ಹಳ್ಳೂರ- ಕಾರ್ಮಿಕರ ಜೊತೆ ಅವಿನಾಭಾವ ಸಂಬಂಧವಿಟ್ಟುಕೊಂಡು ನಿರಂತರ ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ವೃತ್ತಿ ಜೀವನವನ್ನು ಮುಗಿಸಿ ನಿವೃತ್ತಿ ಹೊಂದುತ್ತಿರುವ ಕೆಂಪಣ್ಣ ಹೆಬ್ಬಾಳ ಅವರ ವಯೋ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಕಾರ್ಖಾನೆಯ ಸಿಟಿಓ ದಿನೇಶ್ ಶರ್ಮಾ ಹೇಳಿದರು.
ಅವರು ಗೋದಾವರಿ ಬಯೋರಿಪೈನರಿಜ್ ಲಿ , ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೆಂಪಣ್ಣ ಹೆಬ್ಬಾಳ ಅವರ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಒಬ್ಬ ವ್ಯಕ್ತಿ ಶಿಸ್ತು ಅಚ್ಚು ಕಟ್ಟಾಗಿ ಕಪ್ಪು ಚುಕ್ಕೆ ಗುರುತಿಲ್ಲದ ಜೀವನ ನಡೆಸಿದಾಗ ಮಾತ್ರ ಮನುಷ್ಯನಿಗೆ ಬೆಲೆ ಸಿಗುತ್ತದೆ ಎಂದು ಹೇಳಿದರು.
ಮಜದೂರ ಯೂನಿಯನ್ ಅಧ್ಯಕ್ಷ ರವಿ ಕುರುಬರ ಮಾತನಾಡಿ ನೌಕರಿ ಮಾಡುವಂಥ ಪ್ರತಿಯೊಬ್ಬರೂ ವಯೋ ನಿವೃತ್ತಿ ಹೊಂದುವುದು ಸಹಜ ಕೆಂಪಣ್ಣ ಹೆಬ್ಬಾಳ ಅವರು ಮನೆಯ ಜವಾಬ್ದಾರಿ ಕೃಷಿಯ ಜೊತೆಗೆ ನೌಕರಿ ಮಾಡುತ್ತಾ ಜೀವನ ಸಾಗಿಸಿದ್ದು ಹೆಮ್ಮಯ ಸಂಗತಿಯಾಗಿದೆ ಎಂದು ಹೇಳಿದರು.
ನಿವೃತ್ತಿ ಹೊಂದುತ್ತಿರುವ ಕೆಂಪಣ್ಣ ಹೆಬ್ಬಾಳ ಸನ್ಮಾನ ಸ್ವೀಕರಿಸಿ ಮಾತನಾಡಿ 16 ವರ್ಷಗಳ ಕಾಲ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಎಲ್ಲರ ಜೊತೆ ಬೆರೆತು ಕೆಲಸ ಮಾಡಿದ್ದು ಈ ಪವಿತ್ರವಾದ ಸ್ಥಳವನ್ನು ಬಿಟ್ಟು ಹೋಗಲು ಬೇಸರವಾಗುತ್ತಿದೆ ಎಂದು ಹೇಳಿದರು.
ಮೆ ಜಿ ಎಂ ವಿ ಕೆ ಕಿಲಾರಿ ಪುಂಡಲೀಕ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಮಯದಲ್ಲಿ ಎಂ ರಾಮಚಂದ್ರ, ಸಂಗನಗೌಡ ಪಾಟೀಲ, ಚನ್ನಪ್ಪ ಅಥಣಿ, ಪಾಂಡು ಹಂಚಿನಾಳ, ಆನಂದ ಶೇಗುಣಸಿ, ಮುರಿಗೆಪ್ಪ ಮಾಲಗಾರ, ಮಲ್ಲು ಬಳಿಗಾರ ಸೇರಿದಂತೆ ಕಾರ್ಮಿಕರಿದ್ದರು.
ಕಾರ್ಯಕ್ರಮವನ್ನು ಆನಂದ ಕೊಟಬಾಗಿ ನಿರೂಪಿಸಿ, ವಂದಿಸಿದರು.

