆಯವಳು ನಾಲ್ಕನೆಯ ತರಗತಿ ಓದುತ್ತಿರುವಳು.ಮೂರನೆಯವನು ಬರುವ ವರ್ಷ ಒಂದನೆಯ ತರಗತಿಗೆ ದಾಖಲಾಗುವನು.ಈ ರೀತಿಯ ಮಕ್ಕಳ ಶೈಕ್ಷಣಿಕ ಬದುಕನ್ನು ಕೂಡ ಕಾಳಜಿಯಿಂದ ಓದಿಸುತ್ತಿರುವರು.

ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲ ಶಿಕ್ಷಕಿ.

ನಮ್ಮ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ಅದಕ್ಕೆ ದೇವರು ಪ್ರತಿಫಲ ನೀಡುತ್ತಾನೆ ಎಂಬುದಕ್ಕೆ ನಂದಿನಿ ಸನಬಾಳ್ ನಿದರ್ಶನ.ಇವರು ಶಿಕ್ಷಣ ಇಲಾಖೆಯ ಶಿಕ್ಷಕರ
ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇವರು ಮಾತೆ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕದ ಕಲಬುರಗಿ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಲಬುರಗಿ ಜಿಲ್ಲಾ ಪಿ ಎಸ್ ಟಿ ಮುಖ್ಯಸ್ಥರಾಗಿ ನಿರ್ವಹಿಸಿದ್ದಾರೆ.

ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ SKUPS ನ ರಾಜ್ಯ ಘಟಕ ಕಲಬುರ್ಗಿ ಜಿಲ್ಲಾ
ಘಟಕ ಹಾಗೂ ಕಲಬುರ್ಗಿ ತಾಲೂಕು, ದಕ್ಷಿಣ ವಲಯದ ಅಧ್ಯಕ್ಷರಾಗಿ.

ಕರ್ನಾಟಕ ರಾಜ್ಯ ಸರ್ಕಾರಿ,ಅರೆ ಸರ್ಕಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನೌಕರರ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಿದ್ದಾರೆ.

ಇವರು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹಾಗೂ ಕಲಬುರ್ಗಿ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸರ್ವ ಇಲಾಖೆಗಳ ಮಹಿಳಾ ನೌಕರರ ಪರವಾಗಿ ಇವರ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.

ಕಲಬುರಗಿ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದಿಂದ ಕನ್ನಡ ಪ್ರಾಧಿಕಾರದ ಕಲಬುರಗಿ ಜಿಲ್ಲಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ

ಇವರ ಚಟುವಟಿಕೆಗಳನ್ನು ವಿವಿಧ ಇಲಾಖೆಯವರನ್ನು ಗುರುತಿಸಿ ಅವರ ಕಾರ್ಯ ಸಾಧನೆಯನ್ನು ಕಂಡು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಗುರುತಿಸಿ, ಸಂಘಟನೆ ಪರವಾಗಿ ಪ್ರಶಸ್ತಿಗಳನ್ನು ಕೂಡ ನೀಡುತ್ತಿದ್ದಾರೆ. ಶಿಕ್ಷಣ ಶಿಸ್ತು ಸಂಘಟನೆ ಹೋರಾಟ ಮತ್ತು ಪ್ರಶಸ್ತಿ ಈ ಆದರ್ಶಗಳನ್ನು ಒಳಗೊಂಡು ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ಹೆಣ್ಣು ಮಕ್ಕಳಿಗಾಗಿ ಸಮಾನ ಅವಕಾಶ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ,
ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ. ಸಮಗ್ರ
ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘಟನೆಯಲ್ಲಿ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೂ ಬೋಧನಾ ವರ್ಗದವರು ಇರುವುದರಿಂದ, ಎಲ್ಲಾ ಹಂತದಲ್ಲಿಯೂ ಮಕ್ಕಳಿಗೆ ಸಹಕಾರ ನೀಡುತ್ತಾರೆ.

ನೇರ ನುಡಿಯ ದಿಟ್ಟಗಾರ್ತಿ
ಇವರು ತಮ್ಮೆದುರಿಗೆ ಏನಾದರೂ ಭಾವನಾತ್ಮಕ ಘಟನೆಗಳನ್ನು ಕಂಡುಬಂದಾಗ ನೇರವಾಗಿ ಸ್ಪಂದನೆ ಮಾಡುವ ಜೊತೆಯಲ್ಲಿ ತಮ್ಮಿಂದ ಏನು ಹೇಳಬೇಕೋ ಅದನ್ನು ಹೇಳುವ ಇವರ ಸ್ವಭಾವವನ್ನು ಕಂಡು ಇವರನ್ನು ಕಂಡ ಸಹವರ್ತಿಗಳು ಬಹಳ ಬೋಲ್ಡ್ ಇದ್ದಾರೆ ಇವರು ಎಂದುಕೊಳ್ಳುವ ಜನರುಂಟು. ಆದರೆ ಇವರು ತಮ್ಮಷ್ಟಕ್ಕೆ ತಾವು ತಮ್ಮ ಕಾರ್ಯ ಮಾಡುತ್ತ ಹೊರಟಿರುವ ಇವರ ಬಗ್ಗೆ ಅನೇಕರು ತಾತ್ಸಾರ ಪಟ್ಟಿದ್ದು ಉಂಟು.ಆದರೂ ಇಂತಹ ಘಟನೆಗಳಿಗೆ ಸಂದರ್ಭಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸುತ್ತಿರುವರು.ಇದು ಕೂಡ ಇವರ ಬದುಕಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.ಈ ರೀತಿಯ ಇವರ ವ್ಯಕ್ತಿತ್ವವನ್ನು ಬೋಲ್ಡ ಎಂದು ಕರೆದವರು ಬಹಳ ಜನ.ಇವರ ಧ್ವನಿಯನ್ನು ವೈಭವ ಚಾನೆಲ್ ದವರು ಇವರ ಪರಿಚಯದ ಕುರಿತು ಸಂದರ್ಶನ ಮಾಡಿರುವರು.ಇದರ ಜೊತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಇವರು ಕಾರ್ಯನಿರ್ವಹಿಸುವರು.

ಇವರ ಸೇವೆಯನ್ನು ಗುರುತಿಸಿ ಸಣ್ಣೂರ್ ಕ್ಲಸ್ಟರ್ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ,  ಕರ್ನಾಟಕ ಸರ್ಕಾರ ನೀಡುವ ಕಲಬುರ್ಗಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಇತ್ತೀಚೆಗೆ ಲೂಸಿ ಸಾಲ್ದಾನ್ ದತ್ತಿ ಸೇವಾ ಸಂಸ್ಥೆ ಧಾರವಾಡ ನೀಡಿದ
ಶಿಕ್ಷಕರತ್ನ ರಾಜ ಪ್ರಶಸ್ತಿ, ನಾಡಿನ ಸಮಾಚಾರ ಗೋಕಾಕ್ ಇವರು ಕನ್ನಡ ವಿಭೂಷಣ ರಾಜ್ಯ ಪ್ರಶಸ್ತಿ ಹಾಗೂ ಕಲಬುರ್ಗಿಯ ಜೈ ಕನ್ನಡಿಗರ ಸೇನೆ ಇವರಿಂದ ರಾಜೋತ್ಸವ ಪ್ರಶಸ್ತಿಯನ್ನುವೀರವನಿತೆ ಒನಕೆ ಓಬವ್ವ ಪ್ರಶಸ್ತಿ. ಅಪ್ನಾದೇಶ ಸಂಘಟನೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಬರವಣಿಗೆ ಕುರಿತು ಕುವೆಂಪು ರತ್ನ ಪ್ರಶಸ್ತಿ ಕಲಬುರ್ಗಿಯ ಸಾಹಿತ್ಯ ಸಂಘಟನೆಯವರು ನೀಡಿರುವರು.ಮಹಿಳಾ ದಿನಾಚರಣೆ ದಿನದಂದು ಮಹಿಳಾ ದಿನಾಚರಣೆಯಂದು ಕೂಡ ಸಂಘಟನೆಯವರು ಇವರನ್ನು ಸಂಘಟನೆಯವರು ಸನ್ಮಾನ ಮಾಡಿರುವರು. ಇವರು ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದಿರುವರು.

ಇವರು “ಅಮ್ಮ ನಾನು ಶಾಲೆಗೆ ಹೋಗುವೆ “ಕನ್ನಡ ಕಿರುಚಿತ್ರದಲ್ಲಿ ಅಭಿನಯಿಸಿ ಎಲ್ಲರೂ
ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಹಾಗೂ ೨೦೨೩ ಜನವರಿಯಲ್ಲಿ ಬ್ಯಾಂಕಾಕ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಕಿರುಚಿತ್ರ ಪ್ರದರ್ಶನಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. “ಅಪ್ಪ ನನ್ನ ಹೊಡಿಬೇಡಪ್ಪ “ಕಿರು ಚಿತ್ರದಲ್ಲಿ ಅಭಿನಯಿಸಿದ್ದು. ಇದು ಕೂಡ ಬಿಡುಗಡೆಗೊಂಡು ಉತ್ತಮ ಹೆಸರು ಪಡೆಯಿತು. ೨೦೨೪ ರ ಮಾರ್ಚ ೧೯ ರಂದು ಅಂತರ್ಜಾಲ ತಾಣದಲ್ಲಿ ಬಿಡುಗಡೆಗೊಂಡ ಇವರ ಅಭಿನಯದ ನಾನು ಲೂಸಿ ಲಕ್ಷಾಂತರ ವೀಕ್ಷಕರನ್ನು ಕೇವಲ ಒಂದು ವಾರದಲ್ಲಿ ಪಡೆದಿದೆ.ಜೀವಂತ ದಂತಕತೆ ಶಿಕ್ಷಕಿ ಲೂಸಿ ಸಾಲ್ಡಾನಾ ಅವರ ಬದುಕು ಆಧಾರಿತ ಚಲನಚಿತ್ರದಲ್ಲಿ ನಟಿಸಿದ್ದಾರೆ.ಇತ್ತೀಚಿಗಷ್ಟೇ ಕಲಬುರಗಿಯ ಆಕಾಶವಾಣಿಯ ವನಿತಾ ವಿಹಾರದಲ್ಲಿ ಡಾ.ಸದಾನಂದ ಪೆರ್ಲ ಅವರು ನಂದಿನಿ ಅವರ ಅರ್ಥಪೂರ್ಣ ಸಂದರ್ಶನ ಮಾಡಿದ್ದು ಅದು ಕೂಡ ರಾಜ್ಯವ್ಯಾಪಿ ಪ್ರಸಾರ ಮಾಡಿದ್ದು ಇವರ ಪ್ರತಿಭೆಗೆ ಮತ್ತೊಂದು ರೀತಿಯ ಪ್ರೋತ್ಸಾಹ ಕೂಡ ದೊರೆತಂತಾಯಿತು.

ಅವರು ಬರೆದ ಪುಸ್ತಕ “ಭರವಸೆಯ ಬೆನ್ನೇರಿ”ಹಾಗೂ ಅಭಿಪ್ರೇರಣೆ ಪುಸ್ತಕಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಇವರು ಅನೇಕ ಪುಸ್ತಕಗಳ ಮುನ್ನುಡಿ ಹಾಗೂ ಬೆನ್ನುಡಿಗಳನ್ನು ಬರೆದಿದ್ದಾರೆ.ವಿವಿಧ ಪತ್ರಿಕೆಗಳಲ್ಲಿ ಇವರ ಪ್ರಕಟಿತವಾಗಿವೆ

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯ 3ನೆಯ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಿದ ಸನಬಾಳ್ ಅವರಿಗೆ 3 ನೆ ಜನವರಿ 2026 ರಂದು ಬೆಳ್ಳಿಗೆ 9 ಗಂಟೆಗೆ ತುಮ್ಮಲಪಲ್ಲಿ ಕಲಾಕ್ಷೇತ್ರ ವಿಜಯವಾಡ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು “ಗುರು ಚೈತನ್ಯ ಉಪಾಧ್ಯಾಯ ಸಂಘಂ” ಮಾಹಿತಿ ನೀಡಿದೆ.

ಡಾ. ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group